ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Murder case: ಪತಿಯ ಬಿಟ್ಟು ಪ್ರಿಯಕರನೊಂದಿಗೆ ಓಡಿಹೋದ ಯುವತಿಯ ಕೊಂದು ಸುಟ್ಟುಹಾಕಿದ ಕುಟುಂಬಸ್ಥರು

ಮನೆ ಬಿಟ್ಟು ಹೋಗಿದ್ದ ಸತ್ಯವ್ವಳನ್ನು ಆಕೆಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ. ಮಾರ್ಚ್ 13ರಂದು ಆಕೆಯನ್ನು ಕೊಲೆ ಮಾಡಿದ ಕುಟುಂಬಸ್ಥರು, ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಯಮಕನಮರಡಿ, ಏ.14: ತನ್ನ ಪತಿಯನ್ನು (husband) ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮರ್ಯಾದೆ ನಾಶ ಮಾಡಿದಳು ಎಂಬ ಕಾರಣಕ್ಕೆ ಕುಟುಂಬದವರೇ ಯುವತಿಯೊಬ್ಬಳನ್ನು ಹತ್ಯೆ (Murder case) ಮಾಡಿ, ಸಾಕ್ಷ್ಯ ನಾಶಕ್ಕಾಗಿ ಶವವನ್ನು ಸುಟ್ಟು ಹಾಕಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಯಮಕನಮರಡಿ (Yamaanamaradi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹಳವಿ (24) ಎಂಬಾಕೆಯೇ ಕೊಲೆಯಾದ ದುರ್ದೈವಿ. ಸತ್ಯವ್ವಳಿಗೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಆಕೆ ತನ್ನ ಪತಿಯನ್ನು ಬಿಟ್ಟು ತಾನು ಪ್ರೀತಿಸುತ್ತಿದ್ದ ಕೃಷ್ಣಾ ಪಾಟೀಲ (28) ಎಂಬಾತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಈ ಹಿಂದೆ ನಾಪತ್ತೆ ದೂರು ಕೂಡ ದಾಖಲಾಗಿತ್ತು.

ಮನೆ ಬಿಟ್ಟು ಹೋಗಿದ್ದ ಸತ್ಯವ್ವಳನ್ನು ಆಕೆಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ. ಮಾರ್ಚ್ 13ರಂದು ಆಕೆಯನ್ನು ಕೊಲೆ ಮಾಡಿದ ಕುಟುಂಬಸ್ಥರು, ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕಾಶ ಹಳವರ (ಯುವತಿಯ ಚಿಕ್ಕಪ್ಪ), ಶಾನೂರ ಹಳವರ (ಯುವತಿಯ ಸಹೋದರ), ಮೊರಬದ ಕಲ್ಲಪ್ಪ (ಯುವತಿಯ ಸಹೋದರಿಯ ಪತಿ)

Dharwad Murder Case: ಧಾರವಾಡ ಯುವ ಕಾಂಗ್ರೆಸ್ ನಾಯಕ ಹತ್ಯೆ ಕೇಸ್‌; 8 ಆರೋಪಿಗಳ ಬಂಧನ

ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪ್ರಾಥಮಿಕ ತನಿಖೆಯ ಪ್ರಕಾರ ಈ ಕೃತ್ಯವು ಮಹಾರಾಷ್ಟ್ರದ ಮಿರಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಹರೀಶ್‌ ಕೇರ

View all posts by this author