ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕುಡಿದ ಮತ್ತಿನಲ್ಲಿ ಅಣ್ಣ, ತಂಗಿಯನ್ನೇ ಬರ್ಬರ ಹತ್ಯೆ ಮಾಡಿದ ವ್ಯಕ್ತಿ!

Murder Case: ರಾಜ್ಯದಲ್ಲಿ ಬೆಚ್ಚಿ ಬೀಳುವ ಘಟನೆಯೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ತಂಗಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಸಂಭವಿಸಿದೆ.

ಸಂಗ್ರಹ ಚಿತ್ರ

ಕೊಡಗು: ರಾಜ್ಯದಲ್ಲಿ ಬೆಚ್ಚಿ ಬೀಳುವ ಘಟನೆಯೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಅಣ್ಣ ಮತ್ತು ತಂಗಿಯನ್ನೇ (Murder Case) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ಸಂಭವಿಸಿದೆ. ಕುಂದಚೇರಿ ಗ್ರಾಮದ ನಿವಾಸಿಗಳಾದ ಅಡಿಯರ ಯಶೋಧಾ (45) ಮತ್ತು ಕುಂರಾಮ (45) ಕೊಲೆಯಾದ ದುರ್ದೈವಿಗಳು. ಇವರಿಬ್ಬರನ್ನು ಚಂದು (65) ಎಂಬಾತ ಕುಡಿದ ಮತ್ತಿನಲ್ಲಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಚಂದುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದ್ಯಪಾನದ ವಿಚಾರವಾಗಿ ಅಥವಾ ಕೌಟುಂಬಿಕ ಕಲಹದಿಂದ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದೇ ಕುಟುಂಬದ ಇಬ್ಬರು ಹತ್ಯೆಗೀಡಾಗಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರಿನಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. 68 ಬಾರಿ ಮಚ್ಚಿನಿಂದ ಹೊಡೆದು ಮನಸೋ ಇಚ್ಚೆ ಥಳಿಸಿದ್ದಾರೆ. ಸಂತೋಷ್ ಎಂಬಾತನ ಮೇಲೆ ಮೂವರು ಯುವಕರು ದಾಳಿ ಮಾಡಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಮಾರ್ಚ್ 09 ಸೋಮವಾರ ಮಾಗಡಿ ರೋಡ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ ಐಐಎಸ್‌ಸಿ ನಿವೃತ್ತ ಪ್ರೊಫೆಸರ್ ಕುಟುಂಬದ ತ್ರಿವಳಿ ಕೊಲೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಅದೃಷ್ಟವಶಾತ್​ ಸಂತೋಷ್ ಜೀವ ಉಳಿದಿದೆ. ಮಚ್ಚಿನಿಂದ ಚುಚ್ಚಿದ ದುಷ್ಕರ್ಮಿಗಳು ಬಳಿಕ ಡ್ಯಾನ್ಸ್ ಮಾಡಿ ವಿಕೃತಿ ಮೆರೆದಿದ್ದಾರೆ. ಶರತ್ ಆ್ಯಂಡ್​​ ಗ್ಯಾಂಗ್ ನಿಂದ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಅಣ್ಣನ ಕೊಲೆಯ ಪ್ರತೀಕಾರಕ್ಕೆ ಮಾರಕಾಸ್ತ್ರದಿಂದ ಅಗ್ರಹಾರ ದಾಸರಹಳ್ಳಿ ನಿವಾಸಿ ಸಂತೋಷ್ ಮೇಲೆ ಶರತ್ ಅಂಡ್ ಗ್ಯಾಂಗ್​ ಅಟ್ಯಾಕ್ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. 2024ರಲ್ಲಿ ಸಂತೋಷ್​​ನಿಂದ ಮೋಹನ್ ಎಂಬಾತನ ಕೊಲೆ ನಡೆದಿತ್ತು. ಕಾರಿನ ವಿಚಾರಕ್ಕೆ ಇಬ್ಬರ ನಡುವೆ ಬೆಂಗಳೂರಿನಲ್ಲಿ ಗಲಾಟೆ ನಡೆದಿದೆ.

Vishakha Bhat Heggar

View all posts by this author