ಜೆರುಸಲೇಮ್: ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಶಿಕ್ಷಕಿಯನ್ನು ಸೇವೆಯಿಂದ ವಜಾ (Teacher Fired) ಮಾಡಲಾಗಿದೆ. ಇಸ್ರೇಲ್‍ನಲ್ಲಿ (Israel) ಈ ಆಘಾತಕಾರಿ ಘಟನೆ ನಡೆದಿದೆ. ಪೆಟಾ ಟಿಕ್ವಾದ 43 ವರ್ಷದ ಇಂಗ್ಲಿಷ್ ಶಿಕ್ಷಕಿಯೊಬ್ಬರು 17 ವರ್ಷದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ(Physical relationship) ನಡೆಸಿರುವುದನ್ನು ಒಪ್ಪಿಕೊಂಡ ನಂತರ ಆಕೆಯನ್ನು ನಾಗರಿಕ ಸೇವಾ ಆಯೋಗವು, ದೋಷಿ ಎಂದು ಘೋಷಿಸಿದೆ.
ಇಬ್ಬರು ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಮತ್ತೊಬ್ಬ ವಿದ್ಯಾರ್ಥಿ ನೋಡಿದ್ದ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಯಿತು. ಈ ವೇಳೆ ಹೆಸರು ಬಹಿರಂಗಪಡಿಸದ ಮಹಿಳಾ ಶಿಕ್ಷಕಿಯು ಇಬ್ಬರು ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಯಿತು. ಶಿಕ್ಷಕಿಯನ್ನು ಮತ್ತೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.
ಇನ್ನು ಮಾಧ್ಯಮದೊಂದಿಗೆ ನಡೆದ ಸಂವಾದದ ಸಮಯದಲ್ಲಿ ಶಿಕ್ಷಕಿ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾಗಿ ತಿಳಿದುಬಂದಿದೆ. ಘಟನೆಯ ಬಗ್ಗೆ ಶಿಕ್ಷಕಿ ವಿಷಾದ ವ್ಯಕ್ತಪಡಿಸಿದ್ದಾಗಿ ತಿಳಿದುಬಂದಿದೆ. ಪ್ರಕರಣವು ಕೋರ್ಟ್ ಮೆಟ್ಟಿಲೇರಿದಾಗ ನಾಗರಿಕ ಸೇವಾ ಆಯೋಗದ ನ್ಯಾಯಮಂಡಳಿಯು, ಮಹಿಳೆಯು ಒಬ್ಬ ಶಿಕ್ಷಕಿಯಾಗಿ ವೃತ್ತಿಪರ ಗಡಿಗಳನ್ನು ಮೀರಿದ್ದಾರೆ ಎಂದು ಹೇಳಿದ ನಂತರ ಆಕೆಯನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು.
ಇದನ್ನೂ ಓದಿ: Viral Video: ತಾಜ್ ಮಹಲ್ ಒಳಗಿನ ಯಾರೂ ಕಂಡಿರದ ದೃಶ್ಯ ರೆಕಾರ್ಡ್! ಶಹಜಹಾನ್- ಮುಮ್ತಾಜ್ ಸಮಾಧಿಗಳ ವಿಡಿಯೊ ವೈರಲ್
ಮೊದಲಿಗೆ ಶಿಕ್ಷಕಿಯು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದಳು. ನಂತರ ಕ್ರಮೇಣ ಅವರೊಂದಿಗೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡಳು. ನಂತರ ಇಬ್ಬರನ್ನೂ ತನ್ನ ನಿವಾಸಕ್ಕೆ ಆಹ್ವಾನಿಸಿ, ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದನ್ನು ಮತ್ತೊಬ್ಬ ವಿದ್ಯಾರ್ಥಿ ನೋಡಿ, ಇತರರಿಗೆ ಮಾಹಿತಿ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ನಡವಳಿಕೆ ಒಳ್ಳೆಯದಲ್ಲ, ಇದು ಇಡೀ ಶಿಕ್ಷಣ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಗೆ, ವಿಶೇಷವಾಗಿ ತಮ್ಮ ಮಕ್ಕಳನ್ನು ಶಾಲೆಯ ಶಿಕ್ಷಕರಿಗೆ ವಹಿಸುವ ಪೋಷಕರ ನಂಬಿಕೆಗೆ ದ್ರೋಹ ಬಗೆಯುತ್ತದೆ ಎಂದು ನ್ಯಾಯಮಂಡಳಿ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಶಿಕ್ಷಕಿ ತಾನು ಭಾಗವಹಿಸುವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಹೆಚ್ಚಾಗಿ ಕರೆದುಕೊಂಡು ಹೋಗುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆಯ ಸಮಯದಲ್ಲಿ, ತನ್ನ ಪತಿ ಮೀಸಲು ಕರ್ತವ್ಯದ ಮೇಲೆ ಹೊರಗಿರುವುದರಿಂದ ಒಂಟಿತನ ಕಾಡಿದೆ. ಹೀಗಾಗಿ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಶಿಕ್ಷಕಿ ತಿಳಿಸಿದ್ದಾಳೆ. ಅಂದಹಾಗೆ, ಈಕೆಗೆ 11 ಮತ್ತು 8 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.