Indri Whiskey: ವಿಶ್ವದಲ್ಲಿಯೇ ಅತ್ಯುತ್ತಮ ವಿಸ್ಕಿ ಎಂದೆಸಿಕೊಂಡ ಈ ಭಾರತದ ಬ್ರಾಂಡ್; ಕೊಲೆ ಆರೋಪಿ ಮದ್ಯ ಸಾಮ್ರಾಜ್ಯದ ದೊರೆಯಾಗಿದ್ದೇಗೆ?
ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯು ಯು.ಎಸ್.ಎ ಸ್ಪಿರಿಟ್ಸ್ ರೇಟಿಂಗ್ಸ್‌ನಲ್ಲಿ 'ವರ್ಷದ ಅತ್ಯುತ್ತಮ ವಿಸ್ಕಿ' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜಾಗತಿಕ ಸ್ಪಿರಿಟ್ ಮಾರುಕಟ್ಟೆಯಲ್ಲಿ ಭಾರತ ದೇಶಕ್ಕೆ ಮನ್ನಣೆ ತಂದುಕೊಟ್ಟಿರುವ ಈ ಬ್ರ್ಯಾಂಡ್ ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ಕಂಪನಿಯ ಮಾಲೀಕತ್ವದ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಪ್ರಶಸ್ತಿ ಬಂದಿರುವ ಕುರಿತು ನೆಟ್ಟಿಗರು ಆಕ್ಷೇಪ ಮಾಡುತ್ತಿದ್ದಾರೆ.

ಸಾಂಧರ್ಬಿಕ ಚಿತ್ರ -

ನವದೆಹಲಿ: ಭಾರತದಲ್ಲಿ ತಯಾರಾಗುವ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ(Indri Whiskey) ವಿಶ್ವದ ಅತ್ಯುತ್ತಮ ವಿಸ್ಕಿ (Whisky of The Year) ಎಂಬ ಎಂಬ ಪ್ರಶಸ್ತಿಯನ್ನು(Award) ತನ್ನದಾಗಿಸಿಕೊಂಡಿದೆ. ಯು. ಎಸ್.ಎ ಸ್ಪಿರಿಟ್ಸ್ ರೇಟಿಂಗ್ಸ್‌ನಲ್ಲಿ ಹರಿಯಾಣ ಮೂಲದ ಪಿಕ್ಕಾಡಿಲಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ನ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ‘ವರ್ಷದ ಅತ್ಯುತ್ತಮ ವಿಸ್ಕಿ’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜಾಗತಿಕ ಸ್ಪಿರಿಟ್ ಮಾರುಕಟ್ಟೆಯಲ್ಲಿ ಭಾರತ ದೇಶಕ್ಕೆ ಮನ್ನಣೆ ತಂದುಕೊಟ್ಟಿರುವ ಈ ಬ್ರ್ಯಾಂಡ್ ನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾತ್ತಿದ್ದು, ಈ ಕಂಪನಿಯ ಮಾಲೀಕತ್ವದ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಪ್ರಶಸ್ತಿ ಬಂದಿರುವ ಕುರಿತು ನೆಟ್ಟಿಗರು ಆಕ್ಷೇಪ ಮಾಡುತ್ತಿದ್ದಾರೆ.
ಹೌದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದ ಅಪರಾಧಿ ಮನು ಶರ್ಮಾನ ಒಡೆತನದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಕೊಲೆ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಯ ಕಂಪನಿಗೆ ಯಾವ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡಿದ್ದೀರಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಇದು ಉತ್ತಮ ಆಯ್ಕೆಯೇ ಎಂಬ ಅಭಿಪ್ರಾಯವನ್ನು ನೆಟಿಜನ್ಸ್ ಹೊರಹಾಕಿದ್ದು, ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಯ ಮಾಲೀಕತ್ವದ ಕಂಪನಿಯ ಸ್ಪಿರಿಟ್ ಅನ್ನು ಗುರುತಿಸುವುದು ನ್ಯಾಯಯುತವೇ ಎಂಬ ಪ್ರಶ್ನೆಗಳು ಜನರು ಕೇಳಿದ್ದಾರೆ.
How ironic .... its whisky that jed to his downfall and whisky that's led to his comeback. He murdered her because she said the bar had run out of whisky and now he comes out of jail and becomes a whisky enterpreuner !! A bit sickening 😢!!
— Swaminathan Sendhil (@theswami) October 2, 2025
ಏನಿದು ಪ್ರಕರಣ?
