ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌ ಪ್ರಕರಣ; ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ, ಬ್ಲಾಕ್‌ಮೇಲ್ ಆರೋಪ

ಇತ್ತೀಚೆಗಷ್ಟೇ ಭಾರೀ ಸುದ್ದಿ ಮಾಡಿದ್ದ ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣದ ಬಳಿಕ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತನಿಂದ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಸಂಗ್ರಹ ಚಿತ್ರ

ಹುಬ್ಬಳ್ಳಿ: ಇತ್ತೀಚೆಗಷ್ಟೇ ಭಾರೀ ಸುದ್ದಿ ಮಾಡಿದ್ದ ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣದ ಬಳಿಕ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುವ ನಾಟಕವಾಡಿ ಹಿಂದೂ ಯುವತಿಯ ಮೇಲೆ ಮುಫೀಸ್ ಮಿಯಾನ್ನವರ್ ಎಂಬಾತನಿಂದ ಅತ್ಯಾಚಾರ ನಡೆದಿದೆ, ಬ್ಲ್ಯಾಕ್​​ಮೇಲ್​​‌ ಮಾಡಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ 5 ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತ ಯುವತಿಗೆ ಮತ್ತೊಂದು ಕಾಲೇಜಿನ ಸ್ಟೂಡೆಂಟ್​​ ಆಗಿದ್ದ ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಪರಿಚಯ ಕಾರ್ಯಕ್ರಮವೊಂದರಲ್ಲಿ ಆಗಿತ್ತು.

ಬಳಿಕ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದರು. ಯುವತಿಯ ಜೊತೆ ಹಲವು ಪ್ರದೇಶಗಳಲ್ಲಿ ಆರೋಪಿ ಓಡಾಡಿದ್ದ. ಇಬ್ಬರ ನಡುವೆ ಸಲುಗೆ ಬೆಳೆದ ಕಾರಣ ಒಂದು ದಿನ ಸಂತ್ರಸ್ತೆಯನ್ನು ಗದಗ ರಸ್ತೆಯ ಸೇತುವೆಯ ಬಳಿ ಕರೆದುಕೊಂಡು ಹೋಗಿದ್ದ ಮುಫೀಸ್, ಯುವತಿಯ ವಿರೋಧದ ನಡುವೆಯೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಅತ್ಯಾಚಾರದ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

2025ರಲ್ಲಿ ಯುವತಿಯನ್ನು ಬ್ಲ್ಯಾಕ್​​ಮೇಲ್​​ ಮಾಡಿ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಆಗಲು ಮುಫೀಸ್ ಸಿದ್ಧತೆ ನಡೆಸಿದ್ದ. ಆದರೆ ವಿಷಯ ತಿಳಿದು ವಿಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು. ಯುವತಿ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಆರೋಪಿ ಸುಮಾರು 10-15 ಬಾರಿ ಭೇಟಿ ನೀಡಿದ್ದ. ಈ ನಡುವೆ 2025ರ ನವೆಂಬರ್​​ ಮೂರನೇ ವಾರ ಯುವತಿ ಮನೆಗೆ ಮತ್ತೆ ಮುಫೀಸ್ ಬಂದಿದ್ದು, ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡು ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪಿ, ವಿಷಯ ಯಾರಿಗಾದರೂ ಹೇಳಿದರೆ ನಿನ್ನ ತಂದೆ-ತಾಯಿಯನ್ನ ಸುಮ್ಮನೆ ಬಿಡುವುದಿಲ್ಲ ಎಂದು ಮತ್ತೆ ಬೆದರಿಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ಜಿಮ್​​ಗೆ ಬರುವ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪ ಸಂಬಂಧ ಹುಬ್ಬಳ್ಳಿಯ ಜಿಮ್​ ಟ್ರೈನರ್ ಸಮೀರ್​ ವಿರುದ್ಧ ಪ್ರಕರಣ ದಾಖಲಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

Vishakha Bhat Heggar

View all posts by this author