ಬೆಂಗಳೂರು, ಜ.31: ಉದ್ಯಮಿ ಸಿಜೆ ರಾಯ್ (CJ Roy death) ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳಲು ಮುನ್ನ ಯಾರ ಜೊತೆಯಾದರೂ ಮಾತನಾಡಿದರಾ ಅಥವಾ ಯಾರಿಗಾದರೂ ಮೆಸೇಜ್ ಕಳುಹಿಸಿದರಾ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ರಾಯ್ ಅವರ ಮೊಬೈಲ್‌ನ್ನು ಸಿಐಡಿ ಸೈಬರ್ ಸೆಲ್‌ಗೆ ರಿಕವರಿಗಾಗಿ ಕಳುಹಿಸಿದ್ದಾರೆ. ಎರಡು ಫೋನ್‌ಗಳೂ ಪಾಸ್‌ವರ್ಡ್ ಪ್ರೊಟೆಕ್ಟ್ ಆಗಿವೆ. ಹೀಗಾಗಿ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಬೇಕಿದೆ.
ಕಾನ್ಫಿಡೆಂಟ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ದೂರಿನಲ್ಲಿ ತಿಳಿಸಿರುವಂತೆ ಆತ್ಮಹತ್ಯೆಗೂ ಮುನ್ನ ತಾಯಿ ಜೊತೆ ಮಾತನಾಡಬೇಕೆಂದು ರಾಯ್ ತಿಳಿಸಿದ್ದರು. ಜೊತೆಗೆ ಗನ್‌ಮ್ಯಾನ್ ಬಳಿ ಯಾರಿಗೂ ಒಳಗೆ ಬಿಡದಂತೆ ಹೇಳಿದ್ದರು. ಅದರಂತೆ ಆತ್ಮಹತ್ಯೆಗೂ ಮುನ್ನ ನಿಜಕ್ಕೂ ತಾಯಿ ಜೊತೆಗೆ ಮಾತನಾಡಿದ್ರಾ? ಅಥವಾ ಬೇರೆ ಇನ್ಯಾರ ಜೊತೆಯಾದ್ರೂ ಮಾತನಾಡಿದ್ರಾ? ಅಥವಾ ಮೆಸೇಜ್ ಕಳಿಸದ್ದಾರಾ? ಎಂಬ ಕೆಲ ಅನುಮಾನಗಳು ವ್ಯಕ್ತವಾಗಿದ್ದು, ಐಫೋನ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳನ್ನು ಪೊಲೀಸರ ವಶಕ್ಕೆ ಪಡೆದು, ಸಿಐಡಿಗೆ ರವಾನಿಸಿದ್ದಾರೆ.
ಎರಡು ಫೋನ್‌ಗೆ ಪಾಸ್‌ವರ್ಡ್ ಇರುವ ಕಾರಣ ಕೋರ್ಟ್ ಅನುಮತಿ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಬೇಕು. ಹೀಗಾಗಿ ಸದ್ಯ ಸಿಐಡಿ ಸೈಬರ್ ಸೆಲ್‌ಗೆ ಮೊಬೈಲ್‌ನ್ನು ರವಾನೆ ಮಾಡಿದ್ದು, ಮೊಬೈಲ್‌ನಲ್ಲಿ ಇರುವ ಮಾಹಿತಿ ರಿಕವರಿ ಮಾಡಲಿದ್ದಾರೆ.
CJ Roy Death: ಕಾನ್ಫಿಡೆಂಟ್ ಗ್ರೂಫ್ ಚೇರ್ಮನ್ ಸಿಜೆ ರಾಯ್ ಸಾವಿನ ಆ ಕೊನೆಯ ಕ್ಷಣಗಳಲ್ಲಿ ಏನಾಯ್ತು?
ನಿನ್ನೆ (ಜ.31) ರಾತ್ರಿ ಕಾನ್ಫಿಡೆಂಟ್ ಕಚೇರಿಯಲ್ಲಿದ್ದ ರಾಯ್ ಅವರ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡೈರಿಯಲ್ಲಿ ಕೆಲ ನಟಿಯರು, ಮಾಡೆಲ್ ಹಾಗೂ ರಾಜಕಾರಣಿಗಳ ಹೆಸರುಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕಾಗಿ ಬರೆದಿದ್ದಾರೆ? ಬರೀ ಈವೆಂಟ್ ವಿಚಾರಕ್ಕಾ? ಅಥವಾ ಬೇರೆ ವಿಷಯಾ ಇದೆಯಾ? ಎಂದು ಪೊಲೀಸರು ಇಂಚಿಂಚೂ ತನಿಖೆ ನಡೆಸುತ್ತಿದ್ದಾರೆ.
ಇಂದು ಸಂಜೆ ಕಾಸಾಗ್ರ‍್ಯಾಂಡ್‌ನಲ್ಲಿ ಅಂತ್ಯಕ್ರಿಯೆ
ಸಿಜೆ ರಾಯ್ ಅವರಿಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ. ತಮ್ಮ ಆಪ್ತರ ಬಳಿ ಈ ಹಿಂದೆ ವ್ಯಕ್ತಪಡಿಸಿದ್ದ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ‍್ಯಾಂಡ್‌ನಲ್ಲಿ ಡಾ.ಸಿ.ಜೆ. ರಾಯ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಡೆಯಲಿದೆ. ವೈಟ್ ಗೋಲ್ಡ್ ಸಂಸ್ಥೆಯ ಮಾಲೀಕ, ಸಹೋದರ ಬಾಬು ಜೋಸೆಫ್ ಒಡೆತನದ ಕೋರಮಂಗಲದ ವೈಟ್ ಹೌಸ್‌ನಲ್ಲಿ ಮೃತ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ನಾಡಿನ ಪ್ರಮುಖ ಉದ್ಯಮಿಗಳು, ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
C J Roy: ಮಗಳಿಗಾಗಿ ಖರೀದಿಸಿದ್ದ ಜಾಗವನ್ನು ನಟ ಪುನೀತ್ ರಾಜ್‌ಕುಮಾರ್‌ಗೆ ನೀಡಿದ್ದ ಸಿ.ಜೆ. ರಾಯ್