ಬಿಹಾರ,ಜು.30: ಕ್ಲುಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ಆಕೆಯ ಮೈದುನನೇ ಅತ್ಯಂತ ಕ್ರೂರವಾಗಿ ಕೊಚ್ಚಿ ಕೊಂದ ಘಟನೆಯೊಂದು ನಡೆದಿದೆ. ಪಾರ್ಸಾ ಬಿಘಾ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾದ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕೇವಲ ಊಟ ಬಡಿಸುವುದು ತಡವಾಯಿತು ಎನ್ನುವ ಕಾರಣಕ್ಕೆ 25 ವರ್ಷದ ಮಹಿಳೆಯನ್ನು ಆಕೆಯ ಮೈದುನ ಕೊಡಲಿಯಿಂದಲೇ ತಲೆ ಕಡಿದಿದ್ದಾನೆ. ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಕುಟುಂಬದ ಇತರ ಸದಸ್ಯರು ಭತ್ತ ನಾಟಿ ಮಾಡಲೆಂದು ಹೊಲಗಳಿಗೆ ಹೋಗಿದ್ದರು. ಆಕೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಅನ್ಶು ಎಂದು ಗುರುತಿಸಲಾಗಿದ್ದು ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆಕೆಯನ್ನು ಕೊಂದ ನಂತರ, ಆರೋಪಿಯೂ ಆಕೆಯ ತಲೆಯನ್ನು ಕತ್ತರಿಸಿ ಮನೆಯ ಬಳಿಯ ಆಲದ ಮರಕ್ಕೆ ನೇತು ಹಾಕಿದ್ದ ಎಂದು ತಿಳಿದು ಬಂದಿದೆ. ಕತ್ತರಿಸಿದ ತಲೆ ಮರದಲ್ಲಿ ನೇತಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಈ ಕೊಲೆ ಬೆಳಕಿಗೆ ಬಂದಿದೆ.
Viral Video: ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್ ಝೀ ಉದ್ಯೋಗಿ
ಹೊಲದ ಕೆಲಸ ಮುಗಿಸಿ ಮನೆಗೆ ಬಂದ ಮೈದುನ ಕುನಾಲ್ ಕುಮಾರ್ ಎಂಬಾತ ಊಟ ಬಡಿಸಲು ಹೇಳಿದ್ದಾನೆ. ಊಟ ಬಡಿಸಿದ್ದು ತಡವಾಯಿತು ಎನ್ನುವ ಕಾರಣಕ್ಕೆ ಆತ ಜಗಳ ಮಾಡಲು ಮುಂದಾಗಿದ್ದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.. ಇದರಿಂದ ಕೋಪಗೊಂಡ ಕುನಾಲ್, ಹರಿತವಾದ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿದ್ದು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕ ಬಳಕೆದಾರರು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಬಳಕೆದಾರರೊಬ್ಬರು ಭಾರತೀಯ ಮಹಿಳೆಯರಿಗೆ ಶಸ್ತ್ರಾಸ್ತ್ರಗಳನ್ನು ಅನುಮತಿಸಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು ಮಹಿಳೆಯರು ಪುರುಷರ ಸೇವೆ ಮಾಡಬೇಕೆಂದು ನಿಯಮ ಇದೆಯೇ? ಎಂದು ಕ್ರೌರ್ಯದ ವಿರುದ್ಧ ಕಿಡಿಕಾರಿದ್ದಾರೆ.