ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cindy Rodriguez Singh: ಮಗನನ್ನು ಕೊಂದು ಭಾರತದಲ್ಲಿ ಅವಿತಿದ್ದ ಅಮೆರಿಕದ ಮೋಸ್ಟ್‌ ವಾಂಟೆಡ್‌ ಹಂತಕಿ ಅರೆಸ್ಟ್‌!

ಭಾರತೀಯ ಮೂಲದ ಅಮೆರಿಕ ಪ್ರಜೆ ನಲ್ವತ್ತು ವರ್ಷ ವಯಸ್ಸಿನ ಸಿಂಡಿ ಸಿಂಗ್ ತನ್ನ ಮಗನನ್ನೇ ಕೊಲೆ ಮಾಡಿರುವ ಆರೋಪ ಹೊತ್ತಿದ್ದು, ಇದೀಗ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನ 10 ಪ್ರಮುಖ ಪರಾರಿ ಆರೋಪಿಗಳ ಪಟ್ಟಿಯಲ್ಲಿದ್ದಾಳೆ. ಸಿಂಡಿ ತನ್ನ ಆರು ವರ್ಷದ ಮಗುವನ್ನು ಕೊಂದ ಆರೋಪ ಎದುರಿಸುತ್ತಿದ್ದು, ಆಕೆ ಭಾರತದಲ್ಲಿದ್ದಾಳೆ ಎಂದು ಪತ್ತೆ ಹಚ್ಚಿದ ಎಫ್‌ಬಿಐ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಿಂಡಿ ರೊಡ್ರಿಗಸ್ ಸಿಂಗ್

ನವದೆಹಲಿ: ಅಮೆರಿಕದ (America) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (Federal Bureau of Investigation) ಭಾರತ ಮೂಲದ 40 ವರ್ಷ ಸಿಂಡಿ ರೊಡ್ರಿಗಸ್ ಸಿಂಗ್ (Cindy Rodriguez Singh) ಎಂಬಾಕೆಯನ್ನು ಬಂಧಿಸಿದೆ. ಇವರು ತಮ್ಮ 6 ವರ್ಷದ ಮಗ ನೋಯೆಲ್ ರೊಡ್ರಿಗಸ್ ಅಲ್ವಾರೆಜ್‌ನನ್ನು 2022ರ ಕೊಲೆ ಮಾಡಿದ ಪ್ರಕರಣದಲ್ಲಿ ಎಫ್‌ಬಿಐನ ಹತ್ತು ಮೋಸ್ಟ್ ವಾಂಟೆಡ್ ಅಪರಾಧಿಗಳ (Ten Most Wanted Fugitives) ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಳು. 2023ರ ಮಾರ್ಚ್‌ನಲ್ಲಿ ತನಿಖೆಯಿಂದ ತಪ್ಪಿಸಿಕೊಳ್ಳಲು ಸಿಂಡಿ ತನ್ನ ಭಾರತೀಯ ಮೂಲದ ಗಂಡ ಅರ್ಶದೀಪ್ ಸಿಂಗ್ ಮತ್ತು ಆರು ಮಕ್ಕಳೊಂದಿಗೆ ಭಾರತಕ್ಕೆ ಪರಾರಿಯಾಗಿದ್ದರು.

ಘಟನೆಯ ವಿವರ

2023ರ ಮಾರ್ಚ್ 22ರಂದು ಸಿಂಡಿ ರೊಡ್ರಿಗಸ್ ಮತ್ತು ಆಕೆಯ ಕುಟುಂಬ ಭಾರತಕ್ಕೆ ಪ್ರಯಾಣಿಸುವ ವಿಮಾನದಲ್ಲಿ ಕಂಡುಬಂದರು, ಆದರೆ ಅವರ ಜತೆ ನೋಯೆಲ್ ಇರಲಿಲ್ಲ. ಬಾಲಕ ಕಾಣೆಯಾದ ವರದಿ ನಂತರ, ಸಿಂಡಿ ರೊಡ್ರಿಗಸ್ ನನ್ನ ಮಗ ತಂದೆಯೊಂದಿಗೆ ಮೆಕ್ಸಿಕೋದಲ್ಲಿದ್ದಾನೆ ಎಂದು ಸುಳ್ಳು ಹೇಳಿದ್ದರು. ತನಿಖೆಯಲ್ಲಿ ಆಕೆಯ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು. ಎಫ್‌ಬಿಐ ಜುಲೈ 2025ರಲ್ಲಿ ಆಕೆಯ ಬಂಧನಕ್ಕೆ 250,000 ಡಾಲರ್ ಬಹುಮಾನವನ್ನು ಘೋಷಿಸಿತ್ತು. ಅಕ್ಟೋಬರ್ 2024ರಲ್ಲಿ ಇಂಟರ್‌ಪೋಲ್ ಅಧಿಕಾರಿಗಳು ರೆಡ್ ನೋಟಿಸ್ ಜಾರಿಗೊಳಿಸಿದ್ದರು.

