ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

Viral News: ಅಮೆರಿಕದ ಮಿಚಿಗನ್ ನಲ್ಲಿ ಸಾಕು ಗಿಣಿಯೊಂದು ಅಪರಾಧಿಯನ್ನು ಪತ್ತೆ ಹಚ್ಚಿದ ಘಟನೆಯೊಂದು ನಡೆದಿದೆ. ಮನೆಯ ಯಜಮಾನನ ಕೊಲೆಯನ್ನು ಕಣ್ಣಾರೆ ಕಂಡ ಗಿಳಿಯೂ ಮಾಲೀಕರ ಸಾವಿಗೆ ಸಂಬಂಧಿಸಿದ ವಾಕ್ಯವನ್ನು ಪದೇ ಪದೇ ಹೇಳುವ ಮೂಲಕ ಕೊಲೆಗೆ ಸಾಕ್ಷಿ ನೀಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಂಗ್ರಹ ಚಿತ್ರ

ಮಿಚಿಗನ್,ಮೇ.2: ಕೊಲೆ ಪ್ರಕರಣ ಅಂದಾಗ ಪೊಲೀಸರು ಹಲವು ಆಯಾಮದಲ್ಲಿ ರಹಸ್ಯವಾಗಿ ಕಾರ್ಯಾಚರಣೆ ಮಾಡಿ ಪತ್ತೆ ಹಚ್ಚುವುದನ್ನು ನೀವು ಕೇಳಿರಬಹುದು. ಆದರೆ ಅಮೆರಿಕದ ಮಿಚಿಗನ್ ನಲ್ಲಿ ಸಾಕು ಗಿಣಿಯೊಂದು ಅಪರಾಧಿಯನ್ನು ಪತ್ತೆ ಹಚ್ಚಿದ ಘಟನೆಯೊಂದು ನಡೆದಿದೆ. ಮನೆಯ ಯಜಮಾನನ ಕೊಲೆಯನ್ನು ಕಣ್ಣಾರೆ ಕಂಡ ಗಿಳಿಯೂ ಮಾಲೀಕರ ಸಾವಿಗೆ ಸಂಬಂಧಿಸಿದ ವಾಕ್ಯ ವನ್ನು ಪದೇ ಪದೇ ಹೇಳುವ ಮೂಲಕ ಕೊಲೆಗೆ ಸಾಕ್ಷಿ ನೀಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

2015 ರಲ್ಲಿ ಯುಎಸ್‌ನಲ್ಲಿ ನಡೆದ ಕೊಲೆಗೆ ಮುಖ್ಯವಾದ ತಿರುವೊಂದು ಸಿಕ್ಕಿದ್ದು ಕುಟುಂಬದ ಸಾಕು ಗಿಳಿಯು ಕೊಲೆಗೆ ಸಂಬಂಧಿಸಿದ ಪದಗಳನ್ನು ಪದೇ ಪದೇ ಅನುಕರಣೆ ಮಾಡಿದೆ. ಮಿಚಿಗನ್‌ನ ಸ್ಯಾಂಡ್ ಲೇಕ್‌ನ 45 ವರ್ಷದ ಮಾರ್ಟಿನ್ ಡುರಾಮ್ಮನೆಯಲ್ಲೇ ಹೆಣವಾಗಿ ಬಿದ್ದಿದ್ದರು. ಗುಂಡು ಹಾರಿಸಿದ ಸಾಕ್ಷಿಗಳು ಕೂಡ ಪತ್ತೆಯಾಗಿದ್ದು ಮಾರ್ಟಿನ್ ಅವರ ಪತ್ನಿ ಗ್ಲೆನ್ನಾ ಡುರಾಮ್ ಗುಂಡೇಟಿನಿಂದ ಗಾಯಗೊಂಡಿದ್ದರು.

ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಮಾಡಿ ಹೊರ ಗಿನವರೇ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದರು. ಆದರೆ ಮನೆಯ ಗಿಳಿಯೊಂದು ಈ ರಹಸ್ಯವನ್ನು ಪತ್ತೆ ಮಾಡಿದೆ. ಅದು ಮನೆಯಲ್ಲಿ ಗಂಡ ಹೆಂಡತಿ ಜಗಳದಂತೆ ವಿಚಿತ್ರವಾಗಿ ಕೂಗಲು ಆರಂಭ ಮಾಡಿದ್ದು ಮನೆಯ ಯಜಮಾನನ ಧ್ವನಿಯನ್ನು ಅನುಕರಣೆ ಮಾಡುತ್ತಾ ಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಹಕ್ಕಿಯೂ "ಗುಂಡು ಹಾರಿಸಬೇಡ ಎಂದು ಹೇಳುತ್ತಲೇ ಇತ್ತು.‌ ಇದು ಮಾರ್ಟಿನ್ ಸಾವನ್ನಪ್ಪುವ ಮೊದಲು ಆಡಿದ ಮಾತುಗಳಾಗಿತ್ತು.

Viral Video: ಏರ್‌ಪೋರ್ಟ್‌ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್‌; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ

ಈ ಮಾತಿನಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಕ್ಕಿಯ ಹೇಳಿಕೆಗಳು ನ್ಯಾಯಾಲಯದ ಸಾಕ್ಷಿಯಾಗಲು ಸಾಧ್ಯ ವಾಗದಿದ್ದರೂ, ತನಿಖೆಯ ಸಮಯದಲ್ಲಿ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಪೊಲೀಸರು ತನಿಖೆಯಲ್ಲಿ, ಪತ್ನಿ ಗ್ಲೆನ್ನಾ ಅವರೇ ಪತಿಯನ್ನು ಕೊಲೆ ಮಾಡಿ ಅವರು ಗುಂಡು ಹಾರಿಸಿಕೊಂಡರು ಎಂದು ಬಯಲಾಯಿತು. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎಂಬುದು ತಿಳಿದು ಬಂದಿದೆ.

ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದಾಗ, ಗುಂಡೇಟಿನ ಅವಶೇಷಗಳು, ಸಾಕ್ಷಿಗಳ ಹೇಳಿಕೆ ಹಾಗೂ‌ ಆರ್ಥಿಕ ಸಮಸ್ಯೆಗಳ ಬಗ್ಗೆ ಅನೇಕ ಪುರಾವೆ ಸಿಕ್ಕಿದೆ. 2017 ರಲ್ಲಿ ನ್ಯಾಯಾಲಯ ಪತ್ನಿ ಗ್ಲೆನ್ನಾ ಡ್ಯೂರಮ್ ಅವರನ್ನು ಅಪರಾಧಿ ಎಂದು ಘೋಷಿಸಿತು.