ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಸುವಿನ ಕಾಲನ್ನು ಟ್ರಕ್‌ಗೆ ಕಟ್ಟಿ ಮೀಟರ್‌ಗಟ್ಟಲೆ ಎಳೆದೊಯ್ದ ಪಾಪಿ

Crime News: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಪ್ರಾಣಿ ಹಿಂಸೆಯ ಕ್ರೂರ ಕೃತ್ಯ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಕ್ ಚಾಲಕನೊಬ್ಬ ಹಸುವಿನ ಕಾಲನ್ನು ತನ್ನ ವಾಹನದ ಹಿಂದಕ್ಕೆ ಕಟ್ಟಿ ಹಲವು ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿರುವ ಆಘಾತಕಾರಿ ಘಟನೆ ನಡೆದಿದೆ. ಚಾಲಕನನ್ನು ತಕ್ಷಣ ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಮೆಟಾ ಎಐ ಚಿತ್ರ

ಭುವನೇಶ್ವರ, ಏ. 6: ಒಡಿಶಾದ (Odisha) ಮಯೂರ್‌ಭಂಜ್ ಜಿಲ್ಲೆಯಲ್ಲಿ ಪ್ರಾಣಿ ಹಿಂಸೆಯ ಘೋರ ಕೃತ್ಯ ಸಾರ್ವಜನಿಕರ ತೀವ್ರ ಆಕ್ರೋಶ ಕಾರಣವಾಗಿದೆ. ಟ್ರಕ್ ಚಾಲಕನೊಬ್ಬ ಹಸುವನ್ನು ತನ್ನ ವಾಹನದ ಹಿಂದಕ್ಕೆ ಕಟ್ಟಿ ಹಲವಾರು ಮೀಟರ್‌ಗಳಷ್ಟು ಎಳೆದುಕೊಂಡು ಹೋಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ-49ರಲ್ಲಿ ಈ ಘಟನೆ ನಡೆದಿದ್ದು, ಚಾಲಕನನ್ನು ತಕ್ಷಣ ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ (Crime News).

ಹಸುವಿನ ಹಿಂಗಾಲುಗಳನ್ನು ಹಗ್ಗದಿಂದ ಕಟ್ಟಿ ಟ್ರಕ್‌ನ ಹಿಂಭಾಗಕ್ಕೆ ಬಿಗಿಗೊಳಿಸಲಾಯಿತು. ನಂತರ ರಸ್ತೆಯುದ್ದಕ್ಕೂ ಎಳೆದೊಯ್ಯಲಾಯಿತು. ಇದರಿಂದಾಗಿ ಪರಿಣಾಮವಾಗಿ ಹಸುವಿಗೆ ಭೀಕರ ಗಾಯಗಳಾಗಿವೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ಈ ವಿಡಿಯೊದಲ್ಲಿ, ಹಸುವಿನ ಒಂದು ಕಾಲು ಕಿತ್ತು ಬಂದಿದ್ದು, ರಸ್ತೆಯಲ್ಲಿ ಎಳೆದೊಯ್ದ ಪರಿಣಾಮ ದೇಹವು ತೀವ್ರವಾಗಿ ವಿರೂಪಗೊಂಡಿದ್ದು ಕಂಡು ಬಂದಿದೆ.

ಪತ್ನಿಯ ಆತ್ಮಹತ್ಯೆ ಸುದ್ದಿ ತಿಳಿದು ಧಾವಿಸಿ ಬರುವಾಗ ಆಕ್ಸಿಡೆಂಟ್‌, ಪತಿಯೂ ಸಾವು!

ಘಟನೆ ವಿವರ

ಆರಂಭದಲ್ಲಿ ಟ್ರಕ್‌ಗೆ ಡಿಕ್ಕಿಯಾಗಿ ಹಸು ಮೃತಪಟ್ಟಿದೆ. ಸ್ಥಳೀಯರು ರಸ್ತೆಯಿಂದ ಹಸುವಿನ ಮೃತದೇಹ ವಿಲೇವಾರಿ ನಡೆಸುವಂತೆ ಸೂಚಿಸಿದರು. ಈ ವೇಳೆ ಚಾಲಕ ಹಸುವಿನ ಮೃತದೇಹವನ್ನು ಸೂಕ್ತವಾಗಿ ಸಾಗಿಸುವ ಬದಲು ಮನುಷತ್ವ ಮರೆತು ಅದನ್ನು ಟ್ರಕ್‌ಗೆ ಕಟ್ಟಿ ದರ ದರ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಹಸುವಿನ ಕಾಲು ಕಿತ್ತು ಬಂದಿದೆ.

ಟ್ರಕ್‌ ಚಾಲಕ ವರ್ತನೆ ಬಗ್ಗೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ಕಾನೂನು ಪ್ರಕಾರ ನ್ಯಾಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸೀಬೆ ಹಣ್ಣುಕದ್ದಿದ್ದಕ್ಕೆ ಬಾಲಕಿಯನ್ನು ಸರಪಳಿಯಲ್ಲಿ ಕಟ್ಟಿ ಹಲ್ಲೆ

ಮರದಿಂದ ಸೀಬೆ ಹಣ್ಣುಗಳನ್ನು ಕಿತ್ತಿದ್ದಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಅಪ್ರಾಪ್ತ ಬಾಲಕಿಯನ್ನು ಕಟ್ಟಿಹಾಕಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯು ಬಾಲಕಿಯನ್ನು ತನ್ನ ಮನೆಯೊಳಗೆ ಕರೆದೊಯ್ದು, ಸರಪಳಿಯಿಂದ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಯುವಕನೊಬ್ಬ ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ವೈರಲ್‌ ಆಗಿದೆ.