ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Physical Abuse: 58 ಮಹಿಳೆಯರಿಗೆ 3 ವರ್ಷ ಅತ್ಯಾಚಾರ, ರಹಸ್ಯ ಕ್ಯಾಮೆರಾ ಇಟ್ಟು ಬ್ಲ್ಯಾಕ್‌ಮೇಲ್:‌ ಜ್ಯೋತಿಷಿಯ ಸೆರೆ

ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯೆಂದು ಹೇಳಿಕೊಳ್ಳುವ ಖರತ್, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಸಮ್ಮೋಹನಗೊಳಿಸುತ್ತಿದ್ದ. ಬಳಿಕ ಮಾಟಮಂತ್ರದ ಭಯ ಹುಟ್ಟಿಸಿ ಅಥವಾ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ಅಶೋಕ್ ಖರತ್‌

ನಾಸಿಕ್, ಮಾ.20: ರಾಜಕೀಯ ಮುಖಂಡರ ಜ್ಯೋತಿಷ್ಯ ಹೇಳಿ ವ್ಯಾಪಕ ಖ್ಯಾತಿ ಗಳಿಸಿದ್ದ ಮಹಾರಾಷ್ಟ್ರದ (maharastra) ಖ್ಯಾತ ಸೆಲೆಬ್ರೆಟಿ ಜ್ಯೋತಿಷಿಯನ್ನು (astrologer) ಅತ್ಯಾಚಾರ (physical abuse) ಆರೋಪದಲ್ಲಿ ಬಂಧಿಸಲಾಗಿದೆ. ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದ್ದು, 58 ಮಹಿಳೆಯರ ಅಶ್ಲೀಲ ವಿಡಿಯೋ ಈತ ಮಾಡಿಕೊಂಡದ್ದು ತಿಳಿದುಬಂದಿದೆ. ತನ್ನ ಕಚೇರಿಯಲ್ಲಿ ಈತ ರಹಸ್ಯ ಕ್ಯಾಮೆರಾ ಇಟ್ಟು ಅಲ್ಲಿಗೆ ಬಂದ ಮಹಿಳೆಯರ ವಿಡಿಯೋ ಮಾಡಿಕೊಳ್ಳುತ್ತಿದ್ದ.

ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’ ಅಶೋಕ್ ಖರತ್‌ನನ್ನು ಅತ್ಯಾಚಾರದ ಆರೋಪದಡಿ ನಾಸಿಕ್ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ನಾಸಿಕ್ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಖರತ್‌ನನ್ನು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತ ಮಹಿಳೆ ಮೇಲೆ ಈ ಜ್ಯೋತಿಷಿ 2022 ಮತ್ತು 2025 ರ ನಡುವೆ ನಿರಂತರ ಮೂರು ವರ್ಷ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ. ಅಂತೆಯೇ ತನಿಖೆಯ ವೇಳೆ ಆರೋಪಿಯು ಸಮಾಜದ ಪ್ರಭಾವಿ ಮಹಿಳೆಯರೂ ಸೇರಿದಂತೆ ಒಟ್ಟು 58 ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿರುವುದು ಪತ್ತೆಯಾಗಿದೆ. ಸರ್ಕಾರವಾಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಂಧಾ ಶ್ರದ್ಧಾ ನಿರ್ಮೋಲನ್ ಸಮಿತಿ (ANISA) ಈ ಜ್ಯೋತಿಷಿ ವಿರುದ್ಧ ಮೊದಲೇ ಎಚ್ಚರಿಕೆ ನೀಡಿತ್ತು. ಮರ್ಚೆಂಟ್ ನೇವಿಯಲ್ಲಿ ಅಧಿಕಾರಿಯಾಗಿದ್ದ ಖರತ್, ನಿವೃತ್ತಿಯ ನಂತರ ‘ಶಿವನಿಕಾ ಟ್ರಸ್ಟ್’ ಆರಂಭಿಸಿ ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.

ಇಫ್ತಾರ್ ಬಳಿಕ ಗಂಗಾ ನದಿಗೆ ಮಾಂಸ ತ್ಯಾಜ್ಯ ಎಸೆದ ಯುವಕರ ಬಂಧನ

ಈ ‘ಕ್ಯಾಪ್ಟನ್’ ಅಶೋಕ್ ಖರತ್‌ ಮಹಾರಾಷ್ಟ್ರದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಗಳಿಸಿದ್ದ. ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ಈತ ಖ್ಯಾತನಾಮರಿಗೆ ಜ್ಯೋತಿಷ್ಯ ಹೇಳಿ ಸುದ್ದಿಗೆ ಗ್ರಾಸವಾಗಿದ್ದ. ಇದೀಗ ಈತನ ಅಸಲಿ ಮುಖ ಈಗ ಬಯಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಅಮಲು ಪದಾರ್ಥ ನೀಡಿ ದೌರ್ಜನ್ಯ

ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯೆಂದು ಹೇಳಿಕೊಳ್ಳುವ ಖರತ್, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಸಮ್ಮೋಹನಗೊಳಿಸುತ್ತಿದ್ದ. ಬಳಿಕ ಮಾಟಮಂತ್ರದ ಭಯ ಹುಟ್ಟಿಸಿ ಅಥವಾ ಪತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಪೊಲೀಸರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯು ತನ್ನ ಕಚೇರಿಯಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಮಹಿಳೆಯರ ಅಸಭ್ಯ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ. ಪೊಲೀಸರು ವಶಪಡಿಸಿಕೊಂಡಿರುವ ಪೆನ್ ಡ್ರೈವ್‌ನಲ್ಲಿ 58 ವಿವಿಧ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ದೃಶ್ಯಗಳಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಸಂತ್ರಸ್ತ 35 ವರ್ಷದ ಮಹಿಳೆ ನೀಡಿದ ದೂರಿನಿಂದ ಈ ದಶಕಗಳ ಕಾಲದ ದಂಧೆ ಈಗ ಬೆಳಕಿಗೆ ಬಂದಿದೆ. ಬಂಧಿತನಿಂದ 58 ಮಹಿಳೆಯರ ರಹಸ್ಯ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣ ಮಹಾರಾಷ್ಟ್ರದಾದ್ಯಂತ ಭಾರೀ ಸಂಚಲನ ಮೂಡಿಸಿದೆ.

ಹರೀಶ್‌ ಕೇರ

View all posts by this author