ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bank manager dies: ಲಾಡ್ಜ್‌ನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಸಾವು

ಮಧು ತೇಜ್ ಸೋಮವಾರ ರಾತ್ರಿ ಸುಮಾರು 9.30ರ ವೇಳೆಗೆ ಲಾಡ್ಜ್‌ಗೆ ಆಗಮಿಸಿ, ತಾವು ಒಬ್ಬರೇ ಉಳಿದು ಬೆಳಗ್ಗೆ ಕೊಠಡಿ ಖಾಲಿ ಮಾಡುವುದಾಗಿ ತಿಳಿಸಿ ಕೊಠಡಿ ಪಡೆದಿದ್ದರು. ಆದರೆ ಮರುದಿನ ಬೆಳಗ್ಗೆಯಿಂದ ಕೊಠಡಿಯಿಂದ ಯಾವುದೇ ಚಲನವಲನ ಕಂಡುಬರದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಂದಿರ ಲಿಲ್ಲ.

ಗೌರಿಬಿದನೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ತೇಜಸ್ ಕಂಫರ್ಟ್ ಲಾಡ್ಜ್‌ನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ದೊಡ್ಡಬಳ್ಳಾಪುರ ಮೂಲದ ಹಾಗೂ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ಎಸ್‌ಬಿಐ ಶಾಖೆಯಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಧು ತೇಜ್ ಎಂದು ಗುರುತಿಸಲಾಗಿದೆ.

ಮಾಹಿತಿ ಪ್ರಕಾರ, ಮಧು ತೇಜ್ ಸೋಮವಾರ ರಾತ್ರಿ ಸುಮಾರು 9.30ರ ವೇಳೆಗೆ ಲಾಡ್ಜ್‌ಗೆ ಆಗಮಿಸಿ, ತಾವು ಒಬ್ಬರೇ ಉಳಿದು ಬೆಳಗ್ಗೆ ಕೊಠಡಿ ಖಾಲಿ ಮಾಡುವುದಾಗಿ ತಿಳಿಸಿ ಕೊಠಡಿ ಪಡೆದಿದ್ದರು. ಆದರೆ ಮರುದಿನ ಬೆಳಗ್ಗೆಯಿಂದ ಕೊಠಡಿಯಿಂದ ಯಾವುದೇ ಚಲನವಲನ ಕಂಡುಬರದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಂದಿರಲಿಲ್ಲ.

ಇದನ್ನೂ ಓದಿ: Bengaluru girl dies: ಬೆಂಗಳೂರಿನಲ್ಲಿ 2 ವರ್ಷದ ಮಗು ಅನುಮಾನಾಸ್ಪದ ಸಾವು; ಲಿವ್ ಇನ್‌ನಲ್ಲಿದ್ದ ಪೋಷಕರ ಮೇಲೆ ಶಂಕೆ

ನಂತರ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೊಠಡಿಯಲ್ಲಿ ಮಧು ತೇಜ್ ಮೃತಪಟ್ಟಿರುವುದು ಪತ್ತೆಯಾಗಿದ್ದು, ಮೃತದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಧು ತೇಜ್ ವಿವಾಹಿತರಾಗಿದ್ದು, ನಾಲ್ಕು ಮತ್ತು ಎಂಟು ವರ್ಷದ ಇಬ್ಬರು ಪುತ್ರರಿದ್ದಾರೆ. ಮನೆಯಲ್ಲಿ ಯಾವುದೇ ಗಲಾಟೆ ಅಥವಾ ಸಮಸ್ಯೆ ಇರಲಿಲ್ಲ ಎಂದು ಮೃತರ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗೌರಿಬಿದನೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.