ಗುವಾಹಟಿ: ಬೈಕ್ ಡಿಕ್ಕಿಯಾಗಿ (bike hit) ಬಹುಭಾಷಾ ನಟ (bollywood actor) ಆಶಿಶ್ ವಿದ್ಯಾರ್ಥಿ (Ashish Vidyarthi ) ಮತ್ತು ಅವರ ಪತ್ನಿ ರೂಪಾಲಿ ಬರುವಾ (Rupali Baruah) ಗಾಯಗೊಂಡ ಘಟನೆ ಗುವಾಹಟಿಯ (Guwahati accident) ಮೃಗಾಲಯ ರಸ್ತೆ ಬಳಿ ಶುಕ್ರವಾರ ಸಂಜೆ ನಡೆದಿದೆ. ಆಶಿಶ್ ವಿದ್ಯಾರ್ಥಿ ದಂಪತಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ವೊಂದು ಅವರಿಗೆ ಡಿಕ್ಕಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗೀತಾನಗರದ ಪೊಲೀಸ್ ಸಿಬ್ಬಂದಿ ಆಶಿಶ್ ವಿದ್ಯಾರ್ಥಿ ದಂಪತಿಯನ್ನು ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರು.
ಈ ಕುರಿತು ಮಾಹಿತಿ ನೀಡಿರುವ ಗೀತಾನಗರದ ಪೊಲೀಸ್ ಠಾಣೆ ಅಧಿಕಾರಿಗಳು, ಗುವಾಹಟಿಯ ಮೃಗಾಲಯ ರಸ್ತೆ ಬಳಿ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಆಶಿಶ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಬರುವಾ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
12 ವರ್ಷದ ಪುತ್ರನನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ ಪಾಲಕರು; ಕಾರಣ ಕೇಳಿದ್ರೆ ಶಾಕ್ ಆಗ್ತೀರ
ಗೀತಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೃಗಾಲಯ ಟಿನಿಯಾಲಿಯ ಗುವಾಹಟಿ ಅಡ್ರೆಸ್ ಹೊಟೇಲ್ ಬಳಿ ಆಶಿಶ್ ವಿದ್ಯಾರ್ಥಿ ದಂಪತಿ ರಸ್ತೆ ದಾಟುತ್ತಿದ್ದಾಗ ಚಾಂದ್ಮರಿ ಕಡೆಯಿಂದ ಅತಿ ವೇಗವಾಗಿ ಬಂದ ಬೈಕ್ ಅವರಿಗೆ ಹೊಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರನಿಗೂ ಗಂಭೀರ ಗಾಯಗಳಾಗಿವೆ ಎಂದು ಹೇಳಿದರು.
ಮಾಹಿತಿ ತಿಳಿದ ತಕ್ಷಣವೇ ಗೀತಾನಗರದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಯಗೊಂಡ ಆಶಿಶ್ ವಿದ್ಯಾರ್ಥಿ ದಂಪತಿ ಮತ್ತು ಬೈಕ್ ಸವಾರನನ್ನು ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರು. ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಶನಿವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಆಶಿಶ್ ವಿದ್ಯಾರ್ಥಿ, ತಮಗೆ ಅಪಘಾತವಾಗಿರುವುದನ್ನು ದೃಢಪಡಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಅವರು, ತಮಗೆ ಸಣ್ಣಪುಟ್ಟ ಗಾಯಗಳಾಗಿವೆ. ರೂಪಾಲಿ ಅವರನ್ನು ವೈದ್ಯರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ ಸವಾರನಿಗೆ ಕೂಡ ಪ್ರಜ್ಞೆ ಮರಳಿ ಬಂದಿದೆ ಎಂದು ತಿಳಿಸಿದ್ದಾರೆ.
ಮದುವೆಗೆ ಒಪ್ಪದ ವಿವಾಹಿತ ಮಹಿಳೆಯನ್ನು ನಡುರಸ್ತೆಯಲ್ಲೇ ಕೊಂದ ಮುಸ್ಲಿಂ ಯುವಕ!
ರೂಪಾಲಿ ಮತ್ತು ನಾನು ಹೊಟೇಲ್ ನಲ್ಲಿ ಭೋಜನ ಮುಗಿಸಿ ಬಳಿಕ ಹೊರಗೆ ಬಂದು ರಸ್ತೆ ದಾಟುತ್ತಿದ್ದಾಗ ಬೈಕ್ ನಮಗೆ ಡಿಕ್ಕಿ ಹೊಡೆದಿದೆ. ನಾವಿಬ್ಬರೂ ಚೇತರಿಸಿಕೊಳ್ಳುತ್ತಿದ್ದೇವೆ. ಸದ್ಯ ರೂಪಾಲಿ ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಎಲ್ಲವೂ ಸರಿಯಾಗಿದೆ. ನನಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿವೆ ಎಂದರು.
ಅಪಘಾತಕ್ಕೆ ಕಾರಣವೇನು ಎನ್ನುವ ಕುರಿತು ಸಂಪೂರ್ಣ ತನಿಖೆ ನಡೆಸುವುದಾಗಿ ಗೀತಾನಗರ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.