ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಯೋಧ್ಯೆ ಬಳಿಕ ಈಗ ಮಧುರೈ: ಮೀನಾಕ್ಷಿ ದೇವಸ್ಥಾನ ಭೂಮಿ ಅಕ್ರಮ ಮಾರಾಟ; 60 ಕೋಟಿ ರುಪಾಯಿ ವಂಚನೆ, 19 ಮಂದಿ ವಿರುದ್ಧ ಎಫ್‌ಐಆರ್

ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ಬಳಿಕ ಇದೀಗ ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ದೇವಾಲಯಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಇದರಿಂದ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ. ಈ ಕುರಿತು 19 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸಂಗ್ರಹ ಚಿತ್ರ

ಮಧುರೈ: ಇತಿಹಾಸ ಪ್ರಸಿದ್ಧ ಮಧುರೈನ ಮೀನಾಕ್ಷಿ ದೇವಸ್ಥಾನಕ್ಕೆ (Madurai Meenakshi Temple) ಸೇರಿದ ಸುಮಾರು 60 ಕೋಟಿ ರೂ. ಮೌಲ್ಯದ 1.79 ಎಕರೆ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ. ಅಯೋಧ್ಯೆ ರಾಮ ಮಂದಿರದ (ayodhya ram mandir) ದೇಣಿಗೆ ಕಳ್ಳತನ ಪ್ರಕರಣದ ಬಳಿಕ ಇದೀಗ ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಧುರೈ ನಗರ ಕೇಂದ್ರ ಅಪರಾಧ ವಿಭಾಗ (Madurai City Central Crime Branch)ವು 19 ಮಂದಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದ ಟ್ರಸ್ಟ್ ಹೆಸರಿನಲ್ಲಿರುವ ಭೂಮಿಯನ್ನು ನ್ಯಾಯಾಲಯದ ಆದೇಶ ಮತ್ತು ನೋಂದಣಿ ಕಾನೂನುಗಳನ್ನು ಉಲ್ಲಂಘಿಸಿ ಪಟ್ಟಾ ವರ್ಗಾವಣೆ, ನಕಲಿ ನೋಂದಣಿ ಮತ್ತು ಅಡಮಾನ ವಹಿವಾಟು ನಡೆಸಲಾಗಿದೆ. ಆರೋಪಿಗಳು ದೇವಾಲಯದ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಬ್ರೇಕ್: 10 ವರ್ಷ ಜೈಲು, 10 ಕೋಟಿ ರೂ. ದಂಡಕ್ಕೆ ಕೇಂದ್ರದ ತಿದ್ದುಪಡಿ ಏನು?

ಮೀನಾಕ್ಷಿ ದೇವಸ್ಥಾನದ ಜಂಟಿ ಆಯುಕ್ತ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಸೆಲ್ಲತುರೈ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಅರಪ್ಪೋರ್ ಇಯಕ್ಕಂ ಅವರು ಸಲ್ಲಿಸಿದ ದೂರಿನಲ್ಲಿ ಸೈದಾಪೇಟೆ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ 1930ರಲ್ಲಿ ನೋಂದಾಯಿಸಲಾಗಿರುವ ವಿಲ್‌ನಲ್ಲಿ ಅಲಗರ್ ಕೋವಿಲ್ ರಸ್ತೆಯಲ್ಲಿರುವ ಅಶೋಕ ವಿಲಾಸ್ ಬಂಗಲೆ ಮತ್ತು ಅದರ ಪಕ್ಕದ ಉದ್ಯಾನವು ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಮತ್ತು ಅಲಗರ್ ದೇವಸ್ಥಾನದ ದತ್ತಿ ಟ್ರಸ್ಟ್‌ಗೆ ಸೇರಿದೆ.

