ಬೆಂಗಳೂರು: ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ಚಾಕು ಇರಿದು, ಬೈಕ್ ಕಸಿದುಕೊಂಡು ಪರಾರಿಯಾದ (Robbery Case) ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಬಂಜಾರ ಲೇಔಟ್‌ನಲ್ಲಿ ನಡೆದಿದೆ. ಬಿಬಿಎ ಓದುತ್ತಾ ಫ್ಲಿಪ್ ಕಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಧೀರಜ್ ಎಂಬಾತ ನಿನ್ನೆ ಭಾನುವಾರವಾದ ಹಿನ್ನೆಲೆ ಹೊಸಕೋಟೆ ಬಿರಿಯಾನಿ ತಿನ್ನಲೆಂದು ಬೆಳ್ಳಗ್ಗೆ 3.30ರ ಸುಮಾರಿಗೆ ಬೈಕ್ನಲ್ಲಿ ಹೊರಟಿದ್ದ ಈ ವೇಳೆ ಘಟನೆ ನಡೆದಿದೆ.
ಭಾನುವಾರ ಬೆಳಗಿನ ಜಾವ 3 ಗಂಟೆಗೆ ಈ ದಾಳಿ ನಡೆದಿದೆ. ಬೈಕ್‌ಗೆ ಅಡ್ಡ ಬಂದ ವಿಚಾರಕ್ಕೆ ಆರೋಪಿಗಳು ಹಾಗೂ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ತಿರುಗಿ ಚಾಕು ಇರಿಯುವ ಮಟ್ಟಕ್ಕೆ ಹೋಗಿತ್ತು. ಗಾಯಗೊಂಡಿದ್ದ ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಚಾಕು ಇರಿತದಿಂದ ವಿದ್ಯಾರ್ಥಿಯ ಬೆನ್ನಿಗೆ ಹಾಗೂ ತೊಡೆ ಭಾಗಕ್ಕೆ ಗಾಯಗಳಾಗಿದೆ.
ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಭುವನ್ ಹಾಗೂ ಮಿಥುನ್ ಎಂಬುವವರೇ ವಿದ್ಯಾರ್ಥಿಗೆ ಚಾಕು ಹಾಕಿದವರು ಎಂದು ಗುರುತಿಸಲಾಗಿದೆ.
ಪ್ರತ್ಯೇಕ ಘಟನೆಯಲ್ಲಿ, ದಿಟ್ಟಿಸಿದ ನೋಡಿದ ಎಂಬ ಕಾರಣಕ್ಕೆ ಇಬ್ಬರ ನಡುವೆ ಶುರುವಾದ ಜಗಳ ಚಾಕು ಇರಿತದಲ್ಲಿ ಅಂತ್ಯ ಕಂಡ ಘಟನೆ ಚನ್ನಗಿರಿಯಲ್ಲಿ ನಡೆದಿದೆ. ಸೈದರ್ ಮುಹಲ್ಲಾ ನಿವಾಸಿಗಳಾದ ನವಾಜ್, ಅಮಾನ್, ಅಯಾನ್, ರುಮಾಲ್ ಮತ್ತು ಜೈನುಲ್ಲಾ ಗಾಯಗೊಂಡವರು. ಇವರಿಗೆ ಚನ್ನಗಿರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೇಮಿಯನ್ನು ಕೊಂದು ಡ್ರಮ್‌ನಲ್ಲಿ ತುಂಬಿ ಚರಂಡಿಗೆ ಎಸೆದ ದಂಪತಿ; ಕೊಲೆ ರಹಸ್ಯ ಬೆಳಕಿಗೆ ಬಂದಿದ್ದೇ ರೋಚಕ
ತನ್ನ ಪತ್ನಿಯೊಂದಿಗೆ ನವಾಜ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಚನ್ನಗಿರಿ ನಿವಾಸಿ ರುಮಾಲ್ ಶಂಕಿಸಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಅನೇಕ ಬಾರಿ ಜಗಳ ನಡೆದಿತ್ತು. ಸೋಮವಾರ ಸಂಜೆ ಪಟ್ಟಣದ ಸಂತೆ ಮೈದಾನದ ಬಳಿ ಇಬ್ಬರೂ ಮುಖಾಮುಖಿಯಾಗಿದ್ದರು. ವೇಳೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿದರು ಎಂಬ ಕಾರಣಕ್ಕೆ ಮಾತಿನ ಚಕಮಕಿ ಶುರುವಾಗಿ ಇಬ್ಬರೂ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅವರ ಸ್ನೇಹಿತರಿಗೂ ಚಾಕು ತಗುಲಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.