C J Roy: ಮಗಳಿಗಾಗಿ ಖರೀದಿಸಿದ್ದ ಜಾಗವನ್ನು ನಟ ಪುನೀತ್ ರಾಜ್‌ಕುಮಾರ್‌ಗೆ ನೀಡಿದ್ದ ಸಿ.ಜೆ. ರಾಯ್
ಉದ್ಯಮಿ ಸಿ.ಜೆ.ರಾಯ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಮಲಯಾಳಂ ಹಾಗೂ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ರಂಗದ ಹಲವು ಪ್ರಮುಖರಿಗೆ ಇವರು ಆಪ್ತರಾಗಿದ್ದರು. ಇವರು ನಟ ಪುನೀತ್ ರಾಜ್ ಕುಮಾರ್ ಅವರ ಜತೆಗಿನ ಒಡನಾಟದ ಬಗ್ಗೆ ಇತ್ತೀಚೆಗೆ ಪೋಸ್ಟ್ ಹಂಚಿಕೊಂಡು, ಸ್ಮರಿಸಿಕೊಂಡಿದ್ದರು.
ನಟ ಡಾ.ರಾಜ್ ಕುಮಾರ್, ಪುನೀತ್, ರಾಘಣ್ಣ ಜತೆ ಉದ್ಯಮಿ ಸಿ.ಜೆ.ರಾಯ್ (ಸಂಗ್ರಹ ಚಿತ್ರ) -
ಬೆಂಗಳೂರು: ನಗರದಲ್ಲಿ ಆತ್ಮಹತ್ಯೆಗೆ ಶರಣಾದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ (C J Roy) ಅವರು ಚಿತ್ರರಂಗದ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಇವರು ಸ್ವತಃ ನಿರ್ಮಾಪಕರಾಗಿಯೂ ಮಲಯಾಳಂ ಹಾಗೂ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ರಂಗದ ಪ್ರಮುಖರಿಗೆ ಆಪ್ತರಾಗಿದ್ದ ಇವರು, ಈ ಹಿಂದೆ ತಮ್ಮ ಮಗಳಿಗಾಗಿ ಖರೀದಿಸಿದ್ದ ಜಾಗವನ್ನು ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ನೀಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಉದ್ಯಮಿ ಹೇಳಿಕೊಂಡಿದ್ದರು.
ಆರಂಭದಲ್ಲಿ ಕೆಲವು ಕಂಪನಿ ಕೆಲಸ ಮಾಡಿದ್ದ ಸಿಜೆ ರಾಯ್ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅವರು ಯಶಸ್ಸು ಕಂಡು ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದಾರೆ.
ರಾಯ್ ಬಳಿ ಜಾಗ ಖರೀದಿಸಿದ್ದ ಅಪ್ಪು
ಪುನೀತ್ ರಾಜಕುಮಾರ್ ಬಗ್ಗೆ ಸ್ಮರಿಸಿ ಉದ್ಯಮಿ ಸಿ.ಜೆ.ರಾಯ್ ಅವರು 2025 ಮಾರ್ಚ್ 22ರಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಅಪ್ಪು ತಮ್ಮ ಬಳಿ ಜಾಗ ಖರೀದಿಸಿದ್ದ ಬಗ್ಗೆ ನೆನಪಿಸಿಕೊಂಡಿದ್ದರು.
ಅಪ್ಪು ಒಬ್ಬ ಸರಳ ಜೆಂಟಲ್‌ಮನ್ ಮತ್ತು ಅತ್ಯುತ್ತಮ ವ್ಯಕ್ತಿ ಮತ್ತು ಅದ್ಭುತ ನಟ. ನಾವು ಎಲ್ಲರೂ ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರು ನಮ್ಮನ್ನು ಅಗಲಿ ಕೆಲವೇ ತಿಂಗಳು ಆಗಿದೆ ಎನಿಸುತ್ತಿದೆ. ಅಪ್ಪು 2003ರಲ್ಲಿ ಕೊರಮಂಗಲದಲ್ಲಿ ನನ್ನ ಒಂದು ಆಸ್ತಿ ಖರೀದಿಸಲು ಭೇಟಿಯಾಗಿದ್ದರು. ಬಹುಶಃ ಅದು ಅವರ ಪರಿಶ್ರಮದಿಂದ ಗಳಿಸಿದ ಹಣದಿಂದ ಖರೀದಿಸಿದ್ದ ಮೊದಲ ಆಸ್ತಿ. ಅಪ್ಪು, ವರ ನಟ ಡಾ. ರಾಜ್ ಕುಮಾರ್ ಮತ್ತು ರಾಘಣ್ಣರೊಂದಿಗೆ ತಾವು ಇಳಿದಿದ್ದ ಪೋಟೋವನ್ನು ಸಿ.ಜೆ.ರಾಯ್ ಹಂಚಿಕೊಂಡಿದ್ದರು.
C.J. Roy: ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಸಿ.ಜೆ. ರಾಯ್‌ಗಿದ್ದ ನಂಟು ಎಂಥದ್ದು?
ಲಾಭವಿಲ್ಲದೇ ಜಾಗ ಮಾರಾಟ
ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ದಂಪತಿ ಸೈಟ್ ಖರೀದಿಸುವ ಮನಸ್ಸು ಮಾಡಿದ್ದರು. ಆಗ ಸಿಜೆ ರಾಯ್ ಅವರು ಮಗಳಿಗೋಸ್ಕರ ತಗೊಂಡಿದ್ದ ಸೈಟ್‌ನ್ನು ಪುನೀತ್‌ಗೆ ನೀಡಿದ್ದರು. ಈ ಬಗ್ಗೆ ಸಿಜೆ ರಾಯ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, “ಪುನೀತ್ ರಾಜ್‌ಕುಮಾರ್ ಅವರು ಅದ್ಭುತವಾದ ವ್ಯಕ್ತಿ. ವ್ಯಕ್ತಿಯನ್ನು ನೋಡಿದಾಗ ಅವರೇನು ಎಂದು ಗೊತ್ತಾಗುವುದು, ನನ್ನ ಮಗಳಿಗೋಸ್ಕರ ತಗೊಂಡಿದ್ದ ಜಾಗವನ್ನು ನಾನು ಲಾಭವಿಲ್ಲದೆ ಪುನೀತ್‌ಗೆ ಕೊಟ್ಟೆ” ಎಂದು ಹೇಳಿದ್ದರು.