ಈ ಸುದ್ದಿಯನ್ನು ಓದಿ: Viral Post: ಆಕಸ್ಮಿಕವಾಗಿ ಗೂಗಲ್ ಮ್ಯಾಪ್‌ನಲ್ಲಿ ಸೆರೆಯಾಯ್ತು ದಂಪತಿಯ ದಶಕದ ಪ್ರಯಾಣ; ಈಗ ಇಬ್ಬರೂ ಇಲ್ಲ, ಮನೆಯೂ ಕಣ್ಮರೆ!

ಭಾರತದಲ್ಲಿ ಬಂಧನ

ಭಾರತೀಯ ಅಧಿಕಾರಿಗಳು ಮತ್ತು ಇಂಟರ್‌ಪೋಲ್ ಸಹಕಾರದೊಂದಿಗೆ ಎಫ್‌ಬಿಐ ಭಾರತದಲ್ಲಿ ಸಿಂಡಿ ರೊಡ್ರಿಗಸ್‌ರನ್ನು ಬಂಧಿಸಿದೆ. ಆಕೆಯನ್ನು ಅಮೆರಿಕಕ್ಕೆ ಕರೆತಂದು ಟೆಕ್ಸಾಸ್ ಅಧಿಕಾರಿಗಳಿಗೆ ಒಪ್ಪಿಸಲಾಗುವುದು ಎಂದು ವರದಿಯಾಗಿದೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, “ನ್ಯಾಯಕ್ಕೆ ಗಡಿಯಿಲ್ಲ. ಸಿಂಡಿ ರೊಡ್ರಿಗಸ್ ತನ್ನ ಮಗನ ಕೊಲೆಗೆ ಜವಾಬ್ದಾರಿಯನ್ನು ಎದುರಿಸಲಿದ್ದಾಳೆ” ಎಂದಿದ್ದಾರೆ.

ಮಗನಿಗೆ ಆಹಾರ ಕೊಡದ ತಾಯಿ

ತನ್ನ ಮಗನ ಕೊಲೆ ಆರೋಪದ ಮೊದಲ ತಾಯಿಯಾಗಿ ಸಿಂಡಿ ರೊಡ್ರಿಗಸ್ ಎಫ್‌ಬಿಐನ “ಮೋಸ್ಟ್ ವಾಂಟೆಡ್” ಪಟ್ಟಿಯಲ್ಲಿ ಸೇರಿದ್ದಳು. ಸಾಕ್ಷಿಗಳ ಪ್ರಕಾರ, ಆಕೆ ತನ್ನ ಮಗ ದುಷ್ಟ ಎಂದು ನಂಬಿದ್ದಳು. ದೀರ್ಘಕಾಲದ ಶ್ವಾಸಕೋಶ ರೋಗದಿಂದ ಬಳಲುತ್ತಿದ್ದ ನೋಯೆಲ್‌ಗೆ ಆಕ್ಸಿಜನ್ ಬೆಂಬಲ ಬೇಕಿತ್ತು. ಆದರೆ, ಆಕೆ ಆತನನ್ನು ದುರ್ಬಲಗೊಳಿಸಿ, ಆಹಾರ ಮತ್ತು ನೀರು ಕೊಡಲು ನಿರಾಕರಿಸಿದ್ದಳು ಎಂದು ಆರೋಪಿಸಲಾಗಿದೆ. ಒಮ್ಮೆ ಬಾಲಕ ನೀರು ಕುಡಿಯಲು ಯತ್ನಿಸಿದಾಗ ಕೀಯಿಂದ ಹೊಡೆದಿದ್ದಳು ಎಂದು ವರದಿಯಾಗಿದೆ.