ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆರೋಪಿಗಳನ್ನು ಬಂಧಿಸಲು ಬಂದ ದೆಹಲಿ ಪೊಲೀಸರನ್ನೇ ಬಂಧಿಸಿದ ಶಿಮ್ಲಾ ಪೊಲೀಸರು

ಇತ್ತೀಚೆಗೆ ನಡೆದ ಎಐ ಶೃಂಗಸಭೆಯ ವೇಳೆ ಶರ್ಟ್ ಧರಿಸದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದು, ಇವರನ್ನು ದೆಹಲಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು. ಇದು ದೆಹಲಿ ಮತ್ತು ಹಿಮಾಚಲ ಪ್ರದೇಶದ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರ ವಿರುದ್ಧ ಅಪಹರಣ ದೂರು ಕೂಡ ದಾಖಲಾಗಿದೆ.

ಸಂಗ್ರಹ ಚಿತ್ರ

ಶಿಮ್ಲಾ: ಕೃತಕ ಬುದ್ದಿಮತ್ತೆ ಶೃಂಗಸಭೆಯಲ್ಲಿ (AI Summit) ಶರ್ಟ್ ಧರಿಸದೆ ಪ್ರತಿಭಟಿಸಿದ ಮೂವರು ಯುವ ಕಾಂಗ್ರೆಸ್ (Youth congress) ಕಾರ್ಯಕರ್ತರ ಕಸ್ಟಡಿಗೆ ಸಂಬಂಧಿಸಿ ದೆಹಲಿ (Delhi) ಮತ್ತು ಹಿಮಾಚಲ ಪ್ರದೇಶ (Himachal Pradesh) ಪೊಲೀಸರ ನಡುವೆ ಬುಧವಾರ ರಾತ್ರಿ ಪೂರ್ತಿ ನಡೆದು ಗುರುವಾರ ಬೆಳಗ್ಗೆ ಕೊನೆಯಾಗಿದೆ. ದೆಹಲಿ ಪೊಲೀಸ್ ತಂಡವು ಯುವಕರನ್ನು ವಶಕ್ಕೆ ಪಡೆದಿರುವುದನ್ನು ಹಿಮಾಚಲ ಪ್ರದೇಶದ ಶಿಮ್ಲಾ ಪೊಲೀಸರು (Shimla police) ವಿರೋಧಿಸಿದ್ದರು. ಈ ಬಂಧನವು ಕಾನೂನು ಬಾಹಿರವೆಂದು ಹೇಳಿ ಪೊಲೀಸರನ್ನು ಕೂಡ ಬಂಧಿಸಿದರು. ಇದು ಪರಿಸ್ಥಿತಿ ಉದ್ವಿಗ್ನಗೊಳ್ಳಲು ಕಾರಣವಾಗಿತ್ತು.

ಯುವ ಕಾಂಗ್ರೆಸ್ ಕಾರ್ಯಕರ್ತರ ಕಸ್ಟಡಿಯನ್ನು ಶಿಮ್ಲಾ ಪೊಲೀಸರು ವಿರೋಧಿಸಿ ದೆಹಲಿ ಪೊಲೀಸರನ್ನು ತಡೆದಿದ್ದರು. ಬಳಿಕ ಅವರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ ಮಧ್ಯರಾತ್ರಿಯೇ ನ್ಯಾಯಾಲಯದ ವಿಚಾರಣೆ ನಡೆಸಿದ್ದು, ಗುರುವಾರ ಬೆಳಗ್ಗಿನ ಜಾವ ಮರಳಿ ದೆಹಲಿಗೆ ಕಳುಹಿಸಿಕೊಟ್ಟರು.

"ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು"; ಗಾಜಾ ಯೋಜನೆಗೆ ಅಸ್ತು ಎಂದ ಪ್ರಧಾನಿ

ಏನಾಗಿತ್ತು?

ಎಐ ಶೃಂಗಸಭೆಯಲ್ಲಿ ಶರ್ಟ್ ಧರಿಸದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮೂವರು ಆರೋಪಿಗಳಾದ ಸೌರಭ್, ಅರ್ಬಾಜ್ ಮತ್ತು ಸಿದ್ಧಾರ್ಥ್ ಎಂಬವರು ದೆಹಲಿಯಿಂದ ಪರಾರಿಯಾಗಿ ಶಿಮ್ಲಾಗೆ ಬಂದು ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಅವರನ್ನು ಪತ್ತೆಹಚ್ಚಲು ದೆಹಲಿ ಪೊಲೀಸ್ ವಿಶೇಷ ದಳದ ತಂಡ ಹಿಮಾಚಲ ಪ್ರದೇಶಕ್ಕೆ ಆಗಮಿಸಿತ್ತು.

ಸಾಮಾನ್ಯ ಉಡುಗೆಯಲ್ಲಿದ್ದ ದೆಹಲಿ ಪೊಲೀಸ್ ತಂಡ ಬುಧವಾರ ಮುಂಜಾನೆ ರೋಹ್ರುವಿನ ರೆಸಾರ್ಟ್ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಯಾವುದೇ ನೋಟಿಸ್ ನೀಡದೆ ರೆಸಾರ್ಟ್‌ನ ಸಿಸಿಟಿವಿ ಡಿವಿಆರ್ ಅನ್ನು ವಶಪಡಿಸಿಕೊಂಡಿದ್ದರು.

