ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರಿನ ಟಯರ್ ಸ್ಫೋಟ: ಪವಾಡ ಸದೃಶ್ಯವಾಗಿ ಪಾರಾದ ಬಿಜೆಪಿ ಶಾಸಕ

Car accident: ಕಾರಿನ ಟಯರ್ ಸ್ಪೋಟಗೊಂಡು ಬಿಜೆಪಿ ಶಾಸಕರೊಬ್ಬರು ಅಪಾಯದಿಂದ ಪವಾಡ ಸದೃಶ್ಯವಾಗಿ ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೋದಿಂದ ಮರಳುತ್ತಿದ್ದ ಶಾಸಕ ಚಂದ್ರಪಾಲ್ ಸಿಂಗ್ ಲೋಧಿ ಅವರ ಕಾರಿನ ಟಯರ್ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಪೋಟಾ ಕಾಬುಲ್‌ಪುರ್ ಗ್ರಾಮದ ಬಳಿ ಸ್ಪೋಟಗೊಂಡಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಅಪಾಯದಿಂದ ಪಾರಾಗಿದ್ದಾರೆ.

ಸಂಗ್ರಹ ಚಿತ್ರ

ಉತ್ತರ ಪ್ರದೇಶ: ಬಿಜೆಪಿ ಶಾಸಕರೊಬ್ಬರು (BJP MLA) ಪ್ರಯಾಣಿಸುತ್ತಿದ್ದ ಕಾರು ಸ್ಪೋಟಗೊಂಡು (Car accident) ಅಪಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ಶನಿವಾರ ನಡೆದಿದೆ. ಪವಾಡ ಸದೃಶ್ಯವಾಗಿ ಶಾಸಕರು ಪಾರಾಗಿದ್ದಾರೆ. ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ (Ganga Expressway) ಪ್ರಯಾಣಿಸುತ್ತಿದ್ದ ಬಿಜೆಪಿ ಶಾಸಕ ಚಂದ್ರಪಾಲ್ ಸಿಂಗ್ ಲೋಧಿ (BJP MLA Chandrapal Singh Lodhi) ಅವರ ಟೊಯೋಟಾ ಫಾರ್ಚುನರ್ ಕಾರಿನ ಟಯರ್ ಸ್ಪೋಟಗೊಂಡು ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ಅವರನ್ನು ತಕ್ಷಣವೇ ಹಾಪುರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಪೋಟಾ ಕಾಬುಲ್‌ಪುರ್ ಗ್ರಾಮದ ಬಳಿ ಶಾಸಕ ಚಂದ್ರಪಾಲ್ ಸಿಂಗ್ ಅವರ ಕಾರಿನ ಟಯರ್ ಸ್ಪೋಟಗೊಂಡು ಕಾರು ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ಸಾಗಿ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ.

ಎಲ್ಲ ಎಸ್‌ಐಆರ್ ಆದೇಶಗಳಿಗೆ ಸರ್ವಾನುಮತದ ಅನುಮೋದನೆ ಪಡೆಯಲಾಗಿದೆ: ಭಿನ್ನಾಭಿಪ್ರಾಯ ವದಂತಿ ತಳ್ಳಿ ಹಾಕಿದ ಚುನಾವಣಾ ಆಯೋಗ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅಪಘಾತದ ವಿಡಿಯೊದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಬುಲಂದ್‌ಶಹರ್ ಜಿಲ್ಲೆಯ ದೇಬೈ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರಪಾಲ್ ಸಿಂಗ್ ಅವರ ಕಾರಿನ ಟಯರ್ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುವುದನ್ನು ಕಾಣಬಹುದು. ಬಳಿಕ ಕಾರು ಜಾರಿಕೊಂಡು ಮುಖ್ಯ ರಸ್ತೆಯಿಂದ ಕೆಳಗಿಳಿದು ಕಚ್ಚಾ ರಸ್ತೆಯತ್ತ ಸಾಗಿ ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸಿ ಕಂಬವೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲುವುದನ್ನು ಕಾಣಬಹುದು.

ಚಂದ್ರ ಪಾಲ್ ಸಿಂಗ್ ಅವರು ಇನ್ನೋರ್ವ ವ್ಯಕ್ತಿಯೊಂದಿಗೆ ಲಕ್ನೋದಿಂದ ಹಿಂತಿರುಗುತ್ತಿದ್ದಾಗ ಅವರ ಕಾರಿನ ಟಯರ್ ಸ್ಫೋಟಗೊಂಡಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡ ಚಂದ್ರ ಪಾಲ್ ಸಿಂಗ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಹಾಪುರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.



ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದೆ. ಇದರಿಂದ ಗಂಗಾ ಎಕ್ಸ್‌ಪ್ರೆಸ್‌ವೇಯ ಹಲವು ಭಾಗಗಳಲ್ಲಿ ನೀರು ನಿಂತಿದ್ದು, ಉನ್ನಾವೊದಲ್ಲಿನ ಸೋನಿಕ್ ಟೋಲ್ ಪ್ಲಾಜಾ ಜಲಾವೃತಗೊಂಡಿದೆ. ಕಳೆದ ಸುಮಾರು 36 ಗಂಟೆಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಹಲವು ಪ್ರದೇಶಗಳಲ್ಲಿ ನೀರು ನಿಂತಿದೆ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಕೆಲವು ಕಡೆಗಳಲ್ಲಿ ಸುಮಾರು 5 ರಿಂದ 6 ಅಡಿಯಷ್ಟು ನೀರು ಸಂಗ್ರಹವಾಗಿದ್ದು ಟೋಲ್ ಕ್ಯಾಬಿನ್‌ಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟ್ರೈಲರ್ ಟ್ರಕ್ ಕೂಡ ನೀರಿನಲ್ಲಿ ಸಿಲುಕಿಕೊಂಡಿತ್ತು. ಎಕ್ಸ್‌ಪ್ರೆಸ್‌ವೇಯಲ್ಲಿ ನಿಂತಿದ್ದ ನೀರನ್ನು ಹೊರಹಾಕಲು ಎಕ್ಸ್‌ಪ್ರೆಸ್‌ವೇ ನಿರ್ವಹಣಾ ಸಂಸ್ಥೆಯು ಟ್ರಾಕ್ಟರ್‌, ಜೆಸಿಬಿ ಯಂತ್ರಗಳನ್ನು ಬಳಸುತ್ತಿದೆ.

ದಕ್ಷಿಣದಲ್ಲಿ ಬರದ ಛಾಯೆ, ಉತ್ತರದಲ್ಲಿ ನೆರೆ ಹಾವಳಿ: ಛತ್ತೀಸ್‌ಗಢದಲ್ಲಿ ಭಾರಿ ಮಳೆಯಿಂದ ಖರುನ್ ನದಿ ಉಕ್ಕಿ ಹರಿದು ಹಲವು ಗ್ರಾಮಗಳು ಜಲಾವೃತ

ಮೀರತ್‌ನಿಂದ ಪ್ರಯಾಗರಾಜ್‌ವರೆಗೆ ಸಾಗುವ ಸುಮಾರು 594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ನೀರು ತುಂಬಿಕೊಂಡಿರುವುದರಿಂದ ಪ್ರಯಾಣಿಕರಲ್ಲಿ ವಾಹನಗಳು ದಾರಿ ಮಧ್ಯೆ ಸಿಲುಕುವ ಆತಂಕ ಉಂಟಾಗಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author