ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur Crime: ಲಾಂಗ್ ಮೂಲಕ ಹುಟ್ಟು ಹಬ್ಬದ ಕೇಕ್ ಕಟ್: ಆಟೋ ಚಾಲಕ ಬಂಧನ

ಲಾಂಗ್ ಮೂಲಕ ಹುಟ್ಟು ಹಬ್ಬದ ಕೇಕ್ ಕಟ್ ಮಾಡಿದ ಆಟೋ ಚಾಲಕ ನೋರ್ವ ಪೋಲೀಸರ ಅತಿಥಿಯಾಗಿರುವ ಅಪರೂಪದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಸೋಮವಾರ ನಡೆದಿದೆ. ಬಂಧಿತನನ್ನು ಗೌರಿಬಿದನೂರು ತಾಲೂಕಿನ ವೈಚಕೂರ ಹಳ್ಳಿ ನಿವಾಸಿ ಆಟೋ ಚಾಲಕ ಅನಿಲ್ ಕುಮಾರ್ (24) ಎಂದು ಗುರ್ತಿಸಲಾಗಿದೆ.

ಚಿಕ್ಕಬಳ್ಳಾಪುರ: ಲಾಂಗ್ ಮೂಲಕ ಹುಟ್ಟು ಹಬ್ಬದ ಕೇಕ್ ಕಟ್ ಮಾಡಿದ ಆಟೋ ಚಾಲಕ ನೋರ್ವ ಪೋಲೀಸರ ಅತಿಥಿಯಾಗಿರುವ ಅಪರೂಪದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಸೋಮವಾರ ನಡೆದಿದೆ. ಬಂಧಿತನನ್ನು ಗೌರಿಬಿದನೂರು ತಾಲೂಕಿನ ವೈಚಕೂರ ಹಳ್ಳಿ ನಿವಾಸಿ ಆಟೋ ಚಾಲಕ ಅನಿಲ್ ಕುಮಾರ್ (24) ಎಂದು ಗುರ್ತಿಸಲಾಗಿದೆ.

ಆಟೋ ಚಾಲಕ ಅನಿಲ್ ಕುಮಾರ್ ನ ಹುಟ್ಟು ಹಬ್ಬಕ್ಕೆ ಆತನ ಗೆಳೆಯರು ಕಿಂಗ್ ಎಂದು ಕೇಕ್ ಮಾಡಿಸಿ ತಂದಿದ್ದರು. ಇದರಿಂದ ಉದ್ದೀಪಿತನಾದ ಅನಿಲ್ ಮಾರಕಾಸ್ತ್ರ ಲಾಂಗ್‌ ಬಳಸಿ ಕೇಕ್ ಕಟ್ ಮಾಡಿ ಬರ್ತ್‌ಡೇ ಆಚರಿಸಿಕೊಂಡಿದ್ದ. 

ಈ ಸಂಭ್ರಮದ ವಿಡಿಯೋವನ್ನು ಈತನ ಗೆಳೆಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಲ್ಲದೆ  ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ . ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬೆಳಗ್ಗೆ ಆಟೋ ಚಾಲಕ ಅನಿಲ್ ನನ್ನು ವಶಕ್ಕೆ ಪಡೆದು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.