ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb threat: ಎಂ.ಕೆ. ಸ್ಟಾಲಿನ್, ನಟರಾದ ಅಜಿತ್, ಅರವಿಂದ್ ಸ್ವಾಮಿ ಮತ್ತು ಖುಷ್ಬುಗೆ ಬಾಂಬ್‌ ಬೆದರಿಕೆ

ತಮಿಳುನಾಡಿನಲ್ಲಿ ಸೆಲೆಬ್ರಿಟಿಗಳಿಗೆ ಬರುತ್ತಿರುವ ಬಾಂಬ್‌ ಬೆದರಿಕೆ ಕರೆಗಳು ಮುಂದುವರಿದಿದೆ. ನಿನ್ನೆ ತಡ ರಾತ್ರಿ ಕೂಡ ಸಿಎಂ ಸ್ಟ್ಯಾಲಿನ್‌, ನಟರಾದ ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ಖುಷ್ಬು ಅವರ ನಿವಾಸಕ್ಕೆ ಭಾನುವಾರ ರಾತ್ರಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಬಂದಿರುವ ಬೆನ್ನಲ್ಲೇ ಪೊಲೀಸರು ಅಲರ್ಟ್‌ ಆಗಿದ್ದಾರೆ.

ಸಿಎಂ ಸ್ಟ್ಯಾಲಿನ್‌, ಅಜಿತ್‌ ಕುಮಾರ್‌, ಅರವಿಂದ ಸ್ವಾಮಿ ಮತ್ತು ಖುಶ್ಬು(ಸಂಗ್ರಹ ಚಿತ್ರ)

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ನಟರಾದ ಅಜಿತ್ ಕುಮಾರ್, ಅರವಿಂದ್ ಸ್ವಾಮಿ ಮತ್ತು ಖುಷ್ಬು ಅವರ ನಿವಾಸಕ್ಕೆ ಭಾನುವಾರ ರಾತ್ರಿ ಬಾಂಬ್ ಬೆದರಿಕೆ(Bomb threat) ಪತ್ರ ಬಂದಿದೆ. ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಗೆ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ನಾಲ್ಕೂ ಸ್ಥಳಗಳಲ್ಲಿ ತಕ್ಷಣದ ಭದ್ರತಾ ತಪಾಸಣೆ ನಡೆಸಲಾಗಿದೆ.

ಕಳೆದ ವಾರವೂ, ಚೆನ್ನೈನ ಇಂಜಂಬಕ್ಕಂನಲ್ಲಿರುವ ಅಜಿತ್ ಕುಮಾರ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಬಂದಿತ್ತು. ತಕ್ಷಣ ಅಧಿಕಾರಿಗಳು ಗಣ್ಯರ ನಿವಾಸದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಶೋಧ ನಡೆಸಿದರು. ತಪಾಸಣೆಯ ಸಮಯದಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ, ಮತ್ತು ಬೆದರಿಕೆ ಕಳುಹಿಸಿದವರ ಬಗ್ಗೆ ಅಧಿಕಾರಿಗಳು ವಿವರಗಳನ್ನು ಬಹಿರಂಗಪಡಿಸಲಿಲ್ಲ. ಪೊಲೀಸ್ ಅಧಿಕಾರಿಗಳು ತ್ವರಿತವಾಗಿ ಪ್ರತಿಕ್ರಿಯಿಸಿದರು, ಪೂರ್ವ ಕರಾವಳಿ ರಸ್ತೆ (ಇಸಿಆರ್) ನಲ್ಲಿರುವ ನಟನ ಮನೆಗೆ ಬಾಂಬ್ ಸ್ಕ್ವಾಡ್ ಅನ್ನು ನಿಯೋಜಿಸಿದರು.ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.

