ಬೆಂಗಳೂರು, ಫೆ.11 : ಬೆಂಗಳೂರಿನಲ್ಲಿ (Bengaluru Crime News) ಪ್ರೇಮವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೈಯ್ಯದ್ ಇಮ್ತಿಯಾಜ್ ಎಂಬ ಬೆಂಗಳೂರು ಮೂಲದ ಯುವಕ ಹಿಂದೂ ಯುವತಿಯೊಬ್ಬಳನ್ನು (hindu girl) ಮದುವೆಯಾಗಿ (Marriage) ನಂತರ ಆಕೆಗೆ ಕೈ ಕೊಟ್ಟಿದ್ದು, ಇದೀಗ ಯುವತಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಆಗಿರುವ ಸೈಯದ್ ಇಮ್ತಿಯಾಜ್, ಸಾಮಾಜಿಕ ಜಾಲತಾಣದಲ್ಲಿ ಕೊಲ್ಕತ್ತಾದ ಹಿಂದೂ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ಆ ಯುವತಿಯನ್ನು ಈತನೇ ಇಸ್ಲಾಮಿಗೆ ಪರಿವರ್ತನೆ ಮಾಡಿ ನಂತರ ಜೈನಾದ್ ಎಂದು ಮರು ನಾಮಕರಣ ಮಾಡಿದ್ದ. 2025ರ ಜುಲೈ 18ನೇ ತಾರೀಕು ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದಾರೆ.
2025ರಲ್ಲಿ ಆಕೆಗೆ ಮೊದಲ ಬಾರಿಗೆ ಗರ್ಭಪಾತ ಮಾಡಿಸಿದ್ದ. ಬಳಿಕವೂ ಯುವತಿ ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಕೋಲ್ಕತ್ತಾದಲ್ಲಿ ತಾಯಿ ಮಗುವನ್ನು ಬಿಟ್ಟು ಸೈಯದ್ ಪರಾರಿ ಆಗಿದ್ದಾನೆ. ಈ ಕುರಿತು ಆತನ ವಿರುದ್ಧ ಯುವತಿ ದೂರು ದಾಖಲು ಮಾಡಿದ್ದು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ.
Love Jihad: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ಡ್ ವಿವಾಹ, ಲವ್ ಜಿಹಾದ್ ಆರೋಪ, ಹೆತ್ತವರ ದೂರು