ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳಂ ಮಾಜಿ ಸಿಎಂ ಪಿಣರಾಯಿ ವಿಜಯನ್, ಪುತ್ರಿ ವೀಣಾ ವಿರುದ್ಧ ಲಂಚ ಆರೋಪ: ಇಡಿ ತನಿಖೆಗೆ ಆದೇಶ

ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಪುತ್ರಿಯ ವಿರುದ್ಧ ಲಂಚ ಆರೋಪ ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರಿ ವೀಣಾ ಟಿ ಮೂಲಕ 3.28 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಗ್ರಹ ಚಿತ್ರ

ತಿರುವನಂತಪುರಂ: ಕೇರಳ ಮುಖ್ಯಮಂತ್ರಿಯಾಗಿದ್ದಾಗ ಪಿಣರಾಯಿ ವಿಜಯನ್ (Kerala former CM Pinarayi Vijayan), ಅವರ ಪುತ್ರಿ ವೀಣಾ ಟಿ. (Pinarayi Vijayan daughter Veena T.), ಸಿಪಿಎಂ ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ (former minister P.A. Mohamed Riyas) ಅವರು ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ (Enforcement Directorate) ಆದೇಶಿಸಿದೆ. ಈ ಮೂವರು ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್‌)ನಿಂದ 3.28 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ ನಿಂದ ಲಂಚ ಪಡೆದಿದ್ದಾರೆ ಎನ್ನುವ ಆರೋಪದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಮತ್ತು ಸಿಪಿಎಂ ನಾಯಕ, ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ವಿರುದ್ಧ ಇಡಿ ತನಿಖೆಗೆ ಆದೇಶಿಸಲಾಗಿದೆ.

ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ಬಂಧನದ ವಿರುದ್ಧದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಈ ಪ್ರಕರಣಕ್ಕೆ ಸಂಬಂಧಿಸಿ ಸಿಎಂಆರ್‌ಎಲ್‌ನ ಮಾಜಿ ಸಿಎಫ್ಒ ಮತ್ತು ಮುಖ್ಯ ಜನರಲ್ ಮ್ಯಾನೇಜರ್ ಪಿ. ಸುರೇಶ್ ಕುಮಾರ್ ಅವರ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಇವರ ಹೆಸರುಗಳು ಕೇಳಿ ಬಂದಿದೆ. ಲಂಚದ ಹಣವನ್ನು ಮೊಹಮ್ಮದ್ ರಿಯಾಸ್ ಪಡೆದು ಅದನ್ನು ವೀಣಾ ಮತ್ತು ಪರಿಚಿತ ಸಹಚರರ ಮೂಲಕ ದುಬೈಗೆ ವರ್ಗಾಯಿಸಲಾಗಿದೆ. ವೀಣಾ, ಪಿಣರಾಯಿ ವಿಜಯನ್ ಮತ್ತು ರಿಯಾಸ್ ಅವರು ಹಣ ಸಂಗ್ರಹಿಸಲು ಮತ್ತು ಅದನ್ನು ದುಬೈಗೆ ರವಾನಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವೀಣಾ ಅವರಿಗೆ ಸೇರಿದ ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೆಸರಿನಲ್ಲಿ ನಕಲಿ ಪಾವತಿಗಳಾಗಿವೆ. ಇದರಲ್ಲಿ ಸಿಎಂಆರ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಎಸ್ಎನ್ ಶಶಿಧರನ್ ಕತಾರ್ ಮತ್ತು ಮಾಜಿ ಸಿಎಫ್ಒ ಪಿ. ಸುರೇಶ್ ಕುಮಾರ್ ಅವರ ಹೆಸರುಗಳು ಕೂಡ ಕೇಳಿ ಬಂದಿವೆ.

ಅಲ್ಲದೇ ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಶೈಜಲ್ ಅಲಿಯಾಸ್ ಶೈಜಲ್ ಮೊಹಮ್ಮದ್, ನಿಖಿಲ್ ಪಿ, ವಾರಿಸ್ ಅಲಿಯಾಸ್ ಹಸನ್ ವರಿಶ್, ಫೈಜಾಜ್ ವಿ ಪಿ ಮತ್ತು ನಂದುಲಾಲ್ ಎಂ ಸೇರಿದಂತೆ ಹಲವಾರು ಇತರರು ಮತ್ತು ಕೆಲವು ಸಂಸ್ಥೆಗಳನ್ನು ಕೂಡ ಆರೋಪದ ಪಟ್ಟಿಯಲ್ಲಿ ಗುರುತಿಸಲಾಗಿದೆ.

ರಾಹುಲ್ ಗಾಂಧಿಯ ‘ಛಾತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು; ಜೆನ್‌ ಝೀ ಸಮುದಾಯದ ಬಗ್ಗೆ ಹೇಳಿದ್ದೇನು?

2017-18 ಮತ್ತು 2019-20ರ ನಡುವೆ ಈ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಇದರಿಂದಾಗಿ ಸಿಎಂಆರ್‌ಎಲ್‌ನ ಖರ್ಚು ಮತ್ತು ಎಕ್ಸಲಾಜಿಕ್ ಒಳಗೊಂಡ ವಹಿವಾಟುಗಳ ತನಿಖೆಯನ್ನು ವಿಸ್ತರಿಸಲಾಗಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೆಸರು ಕೇಳಿ ಬಂದಿದ್ದು, ಅವರ ವಿರುದ್ಧ ತನಿಖೆಗೆ ಕೇರಳ ಪೊಲೀಸರು ಕ್ರಮಕೈಗೊಳ್ಳುವಂತೆ ಇಡಿ ಒತ್ತಾಯಿಸಿದೆ. ಇದಕ್ಕೆ ಸಂಬಂಧಿಸಿ ವಿಜಿಲೆನ್ಸ್ ನಿರ್ದೇಶಕರು ಎಫ್‌ಐಆರ್ ದಾಖಲಿಸುವ ಸಾಧ್ಯತೆ ಕೂಡ ಇದೆ.

ವಿದ್ಯಾ ಇರ್ವತ್ತೂರು

View all posts by this author