ಈ ಕುರಿತು ರೆಸಾರ್ಟ್ ಆಡಳಿತ ಮಂಡಳಿಯು ಶಿಮ್ಲಾ ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಗಳು ತಮ್ಮ ಅತಿಥಿಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿತ್ತು. ಹೀಗಾಗಿ ಶಿಮ್ಲಾ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು.

ಶಿಮ್ಲಾ ಮತ್ತು ಸೋಲನ್ ಬಳಿಯ ಶೋಘಿ ಗಡಿಯಲ್ಲಿ ಎನ್ ಹೆಚ್-5 ರಲ್ಲಿ ಹಿಮಾಚಲ ಪೊಲೀಸರು ದೆಹಲಿ ಪೊಲೀಸ್ ಬೆಂಗಾವಲು ಪಡೆಯನ್ನು ತಡೆದಿದ್ದು, ವಿಚಾರಣೆಗಾಗಿ ಸುಮಾರು 20 ದೆಹಲಿ ಸಿಬ್ಬಂದಿಯನ್ನು ಬಂಧಿಸಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ಕಾನೂನುಬಾಹಿರವೆಂದು ಶಿಮ್ಲಾ ಪೊಲೀಸರು ಹೇಳಿ ದೆಹಲಿ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದಕ್ಕಾಗಿ 24 ಗಂಟೆಗಳ ಕಾಲಾವಕಾಶವಿದ್ದುದರಿಂದ ಅವರ ವಾಹನಗಳನ್ನು ತಡೆ ಹಿಡಿಯಲಾಯಿತು.

ಪ್ರಕರಣವನ್ನು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಬುಧವಾರ ತಡರಾತ್ರಿ ಶಿಮ್ಲಾದ ಆಸ್ಪತ್ರೆಯಲ್ಲಿ ಮೂವರು ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ನ್ಯಾಯಾಲಯವು ದೆಹಲಿ ಪೊಲೀಸರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನಕ್ಕೆ ಅವಕಾಶ ನೀಡಿ ಆರೋಪಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಲು ಅನುಮತಿ ನೀಡಿತು.

ದೆಹಲಿ ಪೊಲೀಸರು ಮರಳಿ ದೆಹಲಿಗೆ ಹೋಗುತ್ತಿದ್ದಾಗ ಶಿಮ್ಲಾ ನಗರದೊಳಗಿನ ಕನ್ಲೋಗ್‌ನಲ್ಲಿ ಮತ್ತೆ ಅವರನ್ನು ತಡೆಯಲಾಗಿದ್ದು, ಶಿಮ್ಲಾ ಪೊಲೀಸರು ಶಂಕಿತರನ್ನು ಕೇವಲ ಮೂವರು ಅಧಿಕಾರಿಗಳು ಬೆಂಗಾವಲಿನಲ್ಲಿ ಕರೆದುಕೊಂಡು ಹೋಗಲು ಒತ್ತಾಯಿಸಿದರು. ಉಳಿದವರು ಅಪಹರಣ ತನಿಖೆಗಾಗಿ ನಿಲ್ಲುವಂತೆ ಸೂಚಿಸಿದರು. ಅನಂತರ ಮತ್ತೆ ಶೋಘಿ ಗಡಿಯಲ್ಲಿ ದೆಹಲಿ ಪೊಲೀಸ್ ವಾಹನವನ್ನು ತಡೆದ ಶಿಮ್ಲಾ ಪೊಲೀಸರು ವಶಕ್ಕೆ ಪಡೆದ ಕೀ, ಡಿವಿಆರ್ ಸಾಕ್ಷ್ಯವನ್ನು ನೀಡಲು ಒತ್ತಾಯಿಸಿದರು.

ವಿಶ್ವವನ್ನೇ ಭಾವುಕವಾಗಿಸಿದ ಜಪಾನ್‌ನ ಕೋತಿ ʼಪಂಚ್‌ʼ ಈಗ ಸಾರ್ವಜನಿಕ ಜಾಗೃತಿಯ ರಾಯಭಾರಿ; ಗಮನಸೆಳೆದ ಮುಂಬೈ ಪೊಲೀಸರ ನಡೆ

ಬಳಿಕ ದೆಹಲಿ ಪೊಲೀಸರು ವಶಕ್ಕೆ ಪಡೆದ ಡಿಜಿಟಲ್ ಪುರಾವೆಗಳ ಪ್ರತಿಯನ್ನು ಅವರೊಂದಿಗೆ ಹಂಚಿಕೊಂಡು ಮೂಲ ದಾಖಲೆಗಳನ್ನು ತಮ್ಮಲ್ಲಿ ಉಳಿಸಿಕೊಂಡರು. ವಾಹನದ ಕೀ ಹಸ್ತಾಂತರಿಸಲು ನಿರಾಕರಿಸಿದರು. ಕೆಲವು ಗಂಟೆಗಳ ಬಳಿಕ ಅವರಿಗೆ ದೆಹಲಿಗೆ ತೆರಳಲು ಅನುಮತಿ ನೀಡಲಾಯಿತು.

ವಿದ್ಯಾ ಇರ್ವತ್ತೂರು

View all posts by this author