1999ರ ಏಪ್ರಿಲ್ 30 ರಂದು ತನಗೆ ಮದ್ಯ ನೀಡಲು ನಿರಾಕರಿಸಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಮಾಡೆಲ್ ಜೆಸ್ಸಿಕಾ ಲಾಲ್‌ಳನ್ನು ಮನು ಶರ್ಮಾ ಗುಂಡಿಟ್ಟು ಹತ್ಯೆ ಮಾಡಿದ್ದ. ಮಾಜಿ ಕೇಂದ್ರ ಸಚಿವ ವೆನೋದ್ ಶರ್ಮಾ ಅವರ ಪುತ್ರನಾಗಿದ್ದ ಮನು ಶರ್ಮಾನನ್ನು ದೆಹಲಿ ನ್ಯಾಯಾಲಯ 2006ರಲ್ಲಿ ಕೊಲೆ ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಹೌದು ಎಣ್ಣೆ ಕೊಟ್ಟಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ 34 ವರ್ಷದ ಜೆಸ್ಸಿಕಾ ಲಾಲ್ ಎನ್ನುವ ಯುವತಿಯನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ಅಲ್ಲಿ ಶೂಟ್ ಮಾಡಿ ಕೊಂದು ಹಾಕಿದ್ದ. ಆಕೆಗೆ 1 ಸಾವಿರ ರೂಪಾಯಿ ಲಂಚ ಕೊಡುತ್ತೇನೆ ಎಂದರೂ ಮದ್ಯ ಸರ್ವ್ ಮಾಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಸಿದ್ದಾರ್ಥ್ ಶರ್ಮ ಆಕೆಯ ಮೇಲೆ ಫೈರ್ ಮಾಡಿದ್ದ. ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಅಲ್ಲಿಯೇ ಸಾವನ್ನಪ್ಪಿದಳು. ಘಟನೆಯಾದ ಬಳಿಕ ಎಸ್ಕೇಪ್ ಆಗಿದ್ದ ಸಿದ್ಧರ್ಥ್ ಶರ್ಮ ಬಳಿಕ ಚಂಡೀಗಢ ಕೋರ್ಟ್‌ಗೆ ಬಂದು ಶರಣಾಗಿದ್ದ ಈ ಕೊಲೆ ಕೇಸ್‌ಲ್ಲಿ 9 ಇತರ ಆರೋಪಿಗಳ ಪೈಕಿ ಈತನೇ ಪ್ರಮುಖನಾಗಿದ್ದ.
ಸಾಕ್ಷಿಗಳು ಉಲ್ಟಾ ಹೊಡೆದ ನಂತರ, ಶರ್ಮಾ ಅವರ ತಂದೆ ಸಾಕ್ಷಿಗಳಿಗೆ ಲಂಚ ನೀಡಿದ್ದಾರೆ ಎಂದು ಜೆಸ್ಸಿಕಾ ಅವರ ಸಹೋದರಿ ಸಬ್ರಿನಾ ಲಾಲ್ ಆರೋಪ ಮಾಡಿದ್ದರು. ಇಡೀ ಪ್ರಕರಣವು ಗೊಂದಲದ ಗೂಡಾಯಿತು. 2006ರ ಫೆಬ್ರವರಿ 21ರಂದು, ಶರ್ಮಾ ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಖುಲಾಸೆಗೊಳಿಸಿತು. ಶರ್ಮಾ ಅವರ ತಂದೆ ಮತ್ತು ಅಜ್ಜನ ರಾಜಕೀಯ ಸಂಪರ್ಕಗಳು ಅವರಿಗೆ ಸಹಾಯ ಮಾಡಿದ್ದವು ಎಂದು ಹಲವರು ಆರೋಪಿಸಿದರು.
🚨 Indian whisky brand, Indri won best world whisky at Las Vegas Global Spirit Awards 2025. pic.twitter.com/Rd1v0x1eJ6
— Indian Tech & Infra (@IndianTechGuide) October 1, 2025
ಆದರೀಗ ಅಂದು ಕ್ಷುಲಕ ಕಾರಣಕ್ಕೆ ಕೊಲೆ ಮಾಡಿದ್ದ ವ್ಯಕ್ತಿ ಇಂದು ಮದ್ಯ ಸಾಮ್ರಾಜ್ಯದ ಅಧಿಪತಿಯಾಗಿದ್ದು, ಇದೇ ಮನು ಶರ್ಮ ಈಗ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮಾಲೀಕನಾಗಿದ್ದಾನೆ. ಅಂದು ಮನು ಶರ್ಮ ಆಗಿದ್ದ ಈ ವ್ಯಕ್ತಿ ಈಗ ಸಿದ್ಧಾರ್ಥ್ ಶರ್ಮ ಆಗಿ ಬದಲಾಗಿದ್ದಾನೆ.
