ಮೀರತ್, ಅ.14: ಕಳೆದ ವರ್ಷ ನಡೆದ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್ಪೂತ್ ಅವರ ಕೊಲೆ ಪ್ರಕರಣದಲ್ಲಿ, ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಉತ್ತರ ಪ್ರದೇಶದ (Uttar Pradesh) ಮೀರತ್ನ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಎರಡು ವಾರಗಳ ಹಿಂದೆ ಮುಸ್ಕಾನ್ ಮತ್ತು ಸಾಹಿಲ್ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಶಿಕ್ಷೆಯನ್ನು ಪ್ರಕಟಿಸಿದೆ. ಸಿಮೆಂಟ್ ತುಂಬಿದ್ದ ನೀಲಿ ಪ್ಲಾಸ್ಟಿಕ್ ಡ್ರಮ್ ಈ ಕೊಲೆ ಪ್ರಕರಣದ ಪ್ರಮುಖ ಗುರುತಾಗಿತ್ತು. ಅಲ್ಲದೆ, ಪ್ರಕರಣದಲ್ಲಿ ಅದು ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿತ್ತು.
126 ಬಾರಿ ವಿಚಾರಣೆ ನಡೆಸಿ, 22 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ ಬಳಿಕ, ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಸೌರಭ್ ರಾಜ್ಪೂತ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ತೀರ್ಪು ನೀಡಿದರು. ಬಳಿಕ ಸೌರಭ್ ಅವರ ತುಂಡರಿಸಿದ ಮೃತದೇಹವನ್ನು ನೀಲಿ ಬಣ್ಣದ ಕೈಗಾರಿಕಾ ಡ್ರಮ್ನಲ್ಲಿ ಇರಿಸಿ, ಸಿಮೆಂಟ್ ಮತ್ತು ಮರಳಿನಿಂದ ಮುಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿತು. ಇಂತಹ ಅಪರಾಧಗಳು ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ನ್ಯಾಯಾಧೀಶರು ಹೇಳಿದರು.
ಏನಿದು ಘಟನೆ?
2025ರ ಮಾರ್ಚ್ 3ರಂದು, ಮೀರತ್ನ ಇಂದ್ರಾ ನಗರದಲ್ಲಿರುವ ತಮ್ಮ ಮನೆಯಲ್ಲಿ ಮುಸ್ಕಾನ್ ರಸ್ತೋಗಿಯು ತನ್ನ ಪತಿ ಸೌರಭ್ ರಜಪೂತ್ಗೆ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಳು. ಇದರಿಂದ ಸೌರಭ್ ಪ್ರಜ್ಞೆ ತಪ್ಪಿ, ನಿದ್ರಾವಸ್ಥೆಗೆ ಜಾರಿದರು. ಇದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಳು. ಬಳಿಕ ಬಾತ್ರೂಮ್ನಲ್ಲಿ ಅವರ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ್ದರು.
