ಚಿಕ್ಕಬಳ್ಳಾಪುರ: ಟಾಟಾ ಏಸ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತವಾಗಿ ಟಾಟಾ ಏಸ್ ನಲ್ಲಿದ್ದ ಆರು ಮಂದಿ ಕೃಷಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಾಯನಹಳ್ಳಿ ಗೇಟ್ ಬಳಿ ನಡೆದಿದೆ.
ಗಂಭೀರ ಗಾಯಗಳಾಗಿದ್ದರೂ ಯಾವುದೇ ಪ್ರಾಣ ಹಾನಿಯಾಗದೇ ಭಾರಿ ಅನಾಹುತ ತಪ್ಪಿದೆ. ಘಟನೆ ತಾಲ್ಲೂಕಿನ ನಾಯನಹಳ್ಳಿ ಗೇಟ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಅಜ್ಜವಾರ ಗ್ರಾಮದ 6 ಜನ ಕೂಲಿ ಕಾರ್ಮಿಕ ಮಹಿಳೆಯ ರಾದ ವಿದ್ಯಾ, ಸಾವಿತ್ರಮ್ಮ, ಭಾವನ, ನಾಗಮ್ಮ, ಲಕ್ಶ್ಮಮ್ಮ, ಮುನಿರತ್ನ ಸೇರಿ 10 ಮಂದಿ ಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೈತರ ತೋಟದಲ್ಲಿ ಆಲೂಗಡ್ಡೆ ಕೀಳಲು ಕರೆದುಕೊಂಡು ಹೋಗಿದ್ದ ಟಾಟಾ ಎಸ್ ಗಾಡಿ ಮರಳಿ ಕೂಲಿ ಕಾರ್ಮಿಕರನ್ನು ಅವರ ಸ್ವಗ್ರಾಮ ಅಜ್ಜವಾರಕ್ಕೆ ಬಿಡಲು ವಾಪಸ್ಸು ಬರುವ ಸಂದರ್ಭದಲ್ಲಿ ನಾಯನಹಳ್ಳಿ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.
ಇದನ್ನೂ ಓದಿ: road accident: ಹೆಲ್ಮೆಟ್ ಧರಿಸದೆ ಬುಲೆಟ್ ಚಾಲನೆ; ಹಂಪ್‌ನಲ್ಲಿ ಬೈಕ್ ಎಗರಿ ಯುವತಿ ಸಾವು, ಇನ್ನೊಬ್ಬಾಕೆ ಗಂಭೀರ
ಚಿಕ್ಕಬಳ್ಳಾಪುರದಿಂದ ಶಿಢ್ಲಘಟ್ಟ ಕಡೆ ತೆರಳುತ್ತಿದ್ದ ಕ್ಯಾಂಟರ್ ಮತ್ತು ಟಾಟಾ ಏಸ್ ನಡುವೆ ಢಿಕ್ಕಿಯಾಗಿದೆ. ಈ ವೇಳೆ, ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನ ನುಜ್ಜು ಗುಜ್ಜಾಗಿ ಗಾಡಿ ಯಲ್ಲಿದ್ದ 10 ಜನ ಮಹಿಳಾ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
2025 ಡಿಸೆಂಬರ್ 25ರಂದು ಇದೇ ಗೇಟ್ ಬಳಿ ಕ್ರಿಸ್ ಮಸ್ ಆಚರಣೆ ಮುಗಿಸಿಕೊಂಡು ಒಂದೇ ಬೈಕಿನಲ್ಲಿ ಬಂದ ನಾಲ್ಕು ಮಂದಿ ಯುವಕರಿಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮರಣ ಹೊಂದಿದ್ದರು. ಈ ಘಟನೆ ಹಸಿಯಾಗಿರುವಾಗಲೇ ಟಾಟಾ ಏಸ್ ಅಪಘಾತವಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.