ಇನ್ನು ಈ ಆರೋಪ - ಚರ್ಚೆಗಳ ನಡುವೆಯೂ ವಿಶ್ವದ ಹಲವಾರು ಪ್ರತಿಷ್ಠಿತ ಬ್ರಾಂಡ್ ಗಳಿಗೆ ಟಕ್ಕರ್ ಕೊಟ್ಟು ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಮಗದೊಮ್ಮೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ವಿಸ್ಕಿಗಳ ಗುಣಮಟ್ಟ, ಮೌಲ್ಯ ಮತ್ತು ಪ್ಯಾಕೇಜಿಂಗ್ ಆಧಾರದ ಮೇಲೆ ಪ್ರಶಸ್ತಿಗಳನ್ನು ನೀಡಲಾಗಿದೆ. ಅದರಲ್ಲಿ ಇಂದ್ರಿ ವಿಸ್ಕಿ ಮೊದಲ ಸ್ಥಾನವನ್ನು ಗಳಿಸಿದ್ದು, ವಿಸ್ಕಿಸ್ ಆಫ್ ದಿ ವರ್ಲ್ಡ್ ಅವಾರ್ಡ್ಸ್‌ನಲ್ಲಿ ಸ್ಕಾಚ್ ಮತ್ತು ಅಮೇರಿಕನ್ ಪ್ರತಿಸ್ಪರ್ಧಿಗಳ ಸ್ಪರ್ಧೆಯನ್ನು ಹಿಂದಿಕ್ಕಿದ ಇಂದ್ರಿ ದೀಪಾವಳಿ ಕಲೆಕ್ಟರ್ಸ್ ಆವೃತ್ತಿಯು 'ವಿಶ್ವದ ಅತ್ಯುತ್ತಮ ವಿಸ್ಕಿ' ಎನ್ನುವ ಬಿರುದು ಪಡೆದುಕೊಂಡಿದೆ.
ಇಲ್ಲಿಯವರೆಗೂ ಇಂದ್ರಿ-ಟ್ರಿನಿ ಸಿಂಗಲ್ ಮಾಲ್ಟ್ ವಿಸ್ಕಿ 25ಕ್ಕೂ ಹೆಚ್ಚು ಪ್ರಶಸ್ತಿಗಳಿಂದ ಅಲಂಕರಿಸಲ್ಪಟ್ಟಿದೆ. ವಿಶ್ವ ವಿಸ್ಕಿ ಪ್ರಶಸ್ತಿಗಳು ಮತ್ತು ಅಂತರರಾಷ್ಟ್ರೀಯ ವಿಸ್ಕಿ ಸ್ಪರ್ಧೆಯಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಇದು 'ಅತ್ಯುತ್ತಮ ಭಾರತೀಯ ಸಿಂಗಲ್ ಮಾಲ್ಟ್' ನಂತಹ ಗೌರವಗಳನ್ನು ಪಡೆದುಕೊಂಡಿದೆ. ನ್ಯೂಯಾರ್ಕ್ ವರ್ಲ್ಡ್ ವೈನ್ ಮತ್ತು ಸ್ಪಿರಿಟ್ಸ್ ಸ್ಪರ್ಧೆಯಲ್ಲಿ 'ಏಷ್ಯನ್ ವಿಸ್ಕಿ ಆಫ್ ದಿ ಇಯರ್' ಮತ್ತು 'ಚಿನ್ನದ ಪದಕ' ವನ್ನೂ ಗೆದ್ದುಕೊಂಡಿದೆ. ಕಳೆದ ವರ್ಷದ ಆರಂಭದಲ್ಲಿ ಟೋಕಿಯೊ ವಿಸ್ಕಿ ಮತ್ತು ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಇಂದ್ರಿ ಚಿನ್ನದ ಪದಕವನ್ನು ಮತ್ತು ಜರ್ಮನಿಯಲ್ಲಿ ಮೈನಿಂಗರ್ ಇಂಟರ್ನ್ಯಾಷನಲ್ ಸ್ಪಿರಿಟ್ ಪ್ರಶಸ್ತಿಯನ್ನು ಸಹ ಗೆದ್ದಿತ್ತು.