Chinthamani Crime News: ಚಿಂತಾಮಣಿಯಲ್ಲಿ ಮಹಿಳೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ: ಚಿಕಿತ್ಸೆ ಫಲಿಸದೆ ಸಾವು
ಮೃತದೇಹ ಕೊಳೆತು ದುರ್ವಾಸನೆ ಹರಡುವುದನ್ನು ತಡೆಯಲು, ದೇಹದ ತುಂಡುಗಳನ್ನು ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿ, ಮರಳು, ನೀರು ಮತ್ತು ಸಿಮೆಂಟ್ ಮಿಶ್ರಣವನ್ನು ಸುರಿದು ಡ್ರಮ್ಗೆ ಮುಚ್ಚಳ ಹಾಕಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಮರುದಿನವೇ ಕೊಲೆ ಆರೋಪಿಗಳಾದ ಮುಸ್ಕಾನ್ ಮತ್ತು ಸಾಹಿಲ್ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಸೌರಭ್ ಜೀವಂತವಾಗಿದ್ದಾರೆ ಮತ್ತು ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸಲಿ ಎಂದು, ಮುಸ್ಕಾನ್ ಅವರ ಮೊಬೈಲ್ ಫೋನ್ ಬಳಸಿ ಸೌರಭ್ ಅವರ ಕುಟುಂಬದ ಸದಸ್ಯರಿಗೆ ಸಂದೇಶಗಳನ್ನು ಕಳುಹಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮಾರ್ಚ್ 17ರಂದು, ಅನುಮಾನಗೊಂಡ ಸಂಬಂಧಿಕರು, ಸ್ಥಳೀಯ ಅಧಿಕಾರಿಗಳ ಜೊತೆಗೆ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲದೆ, ಸೌರಭ್ ಮತ್ತು ಮುಸ್ಕಾನ್ ಅವರ ಆರು ವರ್ಷದ ಮಗಳು ನೆರೆಹೊರೆಯವರ ಬಳಿ, ಅಪ್ಪ ಡ್ರಮ್ನಲ್ಲಿದ್ದಾಳೆ ಎಂದು ಹೇಳುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಅನುಮಾನಗೊಂಡ ಪೊಲೀಸರು, ಮುಚ್ಚಿದ ನೀಲಿ ಡ್ರಮ್ ಅನ್ನು ಕತ್ತರಿಸಿದಾಗ ಬೆಚ್ಚಿಬಿದ್ದಿದ್ದಾರೆ. ಎರಡು ದಿನಗಳ ನಂತರ ರಸ್ತೋಗಿ ಮತ್ತು ಶುಕ್ಲಾ ಅವರನ್ನು ಪೊಲೀಸರು ಬಂಧಿಸಿದರು.
ಪಶ್ಚಾತಾಪವೇ ಇಲ್ಲದೇ ದುಡ್ಡಿನ ಧಿಮಾಕು; ಮಿನಿ ಕೂಪರ್ ಕಾರು ಹರಿಸಿ ಮೂವರನ್ನು ಕೊಂದ 19 ವರ್ಷದ ಯುವಕ
ವಿಚಾರಣೆಯ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ಎಲ್ಲಾ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಕೊಲೆಗೆ ಮೊದಲು ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ ಅವರಿಗೆ ನೀಲಿ ಪ್ಲಾಸ್ಟಿಕ್ ಡ್ರಮ್, ಸಿಮೆಂಟ್ ಚೀಲಗಳು, ಮರಳು, ಕತ್ತರಿಸುವ ಚಾಕುಗಳು ಹಾಗೂ ರೇಜರ್ಗಳನ್ನು ಮಾರಾಟ ಮಾಡಿದ್ದಾಗಿ ಸ್ಥಳೀಯ ಅಂಗಡಿಯವರು ಸಾಕ್ಷ್ಯ ನೀಡಿದರು.
ಕರೆಗಳ ವಿವರಗಳು ಮತ್ತು ಮೊಬೈಲ್ ಟವರ್ಗಳ ಮಾಹಿತಿ ಪ್ರಕಾರ, ಅಪರಾಧ ನಡೆದ ಸಮಯದಲ್ಲಿ ಆರೋಪಿ ಸಾಹಿಲ್ ಶುಕ್ಲಾ ಮನೆಯಲ್ಲಿದ್ದ ಎಂಬುದು ತಿಳಿದುಬಂದಿತ್ತು. ಅಲ್ಲದೆ, ಶಿಮ್ಲಾ ಮತ್ತು ಹಿಮಾಚಲ ಪ್ರದೇಶದ ಮನಾಲಿಯ ಹೋಟೆಲ್ಗಳಲ್ಲಿ ಇಬ್ಬರೂ ತಂಗಿದ್ದ ವಿವರಗಳನ್ನೂ ಈ ತಾಂತ್ರಿಕ ಸಾಕ್ಷ್ಯಗಳು ಪತ್ತೆಹಚ್ಚಿದವು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಸೌರಭ್ ರಜಪೂತ್ ಅವರನ್ನು ಇರಿದು ಕೊಲೆ ಮಾಡಲಾಗಿದೆ ಎಂಬುದನ್ನು ದೃಢಪಡಿಸಿತು