ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಕ್ಕಳ ಮೇಲೆ ದೌರ್ಜನ್ಯ: ಬೆಂಗಳೂರು ಡೇ ಕೇರ್‌ನ ಇಬ್ಬರು ಆರೈಕೆದಾರರ ಬಂಧನ

ಬೆಂಗಳೂರಿನ ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಇಬ್ಬರು ಆರೈಕೆದಾರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷ ವಯಸ್ಸಿನ ಮಕ್ಕಳನ್ನು ಡೇ ಕೇರ್ ಆರೈಕೆದಾರರು ವಾಷಿಂಗ್ ಮೆಷಿನ್ ಒಳಗೆ ಹಾಕಿ ಚಿತ್ರ ಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಡೇ ಕೇರ್ (bengaluru day care) ವೊಂದರಲ್ಲಿ ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯದ ವಿಡಿಯೋವೊಂದರನ್ನು (viral video) ದೂರುದಾರರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಸುಮಾರು ಎರಡು ವರ್ಷದ ಮಕ್ಕಳನ್ನು ಡೇ ಕೇರ್ ಆರೈಕೆದಾರರು ವಾಷಿಂಗ್ ಮೆಷಿನ್ ಒಳಗೆ ತುಂಬಿರುವುದನ್ನು ತೋರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೈಕೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬೆಂಗಳೂರಿನ (bengaluru crime) ಬ್ರೂಕ್‌ಫೀಲ್ಡ್‌ನಲ್ಲಿರುವ ಕ್ಯಾಪ್‌ಜೆಮಿನಿ ತಂತ್ರಜ್ಞಾನ ಉದ್ಯಾನವನದೊಳಗಿನ ಕ್ಯಾಂಪಸ್ ಡೇಕೇರ್‌ನಲ್ಲಿ ನಡೆದಿದೆ.

ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇ ಕೇರ್ ನಲ್ಲಿ ಕೆಲಸ ಮಾಡುವ ಇಬ್ಬರು ಆರೈಕೆದಾರರು ಮಕ್ಕಳನ್ನು ಸ್ನಾನಗೃಹದೊಳಗೆ ವಾಷಿಂಗ್ ಮೆಷಿನ್ ಒಳಗೆ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದರು. ಇದಕ್ಕೆ ಸಂಬಂಧಿಸಿ ಆರೈಕೆದಾರರಾದ ವಿಜಯಲಕ್ಷ್ಮಿ ಮತ್ತು ಮಂಜುಳಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

61ನೇ ವಯಸ್ಸಿನಲ್ಲಿ ನಟ ಆಮಿರ್ ಖಾನ್‌ಗೆ 3ನೇ ಮದುವೆ; ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಜೊತೆ ಜುಲೈ 5ಕ್ಕೆ ಕಲ್ಯಾಣ

ಈ ಪ್ರಕರಣಕ್ಕೆ ಸಂಬಂಧಿಸಿ ಕ್ಯಾಪ್‌ಜೆಮಿನಿ ಮತ್ತು ಲಿಟಲ್ ಸ್ಕಾಲರ್ ಏಜೆನ್ಸಿಯ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ವಾರದ ಆರಂಭದಲ್ಲಿ ದೂರುದಾರರೊಬ್ಬರು ಭಯಾನಕ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಈ ವಿಡಿಯೋದಲ್ಲಿ ವಾಷಿಂಗ್ ಮೆಷಿನ್ ನ ಮುಂಭಾಗದ ಲೋಡಿಂಗ್ ನೊಳಗೆ ಎರಡು ವರ್ಷ ವಯಸ್ಸಿನ ಮಕ್ಕಳು ಕುಳಿತಿರುವುದನ್ನು ಕಾಣಬಹುದು. ಆರೈಕೆದಾರರು ಅವರ ಮೇಲೆ ಜೆಟ್ ಸ್ಪ್ರೇನಿಂದ ನೀರು ಹಾಕುತ್ತಿರುವುದನ್ನು ಕೂಡ ವಿಡಿಯೋದಲ್ಲಿ ತೋರಿಸಲಾಗಿದೆ. ಇನ್ನೊಂದು ವಿಡಿಯೋದಲ್ಲಿ ಸಿಬ್ಬಂದಿ ಮಕ್ಕಳನ್ನು ಸ್ನಾನಗೃಹದೊಳಗೆ ಬೀಗ ಹಾಕಿ ಕೂಡಿ ಹಾಕಿರುವುದನ್ನು ಕೂಡ ತೋರಿಸಲಾಗಿದೆ.

ವೈರಲ್ ವಿಡಿಯೋಗೆ ಸಂಬಂಧಿಸಿ ಪೊಲೀಸ್ ದೂರು ದಾಖಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಕೂಡ ಪ್ರತ್ಯೇಕ ದೂರು ಸಲ್ಲಿಸಲಾಗಿದೆ.

ಡೇಕೇರ್‌ನಲ್ಲಿ ಐವರು ಮಹಿಳಾ ಆರೈಕೆದಾರರರಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯೊಬ್ಬರು, ಜಾಗತಿಕ ಸಲಹಾ ಸಂಸ್ಥೆಯ ಉದ್ಯೋಗಿಗಳು ಕೇಂದ್ರಕ್ಕೆ ಬಿಟ್ಟ ಚಿಕ್ಕ ಮಕ್ಕಳನ್ನು ಇವರು ನಿಂದಿಸಿದ್ದಾರೆ ಎನ್ನುವ ಆರೋಪವಿದೆ. ಸುಮಾರು 50 ರಿಂದ 60 ಮಕ್ಕಳು ಕೇಂದ್ರಕ್ಕೆ ದಾಖಲಾಗಿದ್ದರು. ಅವರಲ್ಲಿ 15 ರಿಂದ 20 ಮಕ್ಕಳು ಪ್ರತಿದಿನ ಬರುತ್ತಿದ್ದರು. ಮಕ್ಕಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಮೇಲ್ವಿಚಾರಕರಿಗೆ ಈ ಕುರಿತು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿಸಿದರು.

ಪ್ರೊಬೇಷನ್ ಅಧಿಕಾರಿ ತಿಲಕೇಶ್ ಕುಮಾರ್ ಮಾತನಾಡಿ, ದೌರ್ಜನ್ಯದ ಕುರಿತು ದೂರು ನೀಡಿದ್ದ ಹಿಂದಿನ ವಿಸ್ಲ್‌ಬ್ಲೋವರ್ ಅನ್ನು ವಜಾಗೊಳಿಸಲಾಗಿದೆ. ಮಕ್ಕಳನ್ನು ನೋಡಿಕೊಳ್ಳಬೇಕಾದವರು ಮಕ್ಕಳು ಅಳುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕೂಡಿ ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ.

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ: ಸಿಯಾ ಗೋಯಲ್‌ಗೆ ಪಾಲಿಗ್ರಾಫ್ ಪರೀಕ್ಷೆಗೆ ಪೊಲೀಸರ ಮನವಿ

ಪ್ರಕರಣಕ್ಕೆ ಸಂಬಂಧಿಸಿ ನಾವು ತನಿಖೆಗೆ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಹೇಳಿರುವ ಕ್ಯಾಪ್ಜೆಮಿನಿ , ಸದ್ಯಕ್ಕೆ ಕ್ಯಾಂಪಸ್‌ನಲ್ಲಿರುವ ಡೇಕೇರ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author