ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault Case: ವೃದ್ಧ ಅತ್ತೆ-ಮಾವನ ಮೇಲೆ ಸೊಸೆ, ಮಕ್ಕಳಿಂದ ಬರ್ಬರ ಹಲ್ಲೆ

ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೋರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ 10 ವರ್ಷದಿಂದ ಈಕೆ ಅತ್ತೆ ಮತ್ತು ಮಾವನಿಗೆ ಕಿರುಕುಳ ನೀಡುತ್ತಿದ್ದಾಳೆ. ಕಿರುಕುಳ ತಾಳದೆ ಅತ್ತೆ ಹಾಗೂ ಮಾವ ಬೇರೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೂ ಕೂಡ ಮಾರ್ಚ್ 10ರಂದು ಈಕೆ ವೃದ್ಧ ಅತ್ತೆ ಮಾವನ ಬಾಡಿಗೆ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾಳೆ.

ವೃದ್ಧ ಅತ್ತೆ-ಮಾವನ ಮೇಲೆ ಸೊಸೆ, ಮಕ್ಕಳಿಂದ ಬರ್ಬರ ಹಲ್ಲೆ

ಹಲ್ಲೆ ನಡೆಸಿದ ಪ್ರಿಯದರ್ಶಿನಿ

ಹರೀಶ್‌ ಕೇರ ಹರೀಶ್‌ ಕೇರ Mar 14, 2025 9:58 AM

ಬೆಂಗಳೂರು: ಬೆಂಗಳೂರಿನಲ್ಲೊಂದು (Bengaluru news) ಅಮಾನುಷ ಘಟನೆ (Crime News) ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ಧ ಹಾಗೂ ಕಾಯಿಲೆಪೀಡಿತ ಅತ್ತೆ ಮತ್ತು ಮಾವನ ಮೇಲೆ ಲೇಡಿ ಡಾಕ್ಟರ್ ಆಗಿರುವ ಸೊಸೆಯೊಬ್ಬಳು ಮಾರಣಾಂತಿಕವಾಗಿ ಹಲ್ಲೆ (Assault Case) ಮಾಡಿದ್ದು, ಈ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ನೆಟಿಜೆನ್‌ಗಳು ಈ ಲೇಡಿ ಡಾಕ್ಟರ್‌ ಕೃತ್ಯಕ್ಕೆ ಛೀ ಥೂ ಎಂದಿದ್ದು, ಪೊಲೀಸ್‌ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೋರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ 10 ವರ್ಷದಿಂದ ಈಕೆ ಅತ್ತೆ ಮತ್ತು ಮಾವನಿಗೆ ಕಿರುಕುಳ ನೀಡುತ್ತಿದ್ದಾಳೆ. ಕಿರುಕುಳ ತಾಳದೆ ಅತ್ತೆ ಹಾಗೂ ಮಾವ ಬೇರೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೂ ಕೂಡ ಮಾರ್ಚ್ 10ರಂದು ಈಕೆ ವೃದ್ಧ ಅತ್ತೆ ಮಾವನ ಬಾಡಿಗೆ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾಳೆ. ತನ್ನ ಮಕ್ಕಳನ್ನು ಕೂಡ ಈಕೆ ಕರೆದುಕೊಂಡು ಹೋಗಿದ್ದು, ಈಕೆಯ ಚಿತಾವಣೆಯಿಂದ ಮೊಮ್ಮಕ್ಕಳು ಸಹ ತಾತ ಅಜ್ಜಿ ಎನ್ನದೆ ಹಲ್ಲೆ ಮಾಡಿದ್ದಾರೆ. ಮೊಮ್ಮಗಲೇ ತಾತನಿಗೆ ತುಳಿಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಹಲ್ಲೆ ವಿಡಿಯೋವನ್ನು ‘ಎಕ್ಸ್’ ಆ್ಯಪ್ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಖಾತೆ ಯಲ್ಲಿ ಪೋಸ್ಟ್ ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದವರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ಹಾಗೂ ಆಕೆ ಇಬ್ಬರು ಮಕ್ಕಳು ಎನ್ನಲಾಗಿದೆ. ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಎಕ್ಸ್ ಖಾತೆಯಲ್ಲಿ ಒತ್ತಾಯಿಸಲಾಗಿದೆ.



ಎಕ್ಸ್‌ ಪೋಸ್ಟ್‌ನಲ್ಲಿ ವಿವರ

"ವಯಸ್ಸಾದ ಪೋಷಕರು ತಮ್ಮ ಸೊಸೆಯಂದಿರಿಂದ ದೌರ್ಜನ್ಯಕ್ಕೆ ಒಳಗಾಗುವುದನ್ನು ನೋಡು ವುದು ತುಂಬಾ ಬೇಸರದ ಸಂಗತಿ. ವಿಕ್ಟೋ ರಿಯಾ ಆಸ್ಪತ್ರೆಯ ವೈದ್ಯೆ ಪ್ರಿಯದರ್ಶಿನಿ ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ಅತ್ತೆ-ಮಾವರಿಗೆ ಕಿರುಕುಳ ನೀಡಿದ್ದು, ಆಕೆಯ ದೌರ್ಜನ್ಯದಿಂದಾಗಿ ಅತ್ತೆ-ಮಾವ ತಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನ್ಯಾಯಾಲಯವು ಪ್ರಿಯದರ್ಶಿನಿಗೆ ಅತ್ತೆ-ಮಾವನನ್ನು ಭೇಟಿಯಾಗುವ ಹಕ್ಕಿಲ್ಲ ಎಂದು ತೀರ್ಪು ನೀಡಿದೆ. ಆದರೂ ಮಾ.10ರ ರಾತ್ರಿ ಪ್ರಿಯದರ್ಶಿನಿ ಹಾಗೂ ಆಕೆಯ ಇಬ್ಬರು ಮಕ್ಕಳು ಬಲವಂತವಾಗಿ ಅತ್ತೆ-ಮಾವನ ಮನೆಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ."

"ಹಲ್ಲೆಗೊಳಗಾದ ಆರ್‌ಎಚ್‌ಸಿಎಸ್‌ ಲೇಔಟ್ ನಿವಾಸಿ ಜೆ.ನರಸಿಂಹಯ್ಯ ದೂರು ನೀಡಿದ್ದಾರೆ. ನನ್ನ ಮಗ ನವೀನ್ ಕುಮಾರ್ ಮತ್ತು ಪ್ರಿಯದರ್ಶಿನಿಗೆ 2007ರಲ್ಲಿ ಮದುವೆಯಾಗಿದ್ದು, ಸದ್ಯ ವಿಚ್ಚೇದನದ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ನಡುವೆ ಮಾ.10ರಂದು ರಾತ್ರಿ 8.30ಕ್ಕೆ ಪ್ರಿಯದರ್ಶಿನಿ ಹಾಗೂ ಆಕೆಯ ಮಕ್ಕಳು ಬಂದು ಹಲ್ಲೆ ಮಾಡಿದ್ದು, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಆಕೆಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ."

ಇದನ್ನೂ ಓದಿ: Assault Case: ಪಾವಗಡದಲ್ಲಿ ಕ್ಷುಲ್ಲಕ ವಿಚಾರಕ್ಕೆ ಬಸ್ ಕಂಡಕ್ಟರ್‌ ಮೇಲೆ ಪ್ರಯಾಣಿಕರ ಹಲ್ಲೆ!