ಮುಂಬೈ, ಮಾ. 28: ಪತ್ನಿ ಮತ್ತು ಅತ್ತೆ-ಮಾವನ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸೆತ್ತ 20 ವರ್ಷದ ವ್ಯಕ್ತಿಯೋರ್ವ ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ನಡೆದಿದೆ. ಈ ಘಟನೆಗೂ ಮುನ್ನ ಆ ವ್ಯಕ್ತಿ ತಾನು ಅನುಭವಿಸಿದ ಸಂಕಷ್ಟವನ್ನು ವಿಡಿಯೊ ಮೂಲಕ ವಿವರಿಸಿ ಅದನ್ನು ರೆಕಾರ್ಡ್ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದಾನೆ (Crime News). ಮೃತ ವ್ಯಕ್ತಿಯನ್ನು ಮೊಹಮ್ಮದ್ ಸಾದ್ ಆಸಿಫ್ ಸಯ್ಯದ್ ಎಂದು ಗುರುತಿಸಲಾಗಿದೆ.
ಇದೀಗ ಪೊಲೀಸರು ಪತ್ನಿ ಸೇರಿ 7 ಜನರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣ ದಾಖಲಿಸಿದ್ದಾರೆ. ಮೃತ ದುರ್ದೈವಿ ಮೊಹಮ್ಮದ್ ಸಾದ್ ಆಸಿಫ್ ಸಯ್ಯದ್ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮೂಲದವನು. ಸಯ್ಯದ್ ಪುಣೆಯ ಜಂಭುಲ್‌ವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ. ಆತನ ಪತ್ನಿ ಕರಿಮುನ್ನಿಶಾ ಅಲಿಯಾಸ್ ನಿಶಾ ಖಾನ್ ನಿರಂತರವಾಗಿ ಜಗಳವಾಡುತ್ತಿದ್ದಳು. ಅವಳು ಮತ್ತು ಅವಳ ತಂದೆ-ತಾಯಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮೃತ ದುರ್ದೈವಿ ವಿಡಿಯೊದಲ್ಲಿ ವಿವರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ (ಮಾ. 26), ಸಾದ್ ತನ್ನ ಫೋನ್‌ನಲ್ಲಿ ಕಿರುಕುಳದ ಬಗ್ಗೆ ವಿವರಿಸಿದ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಲ್ಲದೆ, ನಿಶಾ ಸೇರಿ ಏಳು ಜನರ ಹೆಸರನ್ನು ಉಲ್ಲೇಖಿಸಿದ್ದ. ಆ ವಿಡಿಯೊವನ್ನು ಮಾಲೆಗಾಂವ್‌ನಲ್ಲಿರುವ ಸ್ನೇಹಿತರಿಗೆ ಕಳುಹಿಸಿ, ನಂತರ ಇಲಿಪ್ರಾಷನ ಸೇವಿಸಿದ್ದ.
ಬೆಂಗಳೂರಿನಲ್ಲಿ ಗೆಳತಿಯ ಅಶ್ಲೀಲ ವಿಡಿಯೊ ವೈರಲ್ ಮಾಡಿದ ಯುವಕನಿಗೆ ಜೈಲು ಶಿಕ್ಷೆ
ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳನ್ನು ನಿಶಾ, ಸರ್ವರ್ ಅಲಿಯಾಸ್ ಕೈಫ್ ಖಾನ್, ರೇಷ್ಮಾ ಕಮ್ರುಖಾನ್, ಶಮಾ ಜಾವೇದ್ ಶೇಖ್, ಜಾವೇದ್ ಶೇಖ್, ಅಥರ್ವ ಕೇಲ್ ಮತ್ತು ಇಶಿತಾ ಎಂದು ಗುರುತಿಸಲಾಗಿದೆ. ವಿಡಿಯೊದ ವಿಧಿವಿಜ್ಞಾನ ಪರೀಕ್ಷೆಗೆ ಅನುಕೂಲವಾಗುವಂತೆ ಸಾದ್‌ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯಂತೆ ನಟಿಸಿದ ಆರೋಪಿ ಅರೆಸ್ಟ್
ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಕದ್ದ ಮಾಲನ್ನು ಮರಳಿ ಪಡೆಯಲು ಸಹಾಯ ಮಾಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಈ ಆಘಾತಕಾರಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ.
ಪ್ರೀತಿಗಾಗಿ ಪೊಲೀಸ್ ಅಧಿಕಾರಿಯಾಗಿದ್ದ ಅಪ್ಪನನ್ನೇ ಕೊಂದ ಮಗಳು; ಮೂರು ವರ್ಷಗಳ ಬಳಿಕ ಬಯಲಾಯ್ತು ರಹಸ್ಯ
ಅಧಿಕಾರಿಗಳ ಪ್ರಕಾರ, ಆರೋಪಿಯು ಪತ್ರಿಕೆಗಳಲ್ಲಿ ವರದಿಯಾಗುವ ಕಳ್ಳತನದ ಘಟನೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದ. ಪೊಲೀಸ್ ಅಧಿಕಾರಿಯಾಗಿ ನಟಿಸಲು ನಕಲಿ ದಾಖಲೆಗಳು ಮತ್ತು ಯುಪಿಎಸ್‌ಸಿ ಸಂದರ್ಶನ ವಿಡಿಯೊಗಳನ್ನು ಬಳಸುತ್ತಿದ್ದ. ನಂತರ ಕದ್ದ ಬೆಲೆಬಾಳುವ ವಸ್ತುಗಳನ್ನು ಮರಳಿ ಪಡೆಯುವ ನೆಪದಲ್ಲಿ ಸಂತ್ರಸ್ತರಿಂದ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡುತ್ತಿದ್ದ. ಆರೋಪಿಯಿಂದ ಸ್ಥಳೀಯ ಅಪರಾಧ ವಿಭಾಗ 4.3 ಲಕ್ಷ ರುಪಾಯಿ ನಗದನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹಲವು ವಂಚನೆ ದೂರುಗಳ ತನಿಖೆಯ ನಂತರ ಆರೋಪಿ ಪರ್ಭಾನಿ ನಿವಾಸಿ ವಿಜಯ್ ಅನಿರುದ್ಧ ಕದಮ್ (25)ನನ್ನು ಬಂಧಿಸಲಾಗಿದೆ.