ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Anganwadi worker attacked: ಬಿ.ವಡ್ಡಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ, ಜೀವ ಬೆದರಿಕೆ!

ಅಕ್ರಮ ಗುಂಪು ಕಟ್ಟಿಕೊಂಡು ಸ್ಥಳಕ್ಕೆ ಬಂದು, ನನ್ನನ್ನು ಸರ್ಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿ, ನನ್ನನ್ನು ಕುರಿತು ನೀನು ಇಲಿ. ಕೆಲಸ ಮಾಡಬಾರದು, ನಾವು ಎಷ್ಟು ಹಿಂಸೆ ಕೊಟ್ಟರು ನೀನು ಇಲಿಯೇ ಕೆಲಸ ಮಾಡಿಕೊಂಡಿದ್ದೀಯ ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ

ತಾಲ್ಲೂಕಿನ ಬಿ.ವಡ್ಡಹಳ್ಳಿ ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಗ್ರಾಮದ ಕೆಲವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಚಿಂತಾಮಣಿ: ತಾಲ್ಲೂಕಿನ ಬಿ.ವಡ್ಡಹಳ್ಳಿ ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮೇಲೆ ಗ್ರಾಮದ ಕೆಲವರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಗ್ರಾಮದ ನಿವಾಸಿಯಾದ ಸಾವಿತ್ರಮ್ಮ ಕೋಂ ಚನ್ನಕೇಶವ (40) ಎಂಬುವವರೇ ಹಲ್ಲೆಗೊಳ ಗಾದ ಅಂಗನವಾಡಿ ಕಾರ್ಯಕರ್ತೆಇವರು ಕಳೆದ 15 ವರ್ಷಗಳಿಂದ ಬಿ.ವಡ್ಡಹಳ್ಳಿ ಗ್ರಾಮದ ಅಂಗನ ವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Shidlaghatta News: ಅಕ್ಷರಾಭ್ಯಾಸಕ್ಕೆ ಪೇಜಾವರ ಶ್ರೀಗಳ ಆಶೀರ್ವಾದ; ನೂತನ ಕಟ್ಟಡ ಉದ್ಘಾಟನೆ

ಅಂಗನವಾಡಿ ಕೇಂದ್ರದಲ್ಲಿದ್ದಾಗ,ಗ್ರಾಮದ ಕವಿತಾ ಕೋಂ ಸುರೇಶ್, ದೀಪಾ ಕೋಂ ಗಂಗಿರೆಡ್ಡಿ, ಶಿಲ್ಪಾ ಕೊಂ ಮುನಿರೆಡ್ಡಿ, ಸೌಬಾಗ್ಯಮ್ಮ ಕೊಂ ರಘುನಾಥ್, ಶ್ಯಾಮಲಮ್ಮ ಕೊಂ ವೆಂಕಟೇಶ್, ಶೋಬಮ್ಮ ಕೊಂ ಚೌಡರೆಡ್ಡಿ, ಮುನಿರೆಡ್ಡಿ ಬಿನ್ ನಾರಾಣಸ್ವಾಮಿ, ಗಂಗಿರೆಡ್ಡಿ ಬಿನ್ ರಾಮಪ್ಪ, ಮಂಜುನಾಥ ಬಿನ್ ಆಂಜಪ್ಪ, ರಾಜಣ್ಣ ಬಿನ್ ಮುನಿರೆಡ್ಡಿ, ಸುರೇಶ ಬಿನ್ ಕೃಷ್ಣಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಸ್ಥಳಕ್ಕೆ ಬಂದು, ನನ್ನನ್ನು ಸರ್ಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿ, ನನ್ನನ್ನು ಕುರಿತು ನೀನು ಇಲಿ. ಕೆಲಸ ಮಾಡಬಾರದು, ನಾವು ಎಷ್ಟು ಹಿಂಸೆ ಕೊಟ್ಟರು ನೀನು ಇಲಿಯೇ ಕೆಲಸ ಮಾಡಿಕೊಂಡಿದ್ದೀಯ ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಾವಿತ್ರಮ್ಮ ಅವರು ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.