Assault Case: ಕನ್ನಡ ಚಿತ್ರ ನಿರ್ದೇಶಕನ ಮುಖಕ್ಕೆ ಮಸಿ, ಹಲ್ಲೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಮಾನತುಗೊಂಡಿರುವ ಸದಸ್ಯ ನರಸಿಂಹ ರಾಜು ಅವರು ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ವಿರುದ್ಧ ಇತ್ತೀಚೆಗೆ ಕಟುವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಅಭಿಮಾನಿ ಬಳಗದ ಕಾರ್ಯಕರ್ತರು ನರಸಿಂಹ ರಾಜು ಅವರಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ನರಸಿಂಹ ರಾಜು

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber Of Commerce) ಕೆಲವು ಸದಸ್ಯರ ನಡುವಿನ ಹಣಾಹಣಿ ಜೋರಾಗಿದ್ದು, ಕನ್ನಡದ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರೊಬ್ಬರ ಮುಖಕ್ಕೆ ಮಸಿ ಬಳಿದು ಹಲ್ಲೆ (Assault Case) ನಡೆಸಲಾಗಿದೆ. ನಿರ್ಮಾಪಕ ನರಸಿಂಹ ರಾಜು ಅವರ ಮೇಲೆ ಚಲನಚಿತ್ರ (cinema news) ವಾಣಿಜ್ಯ ಮಂಡಳಿಯ ಸಮೀಪ ಕೆಲವರು ಹಲ್ಲೆ ಮಾಡಿದ್ದಾರೆ. ಸಾ.ರಾ ಗೋವಿಂದು (sa ra govindu) ಹಾಗೂ ವಾಟಾಳ್ ನಾಗರಾಜ್ (Vatal Nagaraj) ಬೆಂಬಲಿಗರು ಈ ರೀತಿ ಮಾಡಿದ್ದಾರೆ ಎಂದು ನರಸಿಂಹರಾಜು ಆರೋಪಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಮಾನತುಗೊಂಡಿರುವ ಸದಸ್ಯ ನರಸಿಂಹ ರಾಜು ಅವರು ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ವಿರುದ್ಧ ಇತ್ತೀಚೆಗೆ ಕಟುವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಅಭಿಮಾನಿ ಬಳಗದ ಕಾರ್ಯಕರ್ತರು ನರಸಿಂಹ ರಾಜು ಅವರಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಘಟನೆ ನಿನ್ನೆ ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯ ಸಮೀಪ ನಡೆದಿದೆ. ಮಸಿ ಬಳಿದಿರುವುದು ಅಲ್ಲದೆ ಕೆಲ ಕಿಡಿಗೇಡಿಗಳು ಅವರ ಬಟ್ಟೆ ಹರಿದು ಎಳೆದಾಡಿದ್ದಾರೆ. ಇದೀಗ ಈ ಹಲ್ಲೆ ನಾನಾ ರೂಪ ಪಡೆದುಕೊಳ್ಳುತ್ತಿದೆ. ಸಾ.ರಾ ಗೋವಿಂದು ಹಾಗೂ ವಾಟಾಳ್ ನಾಗರಾಜ್ ಬೆಂಬಲಿಗರು ಈ ರೀತಿ ಮಾಡಿದ್ದಾರೆ ಎಂದು ನರಸಿಂಹ ರಾಜು ಅವರು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ನಿರ್ಮಾಪಕ ಹಾಗೂ ನಿರ್ದೇಶಕ ನರಸಿಂಹ ರಾಜು ಈ ಕುರಿತು ಮಾತನಾಡಿದ್ದಾರೆ. ಇವತ್ತು ನನಗೆ ಫಿಲಂ ಚೇಂಬರ್ ಅಧ್ಯಕ್ಷರು ಅಫೀಶಿಯಲ್ ಆಗಿ ಬರಲು ಹೇಳಿದ್ದರು. ಹೋಗಿದ್ದೆ. ಸಾರಾ ಗೋವಿಂದು ಮೇಲೆ ಡಿಆರ್ ಹತ್ತಿರ ದೂರುಗಳಿದೆ. ಅವರು ಅಧ್ಯಕ್ಷ ಆಗಿದ್ದಾಗ ಹಣ ಅಕ್ರಮದ ಬಗ್ಗೆ, ಕಲ್ಯಾಣ ನಿಧಿಯಲ್ಲಿ ಮಧ್ಯವರ್ತಿಯಾಗಿ ಮಾಡುತ್ತಿರುವುದು ಇದರ ವಿರುದ್ಧ ಎಲ್ಲಾ ದೂರು ನೀಡಿದ್ದೇನೆ. ನನ್ನ ಗೆಳೆಯ ಸತೀಶ್ ಮತ್ತಿತರರು ದೂರು ನೀಡಿದ್ದೇವೆ. ಅದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ ಎಂದರು.
ಫಿಲಂ ಚೇಂಬರ್ ಅನ್ನು ಗೂಂಡಾಗಿರಿ ಮೂಲಕ ಸ್ವಂತ ಪಾಪರ್ಟಿ ಥರ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸಂಬಂಧಿಸಿದ ಕೆಲವು ಜನ ಇದ್ದಾರೆ. ಮತ್ತೆ ಮತ್ತೆ ಅಲ್ಲಿಗೆ ಅವರು ಸಿಂಡಿಕೇಟ್ ಮಾಡಿಕೊಂಡು ಬರುತ್ತಿರುತ್ತಾರೆ. ನಾನು ಅವರ ಅವ್ಯವಹಾರ ಕುರಿತು ದೂರಿದ್ದೆ. ಆ ದ್ವೇಷದಿಂದ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಾಗ ಗಲಾಟೆ ಮಾಡುತ್ತಿರುತ್ತಾನೆ. ಇವತ್ತು ನನ್ನ ಮೇಲೆ ದಾಳಿ ಮಾಡಿಸಿದ. ಅವರು ನಮ್ಮ ಸಂಘದ ಸದಸ್ಯರಲ್ಲ, ಅವರೆಲ್ಲಾ ಅವನ ಕಡೆಯವರು. ಹೊರಗಡೆಯವರು ಕೂಡ ಬಂದಿದ್ದರು. ಅದರಲ್ಲಿ ಒಬ್ಬ ನನಗೆ ಕಪ್ಪು ಬಣ್ಣದ ಸ್ಪ್ರೇ ಹಾಕಿದ್ದಾನೆ. ಕಣ್ಣಿಗೆ ಹಾಗೂ ಮುಖಕ್ಕೆ ಹಾಕಿದ್ದಾನೆ. ಈ ರೀತಿ ಗೂಂಡಾಗಿರಿ ಮಾಡಿಕೊಂಡು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಸ್ವಂತ ಆಸ್ತಿ ತರ ಮಾಡಿಕೊಳ್ಳುತ್ತಿದ್ದಾರೆ ಅವರು ಎಂದು ಆರೋಪಿಸಿದರು.
ಇದನ್ನೂ ಓದಿ: Koppala News: ರಾಜ್ಯವೇ ತಲೆತಗ್ಗಿಸುವ ಘಟನೆ; ಗಂಗಾವತಿಯಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