ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Love Jihad: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ಡ್‌ ವಿವಾಹ, ಲವ್‌ ಜಿಹಾದ್‌ ಆರೋಪ, ಹೆತ್ತವರ ದೂರು

ಕೇರಳದ‌ ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಇರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ. ಅತ್ತ ಮೀಪುಗುರಿ ಮೂಲದ 23 ವರ್ಷದ ಯುವತಿ ಮಂಗಳೂರು ಸುರತ್ಕಲ್‌ನಲ್ಲಿರುವ ಕಾಲೇಜ್ ಒಂದರಲ್ಲಿ ಓದುತ್ತಾ ಇದ್ದಳು. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.‌ ಇಬ್ಬರೂ ಕೇರಳದ ವಯನಾಡಿನಲ್ಲಿರುವ ರಿಜಿಸ್ಟರ್ ಆಫೀಸ್‌ನಲ್ಲಿ ಜನವರಿ 31ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ.

ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ರಿಜಿಸ್ಟರ್ಡ್‌ ವಿವಾಹ, ಹೆತ್ತವರ ದೂರು

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Feb 11, 2026 7:52 AM

ಮಂಗಳೂರು, ಫೆ.11: ಹಿಂದೂ ಯುವತಿಯೊಬ್ಬಳು (Hindu girl) ಮುಸ್ಲಿಂ ಯುವಕನೊಂದಿಗೆ (Muslim man) ರಿಜಿಸ್ಟರ್ ಮ್ಯಾರೇಜ್ (registered marriage) ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಯುವತಿ ಕಾಸರಗೋಡಿನ (Kasaragod) ಮೀಪುಗುರಿ ಪ್ರದೇಶದ ನಿವಾಸಿಯಾಗಿದ್ದು, ಕೇರಳದ (Kerala) ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದು, ರಿಜಿಸ್ಟರ್ ಮ್ಯಾರೇಜ್ ಆಗಿದ್ದಾಳೆ. ಇದೀಗ ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ (love jihad) ಅಂತ ಆರೋಪಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ‌ ವಯನಾಡು ಮೂಲದ ಮಹಮ್ಮದ್ ಮಿಲ್ದಾಜ್ ಎಂಬ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಇರುವ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ. ಅತ್ತ ಮೀಪುಗುರಿ ಮೂಲದ 23 ವರ್ಷದ ಯುವತಿ ಮಂಗಳೂರು ಸುರತ್ಕಲ್‌ನಲ್ಲಿರುವ ಕಾಲೇಜ್ ಒಂದರಲ್ಲಿ ಓದುತ್ತಾ ಇದ್ದಳು. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.

ಇಬ್ಬರೂ ಕೇರಳದ ವಯನಾಡಿನಲ್ಲಿರುವ ರಿಜಿಸ್ಟರ್ ಆಫೀಸ್‌ನಲ್ಲಿ ಕಳೆದ ಜನವರಿ 31ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ಅತ್ತ ಮಗಳು ರಿಜಿಸ್ಟರ್ ಮದುವೆಯಾಗುತ್ತಿದ್ದಂತೆ, ಇತ್ತ ಅದರ ಬಗ್ಗೆ ಬಗ್ಗೆ ಗೊತ್ತಾಗಿ ಆಕೆ ವಾಸ್ತವ್ಯವಿದ್ದ ಪಿಜಿಗೆ ಬಂದು ಆಕೆಯ ಪೋಷಕರು ವಿಚಾರಿಸಿದ್ದಾರೆ. ಪಿಜಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕೆಲವು ವಿಚಾರ ಬೆಳಕಿಗೆ ಬಂದಿದೆ. ಆಕೆ ಫೆಬ್ರವರಿ 9ರಂದು ಪಿಜಿಯಿಂದ ತೆರಳಿದ ವಿಡಿಯೋ ಸೆರೆಯಾಗಿದೆ. ಅದಾದ ಮೇಲೆ ಮಗಳು ಸಂಪರ್ಕಕ್ಕೆ ಸಿಗದೇ ಪೋಷಕರು ಕಂಗಾಲಾಗಿದ್ದಾರೆ. ಮಗಳು ಸಂಪರ್ಕಕ್ಕೆ ಸಿಗದೇ ಇರುದ್ದರಿಂದ ಸುರತ್ಕಲ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ನೀಡಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣ ಅಂತ ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.

Love jihad: ಶ್ರದ್ಧಾ ಥರ ಕತ್ತರಿಸಿ ಹಾಕುವೆ ಎಂದು ಯುವತಿಗೆ ಬೆದರಿಕೆ; ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್‌