ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shootout Case: ತಂದೆಯ ಪಿಸ್ತೂಲ್‌ನಿಂದ ಸಹಪಾಠಿ ಮೇಲೆ ಗುಂಡಿನ ದಾಳಿ ನಡೆಸಿದ ಬಾಲಕರು!

ಗುರುಗ್ರಾಮ್‌ನ ಐಷಾರಾಮಿ ವಸತಿ ಸೊಸೈಟಿಯಲ್ಲಿ 11 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ತಮ್ಮ ತಂದೆಯ ಪಿಸ್ತೂಲ್‌ನಿಂದ ತಮ್ಮ ಸಹಪಾಠಿಯ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ. ಗುಂಡು ತಗುಲಿದ ಬಾಲಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.

ಸಹಪಾಠಿ ಮೇಲೆ ಗುಂಡಿನ ದಾಳಿ ನಡೆಸಿದ ಬಾಲಕರು!

ಸಹಪಾಠಿ ಮೇಲೆ ಗುಂಡಿನ ದಾಳಿ ನಡೆಸಿದ ಬಾಲಕರು -

Vishakha Bhat
Vishakha Bhat Nov 9, 2025 3:44 PM

ಲಖನೌ: ಗುರುಗ್ರಾಮ್‌ನ ಐಷಾರಾಮಿ ವಸತಿ (Shootout Case) ಸೊಸೈಟಿಯಲ್ಲಿ 11 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ತಮ್ಮ ತಂದೆಯ ಪಿಸ್ತೂಲ್‌ನಿಂದ ತಮ್ಮ ಸಹಪಾಠಿಯ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ. ಗುಂಡು ತಗುಲಿದ ಬಾಲಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಸೆಕ್ಟರ್ 48 ರ ಸೆಂಟ್ರಲ್ ಪಾರ್ಕ್ ರೆಸಾರ್ಟ್ಸ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳಲ್ಲಿ ಒಬ್ಬ 17 ವರ್ಷದ ಬಾಲಕನನ್ನು ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡ ಬಂದಿದ್ದ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಬಾಲಕನ ಜೊತೆ ಜಗಳವಾಡಿದ್ದರು ಎಂದು ತಿಳಿದು ಬಂದಿದೆ. ಮೂವರು ಹದಿಹರೆಯದವರೂ ಹೌಸಿಂಗ್ ಸೊಸೈಟಿಗೆ ಹತ್ತಿರದಲ್ಲಿರುವ ಯದುವಂಶಿ ಶಾಲೆಯ ವಿದ್ಯಾರ್ಥಿಗಳು. ಹಲ್ಲೆಯಲ್ಲಿ ಬಳಸಲಾದ ಬಂದೂಕನ್ನು ಪ್ರಮುಖ ಆರೋಪಿ ತಂದೆ ಹೊಂದಿದ್ದು, ತನ್ನ ಮಗನಿಗೆ ಫೋನ್ ಮಾಡಿ ಭೇಟಿಯಾಗಲು ಕೇಳಿಕೊಂಡಿದ್ದ ಎಂದು ಬಾಲಕನ ತಾಯಿ ಹೇಳಿದ್ದಾರೆ.

ಪೊಲೀಸರು ಸ್ಥಳದಿಂದ ಒಂದು ಪಿಸ್ತೂಲ್, ಒಂದು ಮ್ಯಾಗಜೀನ್, ಐದು ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ಒಂದು ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆರೋಪಿಯ ನಿವಾಸದ ಕೋಣೆಯೊಳಗಿನ ಪೆಟ್ಟಿಗೆಯಲ್ಲಿ ಮತ್ತೊಂದು ಮ್ಯಾಗಜೀನ್ ಮತ್ತು 65 ಲೈವ್ ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿವೆ. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಧಾವಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ. ಗುರುಗ್ರಾಮ ಪೊಲೀಸರು ಎಲ್ಲಾ ಬಂದೂಕು ಮಾಲೀಕರು ತಮ್ಮ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ಮತ್ತು ಮಕ್ಕಳ ವ್ಯಾಪ್ತಿಯಿಂದ ದೂರವಿಡುವಂತೆ ಮನವಿ ಮಾಡಿದ್ದಾರೆ.

ಬಾಲಕಿ ಮೇಲೆ ಗುಂಡು ಹಾರಿಸಿದ ಪಾಪಿ

ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕಿ ಗ್ರಂಥಾಲಯದಲ್ಲಿ ಅಧ್ಯಯನ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಕಿಡಿಗೇಡಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ ಘಟನೆ ನವದೆಹಲಿಯ ಫರಿದಾಬಾದ್‌ನ ಶ್ಯಾಮ್ ಕಾಲೊನಿಯಲ್ಲಿ ಸೋಮವಾರ ಸಂಜೆ ನಡೆದಿದೆ. 17 ವರ್ಷದ ಬಾಲಕಿಯ ಭುಜ ಮತ್ತು ಹೊಟ್ಟೆಗೆ ಗುಂಡು ತಗುಲಿದೆ. ಪ್ರಾಣಾಪಾಯದಿಂದ ಪಾರಾಗಿರುವ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಗುಂಡು ಹಾರಿಸಿದ ದುರುಳನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದಾಳಿಕೋರನನ್ನು ಗುರುಗ್ರಾಮ್‌ನ ಸೋಹ್ನಾ ಸಮೀಪದ ಸರ್ಮತ್ಲಾ ಗ್ರಾಮದ ನಿವಾಸಿ ಜತಿನ್ ಮಂಗಲಾ(20 ವರ್ಷ) ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Self Harming: ಐಪಿಎಸ್‌ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್‌; ಪೂರನ್‌ ವಿರುದ್ಧವೇ ಆರೋಪಿಸಿ ಶೂಟ್‌ ಮಾಡಿಕೊಂಡ ಪೊಲೀಸ್‌!

ಗಾಯಾಳು ಬಾಲಕಿಯ ಹೆಸರು ಕನಿಷ್ಕಾ. ಈಕೆಯ ಆರೋಗ್ಯ ಸ್ಥಿರವಾಗಿದೆ. ಸೆಕ್ಟರ್ 8ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸಂತ್ರಸ್ತೆ ಬಾಲಕಿ ಭಗತ್ ಸಿಂಗ್ ಕಾಲೊನಿಯ ನಿವಾಸಿ. 12ನೇ ತರಗತಿ ವಿಜ್ಞಾನ ವಿದ್ಯಾರ್ಥಿನಿ. ಕಳೆದ ಕೆಲವು ತಿಂಗಳಿನಿಂದ ಕಿಡಿಗೇಡಿ ಈಕೆಗೆ ಕಿಡಿಗೇಡಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.