ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಟೆಕ್ಕಿ, ಸ್ನೇಹಿತನ ಕಿಡ್ನಾಪ್ ಪ್ರಕರಣದಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌: ಅಪಹರಣಕ್ಕೊಳಗಾದವನ ಮೇಲೆಯೇ ಅತ್ಯಾಚಾರ ಆರೋಪ

Bengaluru Techie, Friend Kidnapped: ಬೆಂಗಳೂರಿನ ಮಾರತಹಳ್ಳಿಯಿಂದ 23 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಆತನ ರೂಮ್‌ಮೇಟ್ ಹಣಕ್ಕಾಗಿ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ದೂರು ದಾಖಲಾದ 6 ಗಂಟೆಗಳಲ್ಲಿ ಇಬ್ಬರನ್ನೂ ರಕ್ಷಿಸಲಾಯಿತು. ಒಬ್ಬ ಯುವತಿ ಸೇರಿ 11 ಜನರನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 29: ಬುಧವಾರ (ಅ. 28) ಬೆಳಗಿನ ಜಾವ ಬೆಂಗಳೂರಿನ (Bengaluru) ಮಾರತಹಳ್ಳಿಯಿಂದ 23 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಆತನ ರೂಮ್‌ಮೇಟ್‌ನನ್ನು ಹಣಕ್ಕಾಗಿ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ (crime news). ದೂರು ದಾಖಲಾದ 6 ಗಂಟೆಗಳಲ್ಲಿ ಇಬ್ಬರನ್ನೂ ರಕ್ಷಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಒಬ್ಬ ಯುವತಿ ಸೇರಿದಂತೆ 11 ಜನರನ್ನು ಬಂಧಿಸಿದ್ದಾರೆ. ಈ ಮಧ್ಯೆ ಅಪಹರಿಸಲ್ಪಟ್ಟ ಎಂಜಿನಿಯರ್ ವಿರುದ್ಧವೇ ಅತ್ಯಾಚಾರ ದೂರು ದಾಖಲಾಗಿದೆ.

ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಿ. ಮಹೇಂದ್ರ ಮತ್ತು ಆಂಧ್ರ ಪ್ರದೇಶ ಮೂಲದ ಆತನ ರೂಮ್‌ಮೇಟ್ ತರುಣ್‌ನನ್ನು (23) ಬುಧವಾರ ಬೆಳಗಿನ ಜಾವ 2.50ರಿಂದ ಬೆಳಗ್ಗೆ 6 ಗಂಟೆಯ ನಡುವೆ ಅಪಹರಿಸಲಾಗಿತ್ತು. ಮಹೇಂದ್ರ ಅವರ ತಂದೆ ಬಿ. ರಮಣ ಅದೇ ದಿನ ಮಾರತಹಳ್ಳಿ ಪೊಲೀಸರನ್ನು ಸಂಪರ್ಕಿಸಿ ಮಗನನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದರು.

ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಆಧುನಿಕ ತನಿಖಾ ತಂತ್ರಗಳನ್ನು ಬಳಸಿ ಶಂಕಿತರನ್ನು ಪತ್ತೆಹಚ್ಚಿ ಮಹೇಂದ್ರ ಮತ್ತು ತರುಣ್ ಅವರನ್ನು ರಕ್ಷಿಸಿದರು.

ಸಂಜೆ ಸಂಚು, ರಾತ್ರಿ ಪರಾರಿ! ಅಪಸ್ಮಾರದ ನಾಟಕವಾಡಿ ಜೈಲಿನಿಂದ ತಪ್ಪಿಸಿಕೊಂಡ 17 ಕೈದಿಗಳ ಪ್ಲ್ಯಾನ್‌ ರಿವೀಲ್‌

ಅಪಹರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಪೊಲೀಸರು 21 ವರ್ಷದ ಮಹಿಳೆ ಸೇರಿ 11 ಜನರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಹಣಕ್ಕಾಗಿ ಇಬ್ಬರನ್ನು ಅಪಹರಿಸಲು ಒಟ್ಟಾಗಿ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗಾಲೇಟಿ ರಾಜ್‌ಕುಮಾರ್ ಅಲಿಯಾಸ್ ರಾಜ್ (24), ಮರ್ರಿಪಾಟಿ ಮಂಜುನಾಥ್ ಅಲಿಯಾಸ್ ಮಂಜು (23), ಚಿನಿಗೆಪಲ್ಲಿ ಲೋಕನಾಥ್ (22), ಬಂಡ್ಲವಳ್ಳಿ ಸುಹೇಲ್ (22), ಗಂಗರೆಡ್ಡಿಗೇರಿ ನರೇಂದ್ರ ರೆಡ್ಡಿ (22), ಶಿವ ಸುಬ್ರಹ್ಮಣ್ಯಂ (24), ಸಲೀಂ ಪಾಷಾ (30), ನಯೀಮ್ ಪಾಷಾ (31), ಶಾಬಾಜ್, (26), ಗಾಲಿ ರಾಜೇಶ್ (20) ಮತ್ತು 21 ವರ್ಷದ ಯುವತಿ ಎಂದು ಗುರುತಿಸಲಾಗಿದೆ.

ಮಹೇಂದ್ರನ ವಿರುದ್ಧವೇ ಆರೋಪ

ಇನ್ನು ಅಪಹರಣ ಪ್ರಕರಣದಲ್ಲಿ ಬಂಧಿಸಲ್ಪಟ್ಟ 21 ವರ್ಷದ ಯುವತಿಯು ಅತ್ಯಾಚಾರದ ಆರೋಪ ಮಾಡಿದ್ದಾಳೆ. ಅಕ್ಟೋಬರ್ 24ರಂದು ಬೆಳಗಿನ ಜಾವ 1.30ರಿಂದ ಬೆಳಗಿನ ಜಾವ 4 ಗಂಟೆಯ ನಡುವೆ ಮಹೇಂದ್ರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿ ಪ್ರತ್ಯೇಕ ದೂರು ದಾಖಲಿಸಿದ್ದಾಳೆ.

ಆಕೆಯ ದೂರಿನ ಆಧಾರದ ಮೇಲೆ, ಮಾರತಹಳ್ಳಿ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ನಂತರ ಮಹೇಂದ್ರ ಮತ್ತು ತರುಣ್‌ನನ್ನು ಬಂಧಿಸಿದ್ದಾರೆ. ಅಪಹರಣ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿದೆ. ಹೆಚ್ಚಿನ ತನಿಖೆಗಾಗಿ ಅವರನ್ನು ಕಸ್ಟಡಿಗೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.