ಈ ಆಸ್ತಿಯನ್ನು ಗುತ್ತಿಗೆ ನೀಡಲು ಮಾತ್ರ ಅವಕಾಶ. ಅದರ ಮಾರಾಟ, ಅಡಮಾನ ಅಥವಾ ಮಾಲೀಕತ್ವದ ವರ್ಗಾವಣೆಯನ್ನು ನಿಷೇಧಿಸಲಾಗಿದೆ. ಆದರೆ 2016ರ ಜೂನ್ 24ರಂದು ಆಗಿನ ಮಧುರೈ ಉತ್ತರ ತಹಶೀಲ್ದಾರ್ ಅನ್ಬಳಗನ್ ಅವರು ಈ ಆಸ್ತಿ ಮೇಲೆ ದೇವಾಲಯದ ಮಾಲೀಕತ್ವವನ್ನು ತೆಗೆದುಹಾಕಿ ಒಂಬತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಕ್ರಮ ಬೆಳಕಿಗೆ ಬಂದ ಮೇಲೆ ಕಂದಾಯ ವಿಭಾಗೀಯ ಅಧಿಕಾರಿ ಅವರು ತಹಶೀಲ್ದಾರ್ ಆದೇಶವನ್ನು ರದ್ದುಗೊಳಿಸಿದರು. ಭೂಮಿ ದೇವಾಲಯದ ಟ್ರಸ್ಟ್‌ಗೆ ಸೇರಿದೆ ಎಂದು ಪುನರುಚ್ಚರಿಸಿದರು ಮತ್ತು ಜಮೀನನ್ನು ದೇವಾಲಯದ ಹೆಸರಿಗೆ ಮತ್ತೆ ಕೊಡುವಂತೆ ನಿರ್ದೇಶಿಸಿದರು. ಈ ಕುರಿತು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಪ್ರಕರಣ ದಾಖಲಿಸಲಾಗಿದ್ದು, ಅದಕ್ಕೆ ಮಧ್ಯಂತರ ತಡೆ ನೀಡಲಾಗಿದೆ.

ಇದರ ಬಳಿಕ 2021ರ ಏಪ್ರಿಲ್ 16ರಂದು ತೂತುಕುಡಿ ಜಿಲ್ಲೆಯ ಮುರಪ್ಪನಾಡು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಆಗಿನ ಸಬ್-ರಿಜಿಸ್ಟ್ರಾರ್ ಅನಂತರಾಮನ್ ಅವರು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಯನ್ನು ನೋಂದಾಯಿಸಿದ್ದಾರೆ. ಆ ದಾಖಲೆಯ ಆಧಾರದ ಮೇಲೆ ಅದೇ ವರ್ಷ ಜುಲೈ 19ರಂದು ದಿಂಡಿಗಲ್ ಜಿಲ್ಲೆಯ ವಡಮದುರೈ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್-ರಿಜಿಸ್ಟ್ರಾರ್ ಪ್ರಶಾಂತ್ ಸಂತಾನ ಕರುಪ್ಪನ್ ಅವರು ಅಡಮಾನ ಪತ್ರವನ್ನು ನೋಂದಾಯಿಸಿದ್ದರು.

Fact Check: ದೆಹಲಿ-ಅಮೃತಸರ-ಕಟರ ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ಥರ್ಮೋಕಾಲ್ ಬಳಸಲಾಗುತಿದ್ಯಾ? ವೈರಲ್‌ ವಿಡಿಯೊದ ಅಸಲಿಯತ್ತು ಈಗ ಬಹಿರಂಗ

ಕಾನೂನು ನಿರ್ಬಂಧಗಳ ಹೊರತಾಗಿಯೂ ದೇವಾಲಯದ ಆಸ್ತಿ ದಾಖಲೆಗಳನ್ನು ಬಳಸಿಕೊಂಡು ವಹಿವಾಟು ನಡೆಸಲಾಗಿದೆ. ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ವಿದ್ಯಾ ಇರ್ವತ್ತೂರು

View all posts by this author