ಲಖನೌ, ಡಿ. 17: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಯುವಕನೊಬ್ಬ ಅನುಚಿತವಾಗಿ ಸ್ಪರ್ಶಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ ನಡೆದಿದೆ. ಇದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈಗ ವೈರಲ್ ಆಗಿರುವ ವಿಡಿಯೊದ ಆರಂಭದಲ್ಲಿ ಇಬ್ಬರು ಯುವತಿಯರು ವಸತಿ ಪ್ರದೇಶದ ಲೇನ್‌ನಲ್ಲಿ ತಮ್ಮ ಮನೆಯ ಗೇಟ್‌ನಲ್ಲಿ ನಿಂತು ಮಾತನಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಬೈಕ್‌ನಲ್ಲಿ ಇಬ್ಬರು ಪುರುಷರು ಬಂದಿದ್ದಾರೆ. ಬೈಕ್ ಸ್ವಲ್ಪ ಸಮಯದವರೆಗೆ ನಿಧಾನವಾಗುತ್ತದೆ. ಆಗ ಹಿಂಬದಿಯ ಸವಾರ ಇಳಿದು ಇಬ್ಬರು ಯುವತಿಯರ ಬಳಿಗೆ ಹೋಗಿದ್ದಾನೆ. ನಂತರ ಅವನು ಒಬ್ಬ ಹುಡುಗಿಯ ಎದೆಯನ್ನು ಮುಟ್ಟಿ ಬೈಕ್ ಹತ್ತಿ ಪರಾರಿಯಾಗಿದ್ದಾನೆ.
ಯುವತಿಯು ತಕ್ಷಣ ಅಸಭ್ಯ ನಡವಳಿಕೆ ಎಂದು ಕೂಗಿದ್ದಾಳೆ. ಘಟನೆಯಿಂದ ಆಕೆ ನಡುಗಿ ಹೋಗಿದ್ದಾಳೆ. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಝಾನ್ಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ವಿಡಿಯೊ ಇಲ್ಲಿದೆ:
ಮತ್ತೊಂದು ಆಘಾತಕಾರಿ ಸಾರ್ವಜನಿಕ ಕಿರುಕುಳ ಪ್ರಕರಣ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಸಿಕಂದ್ರ ರಾವ್ ಪಟ್ಟಣದಲ್ಲಿ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ರಸ್ತೆಬದಿಯಲ್ಲಿ ನಡೆಯುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ಘಟನೆಯೂ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪಾರ್ಟಿಗೆ ದಾಳಿ ಮಾಡಿ ಹಣ ಕೇಳಿದ ಪೊಲೀಸರು, ಬಾಲ್ಕನಿಯಿಂದ ಜಿಗಿದ ಯುವತಿ
ಇಬ್ಬರು ಮಹಿಳೆಯರು ರಸ್ತೆಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದರು. ಕೆಲವು ಸೆಕೆಂಡುಗಳ ನಂತರ, ಮೂವರು ಯುವಕರನ್ನು ಹೊತ್ತ ಬೈಕ್ ವಿರುದ್ಧ ದಿಕ್ಕಿನಿಂದ ಅವರ ಬಳಿಗೆ ಬಂದಿದೆ. ಬೈಕ್ ಅಪಾಯಕಾರಿಯಾಗಿ ಹತ್ತಿರ ಬರುತ್ತಿದ್ದಂತೆ, ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಕೈಯನ್ನು ಚಾಚಿ ಒಬ್ಬ ಮಹಿಳೆಯ ಮುಖಕ್ಕೆ ಹೊಡೆದಿದ್ದಾನೆ. ಹಲ್ಲೆ ಮಾಡಿದವರು ತಕ್ಷಣವೇ ವೇಗವಾಗಿ ಓಡಿದ್ದಾರೆ. ಘಟನೆಯಿಂದ ಯುವತಿ ಆಘಾತಕ್ಕೊಳಗಾಗಿದ್ದಾಳೆ.
ಇಲ್ಲಿದೆ ವಿಡಿಯೊ:
ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧನ ಬಂಧನ
ಏಳು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದೇವಾಲಯದ ವೃದ್ಧ ಅರ್ಚಕರೊಬ್ಬರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಡಿಯೋರಿಯಾ ಜಿಲ್ಲೆಯ ಬಂಕಟಾ ಪೊಲೀಸ್ ಠಾಣೆಯು ಏಳು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರದೇಶದ ಹಳ್ಳಿಯೊಂದರ ದೇವಾಲಯದ ವೃದ್ಧ ಅರ್ಚಕನನ್ನು ಬಂಧಿಸಲಾಗಿದೆ.
ಮಗುವಿನ ಸ್ಥಿತಿ ಹದಗೆಟ್ಟಾಗ, ಕುಟುಂಬಕ್ಕೆ ಈ ಬಗ್ಗೆ ತಿಳಿದುಬಂದಿತು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕುಟುಂಬದ ದೂರಿನ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.