Assault Case: ರೌಡಿಶೀಟರ್‌ನ ಕೈ ಮುರಿದು, ಕಣ್ಣಿಗೆ ಇರಿದ ಪತ್ನಿ! ಪೊಲೀಸ್ ಠಾಣೆಗೆ ಓಡಿ ಬಂದ ಗಂಡ!
2ನೇ ಪತ್ನಿಯನ್ನು ಬಿಡು ಎಂದು ಮೊದಲ ಹೆಂಡತಿ ಈ ರೌಡಿಶೀಟರ್‌ಗೆ ತಗುಲಿಕೊಂಡು ಚೆನ್ನಾಗಿ ಗೂಸಾ ಕೊಟ್ಟಿದ್ದಾಳೆ. ಅವನ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಕೂಡ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ಬೆಚ್ಚಿಬಿದ್ದಿರುವ ಸೈಯದ್ ಅಸ್ಗರ್ ಪತ್ನಿ ವಿರುದ್ಧ ಜೆಜೆ ನಗರ ಠಾಣೆಗೆ ಓಡಿಬಂದು ದೂರು ನೀಡಿದ್ದಾರೆ. ಆತನಿಗೆ ಎರಡನೇ ಪತ್ನಿ ಸಾಥ್ ಕೊಟ್ಟಿದ್ದಾಳೆ.
ರೌಡಿಶೀಟರ್ ಪತ್ನಿ -
ಬೆಂಗಳೂರು, ಜ.06: ಜನರ ಹಾಗೂ ಖಾಕಿಯ ಭಯವಿಲ್ಲದ ರೌಡಿಶೀಟರ್ (rowdy sheeter) ಒಬ್ಬ ಇದೀಗ ತನ್ನ ಪತ್ನಿಯ ಅವತಾರವನ್ನು ಕಂಡು ಕಂಗಾಲಾಗಿದ್ದಾನೆ ಮಾತ್ರವಲ್ಲದೆ ಆಕೆಯಿಂದ ತೀವ್ರ ಹಲ್ಲೆಗೀಡಾಗಿ (Assault case) ಪೊಲೀಸ್ ಠಾಣೆಗೆ ಓಡಿಬಂದಿದ್ದಾನೆ. ರೌಡಿಶೀಟರ್ ಸೈಯದ್ ಅಸ್ಗರ್ ಎಂಬಾತ ತಾನಾಗಿಯೇ ಪೊಲೀಸರ ಬಳಿ ಓಡೋಡಿ ಬಂದಿದ್ದು, ತನ್ನನ್ನು ತನ್ನ ಹೆಂಡತಿಯ ಕೈಯಿಂದ ರಕ್ಷಿಸಿ ಎಂದು ಮೊರೆಯಿಟ್ಟಿದ್ದಾನೆ.
ರೌಡಿಶೀಟರ್ ಸೈಯದ್ ಅಸ್ಗರ್ ಹೆಂಡತಿ ಅಂದರೆ ಬೆಚ್ಚಿ ಬೀಳುತ್ತಾನೆ. ಗಾಂಜಾ ಪೆಡ್ಲಿಂಗ್, ಕಳ್ಳತನ, ಕೊಲೆ ಯತ್ನದಂತಹ ಗಂಭೀರ ಆರೋಪ ಹೊಂದಿರೋ ಈತ ಕೇಸ್‌ಗಳಿಗೆ ಸಂಬಂಧಿಸಿ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದ. ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ಈತ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ. ವಿಶೇಷ ಅಂದ್ರೆ ಪ್ರತಿಬಾರಿ ಆರೋಪಿಯಾಗಿ ಬರ್ತಿದ್ದ ಈತ ಈ ಬಾರಿ ಸಂತ್ರಸ್ತನಾಗಿ ಬಂದಿದ್ದಾನೆ. ಕಾರಣ ಈತನ ಮೊದಲ ಪತ್ನಿ.
ಈತ ಇನ್ನೊಬ್ಬಳನ್ನೂ ಕಟ್ಟಿಕೊಂಡಿದ್ದಾನೆ. ಆ 2ನೇ ಪತ್ನಿಯನ್ನು ಬಿಡು ಎಂದು ಮೊದಲ ಹೆಂಡತಿ ಈ ರೌಡಿಶೀಟರ್‌ಗೆ ತಗುಲಿಕೊಂಡು ಚೆನ್ನಾಗಿ ಗೂಸಾ ಕೊಟ್ಟಿದ್ದಾಳೆ. ಅವನ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಕೂಡ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ಬೆಚ್ಚಿಬಿದ್ದಿರುವ ಸೈಯದ್ ಅಸ್ಗರ್ ಪತ್ನಿ ವಿರುದ್ಧ ಜೆಜೆ ನಗರ ಠಾಣೆಗೆ ಓಡಿಬಂದು ದೂರು ನೀಡಿದ್ದಾರೆ. ಆತನಿಗೆ ಎರಡನೇ ಪತ್ನಿ ಸಾಥ್ ಕೊಟ್ಟಿದ್ದಾಳೆ.
ರೌಡಿಶೀಟರ್ ಸೈಯದ್ ಅಸ್ಗರ್ ಮೊದಲ ಪತ್ನಿ ಈ ಮೊದಲು ಕೂಡ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಳು. ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯ್ತಿರು ಎಂದು ವಾರ್ನಿಂಗ್ ಮಾಡಿದ್ದಳು. ಮಚ್ಚು ಮತ್ತು ಬಾಕು ಹಿಡಿದು ವಿಡಿಯೋ ಮಾಡಿದ್ದ ಬೆನ್ನಲ್ಲೇ ಪತಿಯ ಮೇಲೆ ಆಕೆ ಅಟ್ಯಾಕ್ ಮಾಡಿದ್ದಾಳೆ. ಸದ್ಯ ರೌಡಿಶೀಟರ್ನಿಂದ ದೂರು ಪಡೆದಿರುವ ಪೊಲೀಸರು, ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟು ದಿನ ಬೇರೆಯವರಿಗೆ ಬೆದರಿಕೆ ಹಾಕುತ್ತಿದ್ದ ಸೈಯದ್ ಅಸ್ಗರ್ ಈಗ ಪತ್ನಿಯ ನೆರಳು ಕಂಡರೆ ಬೆಚ್ಚಿ ಓಡುವಂತಾಗಿರುವುದು ತಮಾಷೆ.