ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shocking News: ಅಣ್ಣನಿಂದಲೇ ಗರ್ಭವತಿಯಾದ ತಂಗಿ, ಅಪ್ರಾಪ್ತ ಬಾಲಕಿಗೆ ಮಗು ಜನನ

ತಂಗಿಯ ಜೊತೆ ಅಣ್ಣನೇ ದೈಹಿಕ ಸಂಪರ್ಕ ಬೆಳೆಸಿ ಮಗುವಿಗೆ ತಂದೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕುಂದರ್ಗಿ ಗ್ರಾಮದಲ್ಲಿ ನಡೆದಿದೆ. ಕುಂದರ್ಗಿ ಗ್ರಾಮದ ಗಿರೀಶ ಭೋವಿ (19) ಎಂಬಾತನೇ ಆರೋಪಿ. ಈತ ಅಪ್ರಾಪ್ತ ವಯಸ್ಸಿನ ತಂಗಿಯನ್ನು ಬಸುರಿ ಮಾಡಿದ್ದಾನೆ.

ಅಣ್ಣನಿಂದಲೇ ಗರ್ಭವತಿಯಾದ ತಂಗಿ, ಅಪ್ರಾಪ್ತ ಬಾಲಕಿಗೆ ಮಗು ಜನನ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 6, 2025 9:49 AM

ಉತ್ತರ ಕನ್ನಡ: ರಾಜ್ಯದಲ್ಲಿ (Karnataka news) ಹೇಯ ಕೃತ್ಯವೊಂದು (Shocking News) ಬೆಳಕಿಗೆ ಬಂದಿದೆ. ಒಡಹುಟ್ಟಿದ ಅಣ್ಣನೇ (Brother) ಅಪ್ರಾಪ್ತ ವಯಸ್ಸಿನ ತಂಗಿಯ (minor girl) ಜೊತೆ ದೈಹಿಕ ಸಂಬಂಧ (Physical Abuse) ಬೆಳೆಸಿದ್ದು ಆಕೆಯನ್ನು ಗರ್ಭಿಣಿಯನ್ನಾಗಿ (Pregnant) ಮಾಡಿದ್ದಾನೆ. ಮುಂದಿನ ಪರಿಣಾಮಗಳ ಅರಿವಿಲ್ಲದ ಬಾಲಕಿ, ನವಮಾಸ ತುಂಬಿ ಮಗುವಿಗೆ ಜನ್ಮ ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು (Uttara Kannada Crime News) ಬಂಧಿಸಿದ್ದಾರೆ.

ತಂಗಿಯ ಜೊತೆ ಅಣ್ಣನೇ ದೈಹಿಕ ಸಂಪರ್ಕ ಬೆಳೆಸಿ ಮಗುವಿಗೆ ತಂದೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕುಂದರ್ಗಿ ಗ್ರಾಮದಲ್ಲಿ ನಡೆದಿದೆ. ಕುಂದರ್ಗಿ ಗ್ರಾಮದ ಗಿರೀಶ ಭೋವಿ (19) ಎಂಬಾತನೇ ಆರೋಪಿ. ಈತ ಅಪ್ರಾಪ್ತ ವಯಸ್ಸಿನ ತಂಗಿಯನ್ನು ಬಸುರಿ ಮಾಡಿದ್ದಾನೆ. ಇದರಿಂದ ಗರ್ಭವತಿಯಾದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.

ಬಾಲಕಿಗೆ ಸಂಬಂಧದಲ್ಲಿ ಅಣ್ಣನಾಗಿರುವ ಗಿರೀಶ್ 9 ತಿಂಗಳ ಹಿಂದೆ ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಾಲಕಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಘಟನೆ ಸಂಬಂಧ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನವವಿವಾಹಿತ ಹೃದಯಾಘಾತಕ್ಕೆ ಬಲಿ

ಮಂಡ್ಯ: ಮಂಡ್ಯ (Mandya News) ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಮೂರು ದಿನದ ಹಿಂದಷ್ಟೇ ಮದುವೆಯಾಗಿದ್ದ ಯುವಕನೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ನಡೆದಿದೆ. ಇತ್ತೀಚೆಗೆ ಪೂರ್ವಹಿನ್ನೆಲೆ ಇಲ್ಲದಿದ್ದರೂ ಆಕಸ್ಮಿಕವಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ (Heart Failure) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳಿಗೆ ಈ ಪ್ರಕರಣ ಸೇರ್ಪಡೆಯಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮೂರು ದಿನದ ಹಿಂದೆ ಮದುವೆಯಾಗಿದ್ದ ಶಶಾಂಕ್ ಎನ್ನುವ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಪುರಸಭೆ ಸದಸ್ಯ ಕೆಸಿ ಮಂಜುನಾಥ್ ಪುತ್ರ ಶಶಾಂಕ್ (28) ಹೀಗೆ ಸಾವನ್ನಪ್ಪಿದವರು. ಕಳೆದ ಭಾನುವಾರ ಶಶಾಂಕ್ ಹಸೆಮಣೆ ಏರಿದ್ದು, ಜಾರ್ಖಂಡ್ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಮೂರೇ ದಿನದಲ್ಲಿ ಹೃದಯಾಘಾತದಿಂದ ಶಶಾಂಕ್ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Ranya Rao: ಆಕೆ ನಮ್ಮ ಜೊತೆಗಿಲ್ಲ, ನನ್ನ ಕೆರಿಯರ್‌ನಲ್ಲಿ ಕಪ್ಪು ಚುಕ್ಕಿ ಇಲ್ಲ: ರನ್ಯಾ ರಾವ್‌ ತಂದೆ