ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಫ್ತಾರ್ ಬಳಿಕ ಗಂಗಾ ನದಿಗೆ ಮಾಂಸ ತ್ಯಾಜ್ಯ ಎಸೆದ ಯುವಕರ ಬಂಧನ

ಇಫ್ತಾರ್ ಕೂಟದ ಬಳಿಕ ಯುವಕರ ಗುಂಪೊಂದು ದೋಣಿಯಲ್ಲಿ ಬಂದು ವಾರಣಾಸಿಯ ಗಂಗಾ ನದಿಗೆ ಮಾಂಸದ ತ್ಯಾಜ್ಯಗಳನ್ನು ಎಸೆದು ಹೋಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು 14 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಫ್ತಾರ್ ಕೂಟ ಆಯೋಜಿಸಿದ್ದವರ ಬಂಧನ

ಸಂಗ್ರಹ ಚಿತ್ರ -

ವಾರಣಾಸಿ: ಗಂಗಾ ನದಿಗೆ (Ganga river) ಮಾಂಸದ ತ್ಯಾಜ್ಯ (meat waste) ಎಸೆದ 14 ಮಂದಿ ಯುವಕರನ್ನು ವಾರಾಣಸಿ ಪೊಲೀಸರು (varanasi police) ಬಂಧಿಸಿದ್ದಾರೆ. ರಂಜಾನ್ ಸಮಯದ ಇಫ್ತಾರ್ (Iftar Party) ಕೂಟದ ಬಳಿಕ ಯುವಕರ ಗುಂಪೊಂದು ಪಂಚಗಂಗಾ ಘಾಟ್ ಬಳಿ ದೋಣಿಯಲ್ಲಿ ಬಂದು ವಾರಣಾಸಿಯ ಗಂಗಾ ನದಿಗೆ ಮಾಂಸದ ತ್ಯಾಜ್ಯಗಳನ್ನು ಎಸೆದು ಹೋಗಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದ್ದು, ಇದಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿತರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವಿಡಿಯೊದಲ್ಲಿ ರಂಜಾನ್ ಪ್ರಯುಕ್ತ ಯುವಕರ ಗುಂಪೊಂದು ಪಂಚಗಂಗಾ ಘಾಟ್ ಬಳಿ ದೋಣಿಯಲ್ಲಿ ಉಪವಾಸ ಮುರಿದು ಬಳಿಕ ತ್ಯಾಜ್ಯಗಳನ್ನು ಗಂಗಾ ನದಿಗೆ ಎಸೆದಿದ್ದಾರೆ. 14 ಮಂದಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಈ ವಿಡಿಯೊ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರು ವ್ಯಕ್ತಿಯ 'ರಾಕೆಟ್ ಸ್ಟೌವ್' ಹೋಟೆಲ್‌ಗಳಿಗೆ ಆಸರೆ; ಹೇಗಿದೆ ನೋಡಿ ಇದರ ವಿನ್ಯಾಸ!

ಮಾಂಸಾಹಾರಿ ಆಹಾರ ಸೇವನೆ ಮಾಡಿ ಬಳಿಕ ಅದನ್ನು ನದಿಯಲ್ಲಿ ವಿಲೇವಾರಿ ಮಾಡಿರುವ ಆರೋಪದ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು 14 ಮಂದಿಯನ್ನು ಕೂಡ ತಕ್ಷಣ ಬಂಧಿಸಿದರು. ಈ ಕುರಿತು ಮುಂದಿನ ಕಾನೂನು ಕ್ರಮಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ಭಾರಿ ಚರ್ಚೆಗೆ ಕಾರಣವಾಗಿದೆ. ಪತ್ರಕರ್ತ ಪಿಯೂಷ್ ರೈ ಎಂಬವರು ಇದರ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ತಕ್ಷಣ ಕ್ರಮಕ್ಕೆ ಆಗ್ರಹಿಸಿದರು. ಈ ಕುರಿತು ವಾರಣಾಸಿಯ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷ ರಜತ್ ಜೈಸ್ವಾಲ್ ದೂರು ದಾಖಲಿಸಿದ್ದರು.



ದೂರಿನ ಮೇರೆಗೆ ಪೊಲೀಸರು, ಪ್ರಕರಣ ದಾಖಲಿಸಿ ಎಲ್ಲರನ್ನು ಬಂಧಿಸಿದರು. ಇದಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಡಿಸಿಪಿ ಕಾಶಿ, ದೂರುಗಳನ್ನು ದಾಖಲಿಸಲಾಗಿದೆ. 14 ಮಂದಿಯನ್ನು ಬಂಧಿಸಲಾಗಿದೆ. ಅಗತ್ಯ ಕಾನೂನು ಕ್ರಮಗಳು ನಡೆಯುತ್ತಿವೆ. ಅಧಿಕಾರಿಗಳು ವಿಷಯದ ಗಂಭೀರತೆಯನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

Viral News: ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ಕೊತ್ವಾಲಿ ಎಸಿಪಿ ವಿಜಯ್ ಪ್ರತಾಪ್ ಸಿಂಗ್ ಮಾತನಾಡಿ, ಈ ಘಟನೆ ಮಾರ್ಚ್ 16 ರಂದು ಪಂಚಗಂಗಾ ಘಾಟ್‌ನಲ್ಲಿ ನಡೆದಿದೆ. ವಿಷಯದ ಗಂಭೀರತೆಯನ್ನು ಪರಿಗಣಿಸಿ ನಾವು ತಕ್ಷಣ ಕ್ರಮಕೈಗೊಂಡಿದ್ದೇವೆ. ಒಟ್ಟು 14 ಜನರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.