ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Robbery Case: ನಂಬಿಸಿ ಮನೆ ದೋಚಿದ ನೇಪಾಳಿ ಗ್ಯಾಂಗ್‌, 18 ಕೋಟಿ ರೂ. ಲೂಟಿ!

20 ದಿನದ ಹಿಂದೆ ನೇಪಾಳಿ ಮೂಲದವರು ಎನ್ನಲಾದ ದಿನೇಶ್ ಹಾಗೂ ಕಮಲಾ ದಂಪತಿಯನ್ನು ಕೆಲಸಕ್ಕೆ ಎಂದು ಸೇರಿಸಿಕೊಳ್ಳಲಾಗಿತ್ತು. ಆಧಾರ್‌ ಕಾರ್ಡ್‌ ಕೇಳಿದಾಗ ಹಳೆ ಮನೆಯಲ್ಲಿದೆ. ಕೊಡುತ್ತೇವೆ ಎಂದು ನಂಬಿಸಿದ್ದರು. 20 ದಿನದಲ್ಲಿ ಮನೆಯವರ ನಂಬಿಕೆ ಗಳಿಸಿದ್ದ ಈ ಖತರ್ನಾಕ್ ದಂಪತಿ, ಲಾಕರ್​ಗಳನ್ನು ಒಡೆದು ಕೋಟ್ಯಂತರ ಮೌಲ್ವದ ಸೊತ್ತು ದೋಚಿ ಪರಾರಿಯಾಗಿದ್ದಾರೆ.

ನಂಬಿಸಿ ಮನೆ ದೋಚಿದ ನೇಪಾಳಿ ಗ್ಯಾಂಗ್‌, 18 ಕೋಟಿ ರೂ. ಲೂಟಿ!

ಶಂಕಿತ ದಂಪತಿ ಹಾಗೂ ಮನೆ -

ಹರೀಶ್‌ ಕೇರ
ಹರೀಶ್‌ ಕೇರ Jan 29, 2026 4:33 PM

ಬೆಂಗಳೂರು, ಜ.29: ರಾಜ್ಯದಲ್ಲಿ ದರೋಡೆಗಳು (Bengaluru crime news) ಎಗ್ಗಿಲ್ಲದೆ ನಡೆಯುತ್ತಿವೆ. ಜ್ಯುವೆಲ್ಲರಿ ಅಂಗಡಿ, ಬ್ಯಾಂಕ್‌, ಎಟಿಎಂ ವಾಹನಗಳ ಬಳಿಕ ಇದೀಗ ಮನೆ ದರೋಡೆ. ಮನೆ ಕೆಲಸಕ್ಕೆ ಎಂದು ಬಂದು ಸೇರಿಕೊಂಡ ನೇಪಾಳಿ ದಂಪತಿ, ಮನೆಯಿಂದ ಸುಮಾರು 18 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ದೋಚಿ (Robbery case) ಎಸ್ಕೇಪ್‌ ಆಗಿದೆ. ಮಾರತ್ತಹಳ್ಳಿ ಸಮೀಪದ ಯಮಲೂರಿನಲ್ಲಿ ಈ ಘಟನೆ ನಡೆದಿದೆ.

