ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಿಲ್ಪಾ ಶೆಟ್ಟಿ ದಂಪತಿಗೆ ಮತ್ತೊಂದು ಸಂಕಷ್ಟ; ಬಿಟ್‌ಕಾಯಿನ್ ಹಗರಣದಲ್ಲಿ ಸಮನ್ಸ್ ಜಾರಿ

ಅಕ್ರಮ ಹಣ ವರ್ಗಾವಣೆ ಆರೋಪದ ಬಳಿಕ ಇದೀಗ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯವು ಕಳೆದ ಸೆಪ್ಟೆಂಬರ್‌ನಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆಗಾಗಿ ನ್ಯಾಯಾಲಯ ಇದೀಗ ಸಮನ್ಸ್ ಜಾರಿ ಮಾಡಿದೆ.

ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

(ಸಂಗ್ರಹ ಚಿತ್ರ) -

ಮುಂಬೈ: ಕಳೆದ ಡಿಸೆಂಬರ್ ನಲ್ಲಿ ಆದಾಯ ತೆರಿಗೆ ಇಲಾಖೆಯ (Income Tax Department) ದಾಳಿಯ ಬಳಿಕ ಇದೀಗ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Bollywood actress Shilpa Shetty) ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಬಳಿಕ ಬಿಟ್‌ಕಾಯಿನ್ ಹಗರಣಕ್ಕೆ (Bitcoin scam) ಸಂಬಂಧಿಸಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ (Summons To raj kundra) ಮಾಡಿದೆ. ಈ ಕುರಿತು ಜಾರಿ ನಿರ್ದೇಶನಾಲಯವು ಕಳೆದ ಸೆಪ್ಟೆಂಬರ್‌ನಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆಗಾಗಿ ಇದೀಗ ಸಮನ್ಸ್ ಜಾರಿ ಮಾಡಲಾಗಿದೆ.

ಬಿಟ್‌ಕಾಯಿನ್ ಹಗರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾಗೆ ವಿಶೇಷ ನ್ಯಾಯಾಲಯ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಆರೋಪಪಟ್ಟಿಯಲ್ಲಿ ರಾಜ್ ಕುಂದ್ರಾ ಮತ್ತು ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಇಬ್ಬರಿಗೂ ಜನವರಿ 19 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಲಾಗಿದೆ.

Priyank Kharge: ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್

ದೂರಿನಲ್ಲಿ ಏನಿದೆ?

ತನಿಖಾ ಸಂಸ್ಥೆ ನೀಡಿರುವ ದೂರಿನ ಪ್ರಕಾರ, ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಗಣಿಗಾರಿಕೆ ಫಾರ್ಮ್ ಸ್ಥಾಪಿಸಲು ಕುಂದ್ರಾ ಅವರು ಗೇನ್ ಬಿಟ್‌ಕಾಯಿನ್ ಪೊಂಜಿ ಹಗರಣದ ಮಾಸ್ಟರ್ ಮೈಂಡ್ ಅಮಿತ್ ಭಾರದ್ವಾಜ್ ನಿಂದ 285 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಬಿಟ್‌ಕಾಯಿನ್ ಗಣಿಗಾರಿಕೆ ಫಾರ್ಮ್ ಎಂಬುದು ಸಾಮಾನ್ಯ ಭಾಷೆಯಲ್ಲಿ ಇದನ್ನು ಗೋದಾಮು ಎಂದು ಕರೆಯಬಹುದು. ಬಿಟ್‌ಕಾಯಿನ್ ವಹಿವಾಟುಗಳನ್ನು ನಡೆಸಲು, ತಮ್ಮ ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸಲು, ಹೊಸ ಬಿಟ್‌ಕಾಯಿನ್‌ಗಳ ಪ್ರತಿಫಲಗಳನ್ನು ಪಡೆಯಲು ಬಳಸುವ ವಿಶೇಷ ಕಂಪ್ಯೂಟರ್‌ ಸೌಲಭ್ಯಗಳನ್ನು ಇದು ಹೊಂದಿರುತ್ತದೆ.

