10 ಕೋಟಿ ರುಪಾಯಿ ನೀಡುವಂತೆ ಪಂಜಾಬಿ- ಬಾಲಿವುಡ್ ಖ್ಯಾತ ಗಾಯಕನಿಗೆ ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ
ಪಂಜಾಬಿ-ಬಾಲಿವುಡ್ ನ ಖ್ಯಾತ ಗಾಯಕ ಬಿ ಪ್ರಾಕ್ ಅವರಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆ ಬಂದಿದೆ. ಆರೋಪಿಗಳು 10 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ನೆಲದಲ್ಲಿ ಹೂತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಮೊಹಾಲಿ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಮೊಹಾಲಿ: ಪಂಜಾಬಿ-ಬಾಲಿವುಡ್ ಗಾಯಕನಿಗೆ (Punjabi-Bollywood singer) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi gang) ನಿಂದ ಕೊಲೆ ಬೆದರಿಕೆ ಬಂದಿದೆ. ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿರುವೆ ಎಂದು ಹೇಳಿರುವ ವ್ಯಕ್ತಿಯೊಬ್ಬ ಗಾಯಕ ಬಿ ಪ್ರಾಕ್ (Singer B Praak) ಅವರಿಗೆ ಕರೆ ಮಾಡಿ 10 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದಾನೆ. ತನ್ನ ಬೇಡಿಕೆ ಈಡೇರಿಸದಿದ್ದರೆ ನೆಲದೊಳಗೆ ಹೂತು ಹಾಕುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಈ ಕುರಿತು ಮೊಹಾಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಶನಿವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 5ರಂದು ಬಿ ಪ್ರಾಕ್ ಅವರೊಂದಿಗೆ ಸಂಪರ್ಕ ಹೊಂದಿರುವ ಪಂಜಾಬಿ ಗಾಯಕ ದಿಲ್ನೂರ್ ಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿದೆ. ಆದರೆ ದಿಲ್ನೂರ್ ಕರೆಗೆ ಉತ್ತರಿಸಿರಲಿಲ್ಲ. ಮರುದಿನ ಮತ್ತೆ ದಿಲ್ನೂರ್‌ಗೆ ವಿದೇಶಿ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದೆ. ಈ ಕರೆಗೆ ಸ್ವಲ್ಪ ಸಮಯದ ಬಳಿಕ ಉತ್ತರಿಸಿದ ದಿಲ್ನೂರ್, ಅನುಮಾನ ವ್ಯಕ್ತಪಡಿಸಿದಾಗ ತಕ್ಷಣವೇ ಕರೆ ಕಡಿತಗೊಂಡಿದೆ. ಬಳಿಕ ಅದೇ ಸಂಖ್ಯೆಯಿಂದ ಅವರಿಗೆ ಧ್ವನಿ ಸಂದೇಶ ಬಂದಿದೆ. ಈ ಸಂದೇಶದಲ್ಲಿ ಅಪರಿಚಿತ ತಾನು ಅರ್ಜು ಬಿಷ್ಣೋಯ್ ಎಂದು ಹೇಳಿದ್ದು, ಬಿ ಪ್ರಾಕ್‌ನಿಂದ 10 ಕೋಟಿ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಯಾದಗಿರಿಯಲ್ಲಿ ಮಾಜಿ ಸಚಿವ ರಾಜು ಗೌಡ ಕಾರು ಅಪಘಾತ; ಅಪಾಯದಿಂದ ಪಾರು
10 ಕೋಟಿ ರೂ. ಬೇಕು ಎಂದು ಬಿ ಪ್ರಾಕ್‌ಗೆ ಹೇಳಿ. ಒಂದು ವಾರದ ಸಮಯವಿದೆ. ಹಣ ನೀಡದೆ ಇದ್ದರೆ ನೀವು ಎಲ್ಲೇ ಹೋಗಿ, ಯಾವುದೇ ದೇಶದಲ್ಲಿ ಇರಿ. ಆದರೆ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿರುವ ಯಾರಾದರೂ ಹತ್ತಿರಕ್ಕೆ ಬರುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಈ ಘಟನೆಯ ಬಳಿಕ ದಿಲ್ನೂರ್ ಅವರು ಮೊಹಾಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಕರೆಯ ಮೂಲ ಮತ್ತು ಕರೆ ಮಾಡಿದವರ ಗುರುತು ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Devanahalli Accident: ದೇವನಹಳ್ಳಿಯಲ್ಲಿ ಭೀಕರ ಹಿಟ್ ಆ್ಯಂಡ್ ರನ್; ಮೂವರು ಯುವಕರ ದುರ್ಮರಣ
ಪಂಜಾಬಿ ಮತ್ತು ಹಿಂದಿ ಸಂಗೀತ ಉದ್ಯಮಗಳಿಗೆ ಸಂಬಂಧಿಸಿದ ಪ್ರಸಿದ್ಧ ಭಾರತೀಯ ಗಾಯಕರಲ್ಲಿ ಒಬ್ಬರಾಗಿರುವ ಬಿ ಪ್ರಾಕ್ ಅವರು ಸಂಗೀತ ನಿರ್ದೇಶಕ, ಸಂಯೋಜಕ ಮತ್ತು ಸಂಗೀತ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.