ದರೋಡೆಗೊಳಗಾದ ಮನೆ ಬಿಲ್ಡರ್ ಶಿವಕುಮಾರ್​ ಎಂಬವರಿಗೆ ಸೇರಿದ್ದು. ಇತ್ತೀಚೆಗಷ್ಟೇ ಶಿವಕುಮಾರ್​​ ತಮ್ಮ ಪುತ್ರನಿಗೆ ಮದುವೆ ಮಾಡಿಸಿದ್ದರು. ಹಳೇ ಮನೆ ಆಗಿರುವುದರಿಂದ ರಿನೋವೇಶನ್ ಕೆಲಸ ಮಾಡಿಸುತ್ತಿದ್ದರು. ಕಳೆದ 9 ತಿಂಗಳಿಂದ ಮನೆ ಕೆಲಸಕ್ಕೆ ವಿಕಾಸ್ ಹಾಗೂ ಮಾಯಾ ಎಂಬ ನೇಪಾಳ ಮೂಲದ ದಂಪತಿ ಇದ್ದರು. ಆದರೆ ಇತ್ತೀಚೆಗೆ ಕೆಲಸ ಬಿಡುತ್ತೇವೆ ಎಂದದ್ದರಿಂದ, ಮನೆ ಮಾಲೀಕರು ಯಾರನ್ನಾದ್ರೂ ಕೆಲಸಕ್ಕೆ ಸೇರಿಸಿ ಹೋಗಿ ಎಂದಿದ್ದರು. ಅದರಂತೆ 20 ದಿನದ ಹಿಂದೆ ಇದೇ ದಿನೇಶ್ ಹಾಗೂ ಕಮಲಾ ದಂಪತಿಯನ್ನು ಕೆಲಸಕ್ಕೆ ಎಂದು ಸೇರಿಸಿಕೊಳ್ಳಲಾಗಿತ್ತು. ಮನೆಯವರ ನಂಬಿಕೆ ಗಳಿಸಿದ್ದ ಈ ಖತರ್ನಾಕ್ ದಂಪತಿ, ಲಾಕರ್​ಗಳನ್ನು ಒಡೆದು ದೋಚಿ ಪರಾರಿಯಾಗಿದ್ದಾರೆ.

ʼಕಮಲಾ ಹಾಗೂ ದಿನೇಶ್ ಎಂಬವರನ್ನು ನಮ್ಮಲ್ಲಿ ಸೇರಿಸಿದ್ದರು. ನಮ್ಮ ಮನೆಯ ಸೂಪರ್ ವೈಸರ್ 18 ವರ್ಷಗಳಿಂದ ಇದ್ದ. ಆಧಾರ್ ಕಾರ್ಡ್ ಕೇಳಿದರೆ ಹಳೆ ಮನೆಯಲ್ಲಿದೆ, ಇನ್ನೂ ಸಂಬಳ ಬಂದಿಲ್ಲ ಕೊಡ್ತೀವಿ ಅಂತ ಹೇಳಿದ್ದರು. ಆದರೆ ಕೆಲಸಕ್ಕೆ ಬಂದು 22 ದಿನಗಳಲ್ಲೇ ಈ ರೀತಿ ಮಾಡಿದ್ದಾರೆʼ ಎಂದು ಶಿವಕುಮಾರ್‌ ಹೇಳಿದ್ದಾರೆ. ಫೇಸ್​​​​ಬುಕ್‌ನಲ್ಲಿ ಪೋಸ್ಟ್ ನೋಡಿ ಕೆಲಸ ಕೇಳಿಕೊಂಡು ಬಂದಿದ್ದೇವೆ ಎಂದು ನಮಗೆ ಹೇಳಿದ್ದರು. ಆದರೆ ಈ ಘಟನೆಯಾದ ಬಳಿಕ ಇದು ಮೊದಲೇ ಪ್ಲ್ಯಾನ್ ಮಾಡಿ ಮಾಡಿದ್ದಾರೆ ಅನ್ನೋ ಅನುಮಾನ ಎದುರಾಗಿದೆ ಎಂದು ಮನೆ ಮಾಲೀಕರ ಪುತ್ರಿ ಮಾನಸ ತಿಳಿಸಿದ್ದಾರೆ.

Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ

ಮನೆಯಲ್ಲಿದ್ದ 11 ಕೆಜಿ ಚಿನ್ನ, ವಜ್ರ, ಬೆಳ್ಳಿ ಕಳೆದುಕೊಂಡು ಶಿವಕುಮಾರ್ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮಾರತ್ತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ನೇಪಾಳಿ ಮೂಲದ ದಂಪತಿ ಮತ್ತು ಅವರ ಗ್ಯಾಂಗ್‌ ಪತ್ತೆಗೆ ಬಲೆ ಬೀಸಿದ್ದಾರೆ.