ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಗೆಳತಿಯನ್ನು ಲಾಡ್ಜ್‌ಗೆ ಕರೆದೊಯ್ದ ಪ್ರಿಯಕರ: ನೊಂದ ವಿವಾಹಿತೆ, ಎರಡು ಮಕ್ಕಳ ತಾಯಿ ಆತ್ಮಹತ್ಯೆ

Crime news: ಮೃತ ಯಶೋದಗೆ ಮದುವೆಯಾಗಿ ಗಂಡ, ಇಬ್ಬರು ಮಕ್ಕಳಿದ್ದರು. ಹೀಗಿದ್ದರೂ ಆಕೆ ಪಕ್ಕದ ಏರಿಯಾದಲ್ಲಿದ್ದ, ಆಡಿಟರ್‌ ಆಗಿದ್ದ ವಿಶ್ವನಾಥ್‌ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಯಶೋದ ತನ್ನ ಸ್ನೇಹಿತೆಯೊಬ್ಬಳನ್ನು ಪ್ರಿಯಕರನಿಗೆ ಪರಿಚಯಿಸಿದ್ದರು.

ಗೆಳತಿಯನ್ನು ಲಾಡ್ಜ್‌ಗೆ ಕರೆದೊಯ್ದ ಪ್ರಿಯಕರ: ನೊಂದ ವಿವಾಹಿತೆ ಆತ್ಮಹತ್ಯೆ

ಮೃತ ಯಶೋದ, ಪ್ರಿಯಕರ ವಿಶ್ವನಾಥ್ -

ಹರೀಶ್‌ ಕೇರ ಹರೀಶ್‌ ಕೇರ Oct 4, 2025 12:26 PM

ಬೆಂಗಳೂರು: ವಿವಾಹಿತೆಯಾಗಿದ್ದು ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬಳು, ತನ್ನ ಪ್ರಿಯಕರ ವಂಚಿಸಿದಳೆಂದು ಮನ ನೊಂದು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ (Bengaluru crime news) ನಡೆದಿದೆ. ಅದರಲ್ಲೂ ಈಕೆ ತನ್ನ ಸ್ನೇಹಿತೆಯನ್ನು ಆತನಿಗೆ ಪರಿಚಯಿಸಿದ್ದು, ನಂತರ ಆತ ಆ ಸ್ನೇಹಿತೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಓಯೋ ರೂಂಗೆ ಕರೆದುಕೊಂಡು ಹೋಗಿದ್ದ. ಈ ವಿಷಯ ತಿಳಿದು ಮಹಿಳೆ ಅವರಿಬ್ಬರೂ ಇರುವ ಲಾಡ್ಜ್‌ಗೆ ತೆರಳಿ ಗಲಾಟೆ ಮಾಡಿದ್ದಾಳೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಯಶೋದ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ವಿಶ್ವನಾಥ್ ಸರಿಯಾಗಿ ರೆಸ್ಪಾನ್ಸ್ ಮಾಡದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ಯಶೋದಗೆ ಮದುವೆಯಾಗಿ ಗಂಡ, ಇಬ್ಬರು ಮಕ್ಕಳಿದ್ದರು. ಹೀಗಿದ್ದರೂ ಆಕೆ ಪಕ್ಕದ ಏರಿಯಾದಲ್ಲಿದ್ದ, ಆಡಿಟರ್‌ ಆಗಿದ್ದ ವಿಶ್ವನಾಥ್‌ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಯಶೋದ ತನ್ನ ಸ್ನೇಹಿತೆಯೊಬ್ಬಳನ್ನು ಪ್ರಿಯಕರನಿಗೆ ಪರಿಚಯಿಸಿದ್ದರು.

ಪ್ರಿಯಕರ ಯಶೋದಳ ಸ್ನೇಹಿತೆಯ ಜೊತೆ ಸಲುಗೆ ಬೆಳೆಸಿ ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಅಲ್ಲದೇ, ಆಕೆಯನ್ನು ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ. ಈ ವಿಚಾರ ಯಶೋದ ಕಿವಿಗೆ ಬಿದ್ದಿದೆ. ಪ್ರಿಯಕರ ಸ್ನೇಹಿತೆಯೊಟ್ಟಿಗೆ ಇರುವ ಲಾಡ್ಜ್‌ಗೆ ಹೋಗಿ ಗಲಾಟೆ ಮಾಡಿದ್ದಾಳೆ. ಪ್ರಿಯಕರ ಸರಿಯಾಗಿ ಸ್ಪಂದಿಸದೇ ಇದ್ದಾಗ, ಮನನೊಂದು ಅಲ್ಲೇ ಪಕ್ಕದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಅರ್ಧ ಕಟ್ಟಿದ ಕಟ್ಟಡದಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ

ಬೆಂಗಳೂರಿನ ಕೊತ್ತನೂರು ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಕೊತ್ತನೂರು ಬಳಿಯ ಸಮೃದ್ಧಿ ಅಪಾರ್ಟ್ ಮೆಂಟ್‌ನಲ್ಲಿ ಅಸ್ಥಿಪಂಜರ ಕಂಡುಬಂದಿದೆ. ಸುಮಾರು 6ರಿಂದ 8 ತಿಂಗಳ ಹಿಂದೆ ಮೃತಪಟ್ಟಿರಬಹುದಾದ ವ್ಯಕ್ತಿಯ ಅಸ್ಥಿಪಂಜರವಿದು ಎನ್ನಲಾಗಿದೆ. ನಿನ್ನೆ ಸಂಜೆ ಕಟ್ಟಡ ಕಾರ್ಮಿಕರ ಕಣ್ಣಿಗೆ ಅಸ್ಥಿಪಂಜರ ಬಿದ್ದಿದೆ.

ನಿನ್ನೆ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊತ್ತನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ. ಮೇಲ್ನೋಟಕ್ಕೆ 35ರಿಂದ 40 ವರ್ಷದ ಪುರುಷನ ಅಸ್ಥಿಪಂಜರ ಎಂದು ಶಂಕಿಸಲಾಗಿದೆ. ದೊಡ್ಡಗುಬ್ಬಿಯ ಶ್ರೀಧರ್ ಎಂಬವರಿಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ವ್ಯಕ್ತಿಯ ಸಾವಿನ ಕಾರಣ ಎಫ್‌ಎಸ್‌ಎಲ್‌ ವರದಿಯ ಬಳಿಕ ಗೊತ್ತಾಗಲಿದೆ.

ಇದನ್ನೂ ಓದಿ: Death Penalty: ಬಾಲಕಿ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಮರಣ ದಂಡನೆ