ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Murder Case: ನಿಧಾನವಾಗಿ ಓಡಿಸು ಎಂದು ತಿಳಿಹೇಳಿದವನ ಮೇಲೆ ಕಾರು ಓಡಿಸಿ ಹತ್ಯೆ

KA-01-ಎಂಎಫ್-2883 ನಂಬರ್‌ನ ಕಾರು ಓಡಿಸುತ್ತಿದ್ದ ವ್ಯಕ್ತಿಯೇ ಕೊಲೆಗಾರ. ಆತ ಅತಿ ವೇಗವಾಗಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಕಾರು ಚಾಲಕ ಸ್ಬಲ್ಪ ದೂರು ಹೋಗಿ ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ನಿಧಾನವಾಗಿ ಓಡಿಸು ಎಂದು ತಿಳಿಹೇಳಿದವನ ಮೇಲೆ ಕಾರು ಓಡಿಸಿ ಹತ್ಯೆ

ಮೃತ ಯುವಕ ಮನು -

ಹರೀಶ್‌ ಕೇರ
ಹರೀಶ್‌ ಕೇರ Mar 3, 2026 2:18 PM

ಹಾಸನ, ಮಾರ್ಚ್‌ 03: ನಿಧಾನವಾಗಿ ಕಾರು (Car) ಓಡಿಸುವಂತೆ ತಿಳಿ ಹೇಳಿದ ಯುವಕನಿಗೆ ಕಾರು ಗುದ್ದಿಸಿ ಹತ್ಯೆ (murder case) ಮಾಡಿದ ಘಟನೆ ಹಾಸನ (hassan) ಜಿಲ್ಲೆಯ ಹೊಳೆನರಸೀಪುರ (Holenarasipura) ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ಮನು (27) ಎಂದು ಗುರುತಿಸಲಾಗಿದೆ. ಕಾರು ಗುದ್ದಿಸಿದವನು ಅಲ್ಲಿಂದ (hit and run) ಪರಾರಿಯಾಗಿದ್ದಾನೆ.

ನಡುರಾತ್ರಿ 12 ಗಂಟೆ ಸಮಯದಲ್ಲಿ ಮನು, ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ರಸ್ತೆ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದರು. ಈ ವೇಳೆ KA-01-ಎಂಎಫ್-2883 ನಂಬರ್‌ನ ಕಾರಿನಲ್ಲಿ ಅತಿ ವೇಗವಾಗಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಕಾರು ಚಾಲಕ ಸ್ಬಲ್ಪ ದೂರು ಹೋಗಿ ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಡಿಕ್ಕಿಯ ರಭಸಕ್ಕೆ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಭಿಷೇಕ್ ಸೇರಿ ಮೂವರು ಯುವಕರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಯುವಕರು ಸಂಬಂಧಿಗಳು ಎಂದು ತಿಳಿದು ಬಂದಿದೆ.

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಬೃಹತ್‌ ಪ್ರತಿಭಟನೆ; ಕಣ್ಣೀರಿಟ್ಟ ಗ್ರಾಮಸ್ಥರು

ಹೊಲದಲ್ಲಿ ಯುವಕ ಅನುಮಾನಾಸ್ಪದ ಸಾವು

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ದೋಟಿಕೊಳ್ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವನ್ನಪ್ಪಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೋಟಿಕೊಳ ಗ್ರಾಮದ ಜಮೀನಿನಲ್ಲಿ ಮಲಗಿದ ಯುವಕ ಅನುಮಾನಾಸ್ಪದವಾಗಿ ಸಾವಾಗಿದ್ದಾನೆ. ಶರಣು ಭಾಸಗಿ (25) ಮೃತ ಯುವಕ.

ಹೊಲದಲ್ಲಿ ಬೆಳೆ ಕಾಯಲು ಜಮೀನಿನಲ್ಲಿಯೇ ಮಲಗಿದ್ದ. ದೋಟಿಕೋಳ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.