ರಾಜ್ ಕುಂದ್ರಾ ಅವರು ಅಮಿತ್ ಭಾರದ್ವಾಜ್ ಬಳಿ ಮಾಡಿದ ಒಪ್ಪಂದ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೀಗಾಗಿ ಕುಂದ್ರಾ ಬಳಿ ಪ್ರಸ್ತುತ 150 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ 285 ಬಿಟ್‌ಕಾಯಿನ್‌ಗಳಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ವ್ಯವಹಾರದಲ್ಲಿ ರಾಜ್ ಕುಂದ್ರಾ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ಒದಗಿಸಿಲ್ಲ. ಟರ್ಮ್ ಶೀಟ್ ಎನ್ನುವ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದು, ಇದರಲ್ಲಿ ಮಹೇಂದ್ರ ಭಾರದ್ವಾಜ್ ಎಂಬವರ ಸಹಿ ಕೂಡ ಇದೆ. ಮಹೇಂದ್ರ ಭಾರದ್ವಾಜ್ ಅವರು ಅಮಿತ್ ಭಾರದ್ವಾಜ್ ಅವರ ತಂದೆ. ಒಪ್ಪಂದ ವಾಸ್ತವವಾಗಿ ರಾಜ್ ಕುಂದ್ರಾ ಮತ್ತು ಅಮಿತ್ ಭಾರದ್ವಾಜ್ ನಡುವೆ ನಡೆದಿದ್ದರೂ ಇಲ್ಲಿ ಮಹೇಂದ್ರ ಭಾರದ್ವಾಜ್ ಸಹಿ ಏಕೆ ಹಾಕಿದ್ದಾರೆ ಎನ್ನುವ ಪ್ರಶ್ನೆಗೂ ಕುಂದ್ರಾ ಸರಿಯಾಗಿ ಹೇಳಿಕೆ ನೀಡಿಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ ಕುಂದ್ರಾ ಮತ್ತು ಅಮಿತ್ ಭಾರದ್ವಾಜ್ ನಡುವೆ ಸುಮಾರು ಏಳು ವರ್ಷಗಳಿಗೂ ಹೆಚ್ಚು ಕಾಲ ವಹಿವಾಟು ನಡೆದಿದೆ. ತಾವು ಐದು ನಿರ್ದಿಷ್ಟ ಕಂತುಗಳಲ್ಲಿ ಬಿಟ್‌ಕಾಯಿನ್‌ ಪಡೆದಿರುವುದಾಗಿ ನಿಖರವಾದ ಸಂಖ್ಯೆಯನ್ನು ಕುಂದ್ರಾ ಹೇಳಿದ್ದಾರೆ. ಅವರು ಮಾಲೀಕರಾಗಿ ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆಯೇ ಅಥವಾ ಕೇವಲ ಮಧ್ಯವರ್ತಿಯಾಗಿ ಸ್ವೀಕರಿಸಿದ್ದಾರೆಯೇ ಎನ್ನುವ ಕುರಿತು ಕೂಡ ವಿಚಾರಣೆಯಾಗಬೇಕಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಎನ್‌ಕೌಂಟರ್; ಇಬ್ಬರು ಶೂಟರ್‌ಗಳ ಬಂಧನ

2018ರ ಬಳಿಕ ಹಲವು ಅವಕಾಶಗಳಿದ್ದರೂ ಕುಂಡಾವು ಅವರು ಪಡೆದಿರುವ 285 ಬಿಟ್‌ಕಾಯಿನ್‌ಗಳಿಗೆ ವ್ಯಾಲೆಟ್ ವಿಳಾಸಗಳನ್ನು ಒದಗಿಸಿಲ್ಲ. ಈ ಬಗ್ಗೆ ಅವರು ತಮ್ಮ ಫೋನ್ ಗೆ ಹಾನಿಯಾಗಿತ್ತು. ಆದ್ದರಿಂದ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಆದರೆ ಇದು ಸಾಕ್ಷ್ಯಗಳನ್ನು ನಾಶಮಾಡಲು ಮಾಡಿರುವ ಯೋಜನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.