ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Accident: ಪಿಕ್ನಿಕ್‌ಗೆಂದು ಹೋದವರ ಬಾಳಲ್ಲಿ ಘೋರ ದುರಂತ; ಒಂದೇ ಕುಟುಂಬದ ನಾಲ್ವರು ಸಮುದ್ರ ಪಾಲು

ಒಂದೇ ಕುಟುಂಬದ ಎಂಟು ಮಂದಿ ಸಮುದ್ರ ಪಾಲಾಗಿರುವ ಘಟನೆ ಸಿಂಧುದುರ್ಗದ ಶಿರೋಡಾ-ವೇಲಗರ್ ಬೀಚ್‌ನಲ್ಲಿ ಶುಕ್ರವಾರ ನಡೆದಿದೆ. ಇದರಲ್ಲಿ ನಾಲ್ವರ ಮೃತ ದೇಹ ಪತ್ತೆಯಾಗಿದ್ದು, ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಇನ್ನು ಮೂವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಒಂದೇ ಕುಟುಂಬದ ನಾಲ್ವರು ಸಮುದ್ರ  ಪಾಲು

-

ಸಿಂಧುದುರ್ಗ: ಒಂದೇ ಕುಟುಂಬದ ನಾಲ್ವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಸಿಂಧುದುರ್ಗದ (Sindhudurg) ಶಿರೋಡಾ-ವೇಲಗರ್ ಬೀಚ್‌ನಲ್ಲಿ (Shiroda-Velagar beach) ಶುಕ್ರವಾರ ಸಂಜೆ ನಡೆದಿದೆ. ಇನ್ನು ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಪಿಕ್ನಿಕ್ (picnic) ಗೆಂದು ಬಂದ ಕುಟುಂಬಕ್ಕೆ ಇದು ಬಹುದೊಡ್ಡ ಆಘಾತವನ್ನು ನೀಡಿದೆ. ಮೃತರಲ್ಲಿ ಇಬ್ಬರು ಸಿಂಧುದುರ್ಗದ ಕುಡಾಲ್ ಮೂಲದವರಾಗಿದ್ದರೆ, ಇತರ ಆರು ಮಂದಿ ಕರ್ನಾಟಕದ ಬೆಳಗಾವಿಯಿಂದ ಬಂದಿದ್ದರು ಎನ್ನಲಾಗಿದೆ.

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರೇಬಿಯನ್ ಸಮುದ್ರದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ದುರಂತವೊಂದು ನಡೆದಿದೆ. ಒಂದೇ ಕುಟುಂಬದ ಮೂವರು ಸದಸ್ಯರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರೆ ಇನ್ನು ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಕುಟುಂಬದ ಎಂಟು ಜನರ ಕುಟುಂಬ ಪಿಕ್ನಿಕ್‌ಗೆಂದು ಶಿರೋಡಾ- ವೇಲಗರ್ ಬೀಚ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಎಂಟು ಮಂದಿಯೂ ಒಟ್ಟಿಗೆ ಈಜಲೆಂದು ಸಮುದ್ರಕ್ಕೆ ಇಳಿದಿದ್ದಾರೆ. ಸ್ವಲ್ಪ ಸಮಯದ ಬಳಿಕ ನೀರಿನ ಆಳದಲ್ಲಿ ಒಬ್ಬೊಬ್ಬರಾಗಿ ಮುಳುಗಲು ಪ್ರಾರಂಭಿಸಿದರು. ಇವರ ರಕ್ಷಣೆಗಾಗಿ ಯಾರಿಗೂ ಧಾವಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್ ಭಾರತೀಯ ವಾಯುಪಡೆಯ ಮೈಲಿಗಲ್ಲು: ಅಮರ್ ಪ್ರೀತ್ ಸಿಂಗ್

ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸುಮಾರು ಹೊತ್ತು ಹುಡುಕಾಟದ ಬಳಿಕ ನಾಲ್ಕು ಶವಗಳನ್ನು ಹೊರತೆಗೆಯಲಾಯಿತು. ಆದರೆ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. 16 ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸಲಾಗಿದ್ದು, ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎನ್ನಲಾಗಿದೆ. .