ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯ ದಿನವೇ ಅಪಘಾತ; ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದ ವಧು ಸಾವು

ಮದುವೆಯ ದಿನವೇ ಅಪಘಾತದಲ್ಲಿ ವಧು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬ್ಯೂಟಿ ಪಾರ್ಲರ್‌ಗೆ ಸಹೋದರನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ವಧು ರಸ್ತೆಗೆ ಬಿದಿದ್ದು, ಆಕೆಯ ಮೇಲೆಯೇ ಟ್ರೇಲರ್ ಟ್ರಕ್ ಹರಿದು ಹೋಗಿದೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ಉತ್ತರಪ್ರದೇಶ: ಕೆಲವೇ ಗಂಟೆಗಳಲ್ಲಿ ಆಕೆ ಹಸೆಮಣೆ ಇರಬೇಕಿತ್ತು. ಆದರೆ ವಿಧಿ ಆಕೆಯಿಂದ ಎಲ್ಲವನ್ನೂ ಕಸಿದುಕೊಂಡಿತ್ತು. ಅಪಘಾತವೊಂದರಲ್ಲಿ (road accident) ವಧುವೊಬ್ಬಳು ಸಾವನ್ನಪ್ಪಿದ (Bride dead) ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಮದುವೆಯ ದಿನ ಬೆಳಗ್ಗೆ ಸಹೋದರನೊಂದಿಗೆ ಬೈಕ್ ನಲ್ಲಿ ವಧು ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಬರಿಯಾರ್‌ಪುರದ ಗೌರ್ ಕೋಥಿ ಗ್ರಾಮದ ನಿವಾಸಿ ರಚನಾ ಪಾಸ್ವಾನ್ (22) ಸಾವನ್ನಪ್ಪಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಟ್ರೇಲರ್ ಚಾಲಕನನ್ನು ಬಂಧಿಸಲಾಗಿದೆ.

ಮದುವೆಯ ದಿನ ರಚನಾ ತನ್ನ ಸೋದರಸಂಬಂಧಿ ಸಹೋದರ ಮುಖೇಶ್ ನೊಂದಿಗೆ ಬೈಕ್ ನಲ್ಲಿ ಮನೆ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಟ್ರೇಲರ್ ಟ್ರಕ್ ಡಿಕ್ಕಿಯಾಗಿ ರಚನಾ ಸಾವನ್ನಪ್ಪಿದ್ದಾಳೆ. ರಚನಾ ಮನೆಯಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿತ್ತು. ಇದು ಕೆಲವೇ ಗಂಟೆಗಳಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿತ್ತು.

ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿ ಮುಖಂಡನ ಪತ್ನಿ ಆತ್ಮಹತ್ಯೆ!

ಮನೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬರಿಯಾರ್‌ಪುರ ಛೇದಕ ಬಳಿ ಮರಳು ತುಂಬಿದ ಟ್ರೇಲರ್ ಹಿಂದಿನಿಂದ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದಿದ್ದು, ರಚನಾ ರಸ್ತೆಗೆ ಬಿದ್ದಿದ್ದಾಳೆ.

ಈ ಸಂದರ್ಭದಲ್ಲಿ ಟ್ರೇಲರ್ ಟ್ರಕ್ ಆಕೆಯ ಮೇಲೆ ಹರಿದಿದೆ. ಅಪಘಾತ ನಡೆದ ತಕ್ಷಣವೇ ಯುವತಿಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ವೈದ್ಯರು ಬರುವಷ್ಟರಲ್ಲಿ ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮುಖೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ

ಬೈಕ್ ಸವಾರನು ಛೇದಕದ ಬಳಿ ಹಠಾತ್ ಬ್ರೇಕ್ ಹಾಕಿದ್ದರಿಂದ ವೇಗವಾಗಿ ಬಂದ ಟ್ರೇಲರ್ ಅವರ ಬೈಕೆಗೆ ಡಿಕ್ಕಿಯಾಗಿದೆ. ಟ್ರೇಲರ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಅವನನ್ನು ವಶಕ್ಕೆ ಪಡೆಯಲಾಗಿದೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಬಂಧಿತ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Amravati 2.0: ಅಮರಾವತಿ ಬಳಿಕ ಕೊಲ್ಲಾಪುರಲ್ಲೂ ಬಯಲಾಯ್ತು ಕರ್ಮಕಾಂಡ; 22 ವರ್ಷದ ಶಾಹಿದ್ ಸಮೀರ್‌ನಿಂದ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ

ಇಬ್ಬರು ಸಹೋದರರನ್ನು ಹೊಂದಿದ್ದ ರಚನಾ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳ ಹಿಂದೆ ಕುಶಿನಗರದ ವ್ಯಕ್ತಿಯೊಂದಿಗೆ ಆಕೆಯ ಮದುವೆ ನಿಶ್ಚಯವಾಗಿದ್ದು, ಏಪ್ರಿಲ್ 28 ರಂದು ಮದುವೆ ನಡೆಯಬೇಕಿತ್ತು.

ವರನ ಮೆರವಣಿಗೆಯನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿದ್ದ ಕುಟುಂಬ ವಧುವಿನ ಅಂತ್ಯ ಸಂಸ್ಕಾರದ ತಯಾರಿ ನಡೆಸಲು ಪ್ರಾರಂಭಿಸಿತ್ತು. ಆಕೆಯ ಸಾವಿನ ಸುದ್ದಿ ಮನೆಗೆ ತಲುಪಿದ ಅನಂತರ ವಿವಾಹ ಉತ್ಸವಗಳು ತಕ್ಷಣವೇ ಶೋಕ ಸಾಗರವಾಗಿ ಮಾರ್ಪಟ್ಟಿತ್ತು ಎಂದು ಸ್ಥಳೀಯ ಪ್ರತಿನಿಧಿ ರಾಜೇಶ್ ರಾಜ್‌ಭರ್ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author