ಇದಕ್ಕೂ ಮುನ್ನ ನಟ ಅರುಣ್ ವಿಜಯ್ ವಿರುದ್ಧ ಇದೇ ರೀತಿಯ ಬಾಂಬ್ ಬೆದರಿಕೆ ಪತ್ರ ಬಂದಿತ್ತು. ಎಕ್ಕಾಟ್ಟುತಂಗಲ್‌ನಲ್ಲಿರುವ ಅರುಣ್ ವಿಜಯ್ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ಡಿಜಿಪಿ ಕಚೇರಿಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಬಂದಿತ್ತು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ತಜ್ಞರು ಆಸ್ತಿಯನ್ನು ಶೋಧಿಸಿದಾಗ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿರಲಿಲ್ಲ.

ಈ ಸುದ್ದಿಯನ್ನೂ ಓದಿ: Delhi Blast: ದೆಹಲಿ ಬಾಂಬ್‌ ಸ್ಫೋಟದ ರೂವಾರಿ ಡಾ. ಉಮರ್‌ನ ಮತ್ತೊಂದು ವಿಡಿಯೊ ಬೆಳಕಿಗೆ; ಮೊಬೈಲ್‌ ಅಂಗಡಿಗೆ ಹೋಗಿದ್ದೇಕೆ?

ಇನ್ನು ಸಿಎಂ ಸ್ಟ್ಯಾಲಿನ್‌ಗೆ ಬಾಂಬ್‌ ಬೆದರಿಕೆ ಬರುತ್ತಿರುವುದು ಇದೇನು ಮೊದಲಲ್ಲ. ಕೆಲವು ದಿನಗಳ ಹಿಂದೆಯೂ ಹುಸಿ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ಅವರ ಜೊತೆಗೆ ರಾಜ್ಯಪಾಲ ಆರ್.ಎನ್. ರವಿ, ನಟಿ ತ್ರಿಶಾ, ಎಸ್.ವಿ. ಶೇಖರ್ ಬಿಜೆಪಿ ರಾಜ್ಯ ಕಚೇರಿ ಕಮಲಾಲಯಂ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಗಳು ಬಂದಿದ್ದವು. ಆದರೆ, ಎಲ್ಲವೂ ಸುಳ್ಳು ಎಂದು ತಿಳಿದುಬಂದಿದೆ. ಈ ಬೆದರಿಕೆಗಳಿಂದಾಗಿ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ (BDDS), ಸ್ಥಳೀಯ ಪೊಲೀಸರು ಮತ್ತು ಶ್ವಾನ ದಳಗಳು ತಪಾಸಣೆ ನಡೆಸಿದವು. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಈ ಇ-ಮೇಲ್ ಗಳು ಎಲ್ಲಿಂದ ಬಂದಿವೆ ಎಂಬುದರ ಬಗ್ಗೆ ಸೈಬರ್ ಕ್ರೈಂ ವಿಭಾಗ ತನಿಖೆ ನಡೆಸುತ್ತಿದೆ. ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ನಟ ವಿಜಯ್‌ಗೂ ಆಗಾಗ ಬೆದರಿಕೆ ಸಂದೇಶ

ಇನ್ನು ನಟ, ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅಧ್ಯಕ್ಷ ನಟ ವಿಜಯ್ ಅವರಿಗೂ ಬಾಂಬ್‌ ಬೆದರಿಕೆ ಸಂದೇಶ ಬಂದಿತ್ತು.ವಿಜಯ್‌ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆಳಗ್ಗೆ 5:20 ರ ಸುಮಾರಿಗೆ ಕರೆ ಮಾಡಿದ್ದರು. ಬೆದರಿಕೆ ಬಂದ ಕೂಡಲೇ, ಮೂವರು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಮತ್ತು ಸ್ನಿಫರ್ ನಾಯಿಯನ್ನು ವಿಜಯ್ ಅವರ ನಿವಾಸಕ್ಕೆ ಕಳುಹಿಸಲಾಯಿತು. ಆದರೆ ತೀವ್ರ ತಪಾಸನೆ ನಂತರ ಇದೊಂದು ಹುಸಿ ಬಾಂಬ್‌ ಸಂದೇಶ ಎನ್ನಲಾಗಿದೆ.