ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ATM Robbery: ಬೆಂಗಳೂರಿನಲ್ಲಿ ಎಟಿಎಂ ದರೋಡೆಗೆ ಯತ್ನ, ನೇಪಾಳಿ ಪ್ರಜೆ ಸೆರೆ

ಫೆ.10 ರಂದು ಇಂದಿರಾನಗರದ (Indiranagar) ಡಬಲ್ ರೋಡ್ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದ ATM ನಲ್ಲಿ ಮಧ್ಯರಾತ್ರಿ ಎಟಿಎಂ ಶಟ್ಟರ್ ಬಂದ್ ಮಾಡಿ ದರೋಡೆಗೆ ಯತ್ನ ನಡೆಸಿದ್ದ. ಕಟ್ಟಿಂಗ್ ಮಷೀನ್ ಬಳಸಿ ದರೋಡೆಗೆ ಯತ್ನ ನಡೆಸಿದ್ದ. ದರೋಡೆಗೆ ವಿಫಲ ಯತ್ನ ನಡೆಸಿದ್ದ ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಎಂಬುವವನ ಬಂಧನವಾಗಿದೆ.

ಆರೋಪಿ ರಾಜೇಂದ್ರ ಸಿಂಗ್

ಬೆಂಗಳೂರು, ಫೆ.23: ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ಎಟಿಎಂ ರಾಬರಿ (Robbery Case) ಪ್ರಕರಣ ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೆ ಬ್ಯಾಂಕ್‌ ಎಟಿಎಂ ದರೋಡೆಗೆ (Bank ATM Robbery) ವಿಫಲ ಯತ್ನ ನಡೆದಿದೆ. ದರೋಡೆಗೆ ವಿಫಲ ಯತ್ನ ನಡೆಸಿದ್ದ ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಎಂಬುವವನ ಬಂಧನವಾಗಿದೆ.

ಫೆ.10 ರಂದು ಇಂದಿರಾನಗರದ (Indiranagar) ಡಬಲ್ ರೋಡ್ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದ ATM ನಲ್ಲಿ ಮಧ್ಯರಾತ್ರಿ ಎಟಿಎಂ ಶಟ್ಟರ್ ಬಂದ್ ಮಾಡಿ ದರೋಡೆಗೆ ಯತ್ನ ನಡೆಸಿದ್ದ. ಕಟ್ಟಿಂಗ್ ಮಷೀನ್ ಬಳಸಿ ದರೋಡೆಗೆ ಯತ್ನ ನಡೆಸಿದ್ದ. ATM ಒಳಗಿದ್ದ ಸಿಸಿಟಿವಿಯನ್ನ ಬಟ್ಟೆ ಮತ್ತು ಟೇಪ್‌ ಕವರ್ ಬಳಸಿ ಮುಚ್ಚಿದ್ದ.

ಆರೋಪಿಯ ಬಂಧನದ ಬಳಿಕ ನಾಗಾರ್ಜುನ ಹೋಟೆಲ್ ಕಿಚನ್ ನಲ್ಲಿ ಕೆಲಸ ಮಾಡುತಿದ್ದುದಾಗಿ ಹೇಳಿದ್ದಾನೆ. ಎಟಿಎಂ ಒಡೆಯಲು ಸಾಧ್ಯವಾಗದೇ ಯಾವುದೇ ಹಣ ಸಿಗದೇ ಪಾಪಸ್ ಆಗಿದ್ದ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನನ್ನ ಸೆರೆಹಿಡಿದ ಇಂದಿರಾನಗರ ಪೊಲೀಸರು ಜೈಲಿಗಟ್ಟಿದ್ದಾರೆ.

ಲಂಚ ಪ್ರಕರಣ; ಶಾಸಕ ಚಂದ್ರು ಲಮಾಣಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ

ಸೈಬರ್‌ ವಂಚನೆ, ಇಂಜಿನಿಯರಿಂಗ್‌ ವಿದ್ಯಾರ್ಥಿ ಬಂಧನ

ದಾವಣಗೆರೆ: ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್‍ಗಳಲ್ಲಿ (Bank) ಮ್ಯೂಲ್ ಅಕೌಂಟ್‌ಗಳನ್ನು ತೆರೆದು ಸೈಬರ್ ವಂಚಕರಿಗೆ (Cyber Crime) ಸಹಕರಿಸುತ್ತಿದ್ದ ಆರೋಪದ ಮೇಲೆ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಇಬ್ಬರನ್ನು ದಾವಣಗೆರೆಯ (Davanagere) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮೊದಲ ಪ್ರಕಣದಲ್ಲಿ ಹೊನ್ನಾಳಿ ತಾಲೂಕಿನ ಕುಂಕುಮ ಗ್ರಾಮದ ಪರಶುರಾಮ ಎಂಬಾತನನ್ನು ಬಂಧಿಸಿದ್ದಾರೆ. ಈತ ಬೆಂಗಳೂರಿನ ರಾಜಾಜಿನಗರದಲ್ಲಿ ಟ್ಯಾಲೆಂಟೆಡ್ ಸ್ಕ್ವಾಡ್ ಸೊಲ್ಯೂಷನ್ ಜಾಬ್ ಪ್ಲೇಸ್ ಮೆಂಟ್ ಹೆಸರಲ್ಲಿ ಕಂಪನಿ ತಗೆದಿದ್ದ. ವಿವಿಧ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‍ಗಳಲ್ಲಿ 6 ಖಾತೆ ತಗೆದಿದ್ದು, ಈ 6 ಮ್ಯೂಲ್ ಅಕೌಂಟ್‍ಗಳಿಂದ ಕೋಟ್ಯಂತರ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 6 ಮ್ಯೂಲ್ ಅಕೌಂಟ್‍ಗಳ ವಿರುದ್ಧ ದೇಶಾದ್ಯಂತ 95 ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ವಿಚಾರಣೆ ಮುಂದುವರಿದಿದೆ.

ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಮೇಲೆ ಮಲಗಿದ ಯುವಕ; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಹರೀಶ್‌ ಕೇರ

View all posts by this author