ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾದ 15ನೇ ದಿನಕ್ಕೆ ನವವಧು ಎಸ್ಕೇಪ್; ಬ್ರೋಕರ್‌ಗಳ ಮಾತು ನಂಬಿ ಕೆಟ್ಟ ಯುವಕ!

marriage fraud: ಆಂಧ್ರ ಪ್ರದೇಶ ಮೂಲದ ಭಾಸ್ಕರ್ ಎಂಬಾತ​ ಬ್ರೋಕರ್​ಗಳ ಮೂಲಕ ಹುಡುಗಿಯನ್ನು ಹುಡುಕಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಆದರೆ, ಮದುವೆಯಾದ ಎರಡೇ ವಾರಕ್ಕೆ ಯುವತಿ ಪರಾರಿಯಾಗಿದ್ದಾಳೆ.

ಮದುವೆಯಾದ 15ನೇ ದಿನಕ್ಕೆ ನವವಧು ಎಸ್ಕೇಪ್!

ಮದುವೆಯಾಗಿ ಮೋಸ ಹೋದ ಭಾಸ್ಕರ್. -

Prabhakara R
Prabhakara R Mar 18, 2026 10:04 PM

ಚಿಕ್ಕಬಳ್ಳಾಪುರ: ಮದುವೆಯಾದ 15ನೇ ದಿನಕ್ಕೆ ನವವಧು ಓಡಿ ಹೋಗಿರುವ ಘಟನೆ (marriage fraud) ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ರೋಕರ್​ಗಳ ಮಾತು ನಂಬಿ ಕೆಟ್ಟ ಪತಿ ಇದೀಗ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಆಂಧ್ರ ಮೂಲದ ಭಾಸ್ಕರ್​ ಬ್ರೋಕರ್​ಗಳ ಮೂಲಕ ಹುಡುಗಿಯನ್ನು ಹುಡುಕಿದ್ದ. ಹುಡುಗಿ ನೋಡಿದ ದಿನವೇ ಮದುವೆಯಾಗಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದ ನೇತ್ರಾಳನ್ನು ವರಿಸಿದ್ದ. ಬಳಿಕ ಚಿಂತಾಮಣಿ ತಾಲೂಕಿನ ಗೌನಿಚೆರುವುಪಲ್ಲಿಯಲ್ಲಿರುವ ಭಾಸ್ಕರ್​ ಪತಿಯ ಮಾವ ವೆಂಕಟರಮಣರೆಡ್ಡಿ ಮನೆಯಲ್ಲಿದ್ದರು.

ಈ ನಡುವೆ ಮದನಪಲ್ಲಿಗೆ ಹೋಗಿ ಬರುತ್ತೇನೆ ಎಂದು ಯುವಕ ತೆರಳಿದ್ದ. ಆತ ವಾಪಸ್‌ ಬರುವಷ್ಟರಲ್ಲೇ ಹೆಂಡತಿ ನೇತ್ರಾ ಎಸ್ಕೇಪ್ ಆಗಿದ್ದಾಳೆ. ಅಲ್ಲದೆ ಮನೆಯಲ್ಲಿದ್ದ ಒಡವೆಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಸದ್ಯ, ಘಟನೆ ಸಂಬಂಧ ಗಂಡ ಭಾಸ್ಕರ್​ ರೆಡ್ಡಿ, ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Murder Case: ತಮ್ಮನಿಗೆ ನಿಶ್ಚಯವಾದ ಹುಡುಗಿ ಮೇಲೆ ದುರಾಸೆ, ಕಲ್ಲೆತ್ತಿ ಹಾಕಿ ಕೊಂದ ಅಣ್ಣ!

ಯುವತಿ ಹಿನ್ನೆಲೆ ಗೊತ್ತಿಲ್ಲದೆ ನೇತ್ರಾಳನ್ನು ಯುವಕ ಭಾಸ್ಕರ್‌ ಮದುವೆಯಾಗಿದ್ದ. ಆದರೆ ಆಕೆಗೆ ಈ ಮೊದಲೇ ಮದುವೆಯಾಗಿ, ಮಕ್ಕಳಿದ್ದರು ಎಂಬ ವಿಚಾರ ತಿಳಿದುಬಂದಿದೆ. ಬ್ರೋಕರ್​ಗಳ ಮೋಸಕ್ಕೆ ಯುವಕನ ಜೀವನ ಬಲಿಯಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.