ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಸಿಕ್‌ ಸ್ವಯಂಘೋಷಿತ ದೇವಮಾನವನ ಆಪ್ತ ಸಹಾಯಕ, ಪತ್ನಿ ರಸ್ತೆ ಅಪಘಾತದಲ್ಲಿ ಸಾವು; ಹೆಚ್ಚುತ್ತಿದೆ ಅನುಮಾನ

road accident: ಮಹಾರಾಷ್ಟ್ರದ ನಾಸಿಕ್ ಮೂಲದ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಆಪ್ತ ಸಹಾಯಕ ಶುಕ್ರವಾರ (ಏ.17) ತಮ್ಮ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 55 ವರ್ಷದ ಶೆಲ್ಕೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಪತ್ನಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಂಧಿತರಾಗಿರುವ ಸ್ವಯಂಘೋಷಿತ ದೇವಮಾನವ ಅಶೋಕ್ ಖರತ್

ನಾಸಿಕ್, ಏ.18: ಮಹಾರಾಷ್ಟ್ರದ ನಾಸಿಕ್ ಮೂಲದ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ (Nashik godman Ashok Kharat) ಅವರ ಆಪ್ತ ಸಹಾಯಕ ಶುಕ್ರವಾರ (ಏ.17) ತಮ್ಮ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ಭೀಕರ ಕಾರು ಅಪಘಾತದಲ್ಲಿ (road accident) ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ (Maharashtra) ಅಹಲ್ಯಾನಗರ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಡಾ. ಜಿತೇಂದ್ರ ಶೆಲ್ಕೆ ಅವರ ಕಾರು ನಿಂತಿದ್ದ ಕಂಟೇನರ್ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

55 ವರ್ಷದ ಶೆಲ್ಕೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಪತ್ನಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರ ಪತ್ನಿ 50 ವರ್ಷದ ಅನುರಾಧ ಮೃತಪಟ್ಟರು.

ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಕಾರು ಕಂಟೇನರ್ ಟ್ರಕ್‌ ಒಳಗೆ ಸಿಲುಕಿ ನಜ್ಜುಗುಜ್ಜಾಗಿದೆ. ಘಟನೆ ನಡೆದಾಗ ಕುಟುಂಬವು ಸಂಭಾಜಿನಗರಕ್ಕೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಶೆಲ್ಕೆ ಅವರು ಖರಾತ್ ಸ್ವತಃ ಸ್ಥಾಪಿಸಿದ ಶಿವ್ನಿಕಾ ಟ್ರಸ್ಟ್‌ನ ಉಪಾಧ್ಯಕ್ಷರಾಗಿದ್ದರು. ಟ್ರಸ್ಟ್ ನಡೆಸಿದ ಭೂ ಖರೀದಿಗಳಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಖರಾತ್ ವಿರುದ್ಧ ಹಲವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಆರ್ಥಿಕ ದುರುಪಯೋಗ ಮತ್ತು ಭೂ ಕಬಳಿಕೆ ಸೇರಿದಂತೆ ಹಲವು ಕೃತ್ಯಗಳು ಬೆಳಕಿಗೆ ಬಂದ ನಂತರ, ಶಿವ್ನಿಕಾ ಟ್ರಸ್ಟ್ ಕೂಡ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.

ಪತಿಯನ್ನು ಹೊರಗೆ ಕೂರಿಸಿ, ಮಾದಕ ದ್ರವ್ಯ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ; ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಮತ್ತೊಂದು ಕಾಮಕಾಂಡ ಬಯಲು

ಈ ತಿಂಗಳ ಆರಂಭದಲ್ಲಿ, ಜೈಲಿನಲ್ಲಿ ಇರುವ ಸ್ವಯಂಘೋಷಿತ ದೇವಮಾನವ ಖರಾತ್ ಮತ್ತು ಅವರ ಆರೋಪಿತ ಸಹಚರರ ವಿರುದ್ಧ, ವಂಚನೆಯ ಮೂಲಕ ಆಸ್ತಿಗಳನ್ನು ಸಂಗ್ರಹಿಸಿರುವ ಆರೋಪಗಳ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದಾದ್ಯಂತ ಅನೇಕ ದಾಳಿಗಳನ್ನು ನಡೆಸುತ್ತಾ ಜಾರಿ ನಿರ್ದೇಶಾನಲಯ (ED) ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಆರಂಭಿಸಿತು.

ಅಧಿಕಾರಿಗಳ ಪ್ರಕಾರ, ಅಪಘಾತವು ವಾಹನದ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದೆ. ಘಟನೆಯಲ್ಲಿ ಅವರ 14 ವರ್ಷದ ಮಗನಿಗೆ ಗಂಭೀರ ಗಾಯಗಳಾಗಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೆಲ್ಕೆ ಸಾವಿನ ನಂತರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ರಾಜಕೀಯ ಪಿತೂರಿ ಇರಬಹುದು ಎಂದು ವಿಪಕ್ಷಗಳು ಶಂಕಿಸಿವೆ. ಜಿತೇಂದ್ರ ಶೆಲ್ಕೆ ಅವರ ಸಾವಿನ ಸುದ್ದಿ ಆಘಾತಕಾರಿಯಾಗಿದೆ. ಖರತ್ ಅಥವಾ ಅವರ ಆಪ್ತರು ಅಪಾಯದಲ್ಲಿರಬಹುದು ಎಂದು ಅನೇಕ ಜನರು ಮೊದಲೇ ಕಳವಳ ವ್ಯಕ್ತಪಡಿಸಿದ್ದರು. ಹಲವಾರು ಜನರು ಅಂತಹ ಭಯವನ್ನು ವ್ಯಕ್ತಪಡಿಸಿದ್ದರು. ಈಗ, ಈ ಘಟನೆಯು ಆ ಕಳವಳಗಳನ್ನು ದೃಢೀಕರಿಸುವಂತೆ ತೋರುತ್ತಿದೆ. ಇದು ಖರತ್ ಅವರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಶಿವಸೇನೆ (ಯುಬಿಟಿ) ನಾಯಕಿ ಸುಷ್ಮಾ ಅಂಧರೆ ಹೇಳಿದರು.

ಖರತ್ ಬಗ್ಗೆ ಕೆಲವು ಸಂಗತಿಗಳು ಹೊರಬರದಂತೆ ನೋಡಿಕೊಳ್ಳಲು ಅಪಘಾತವನ್ನು ಯೋಜಿಸಿರಬಹುದು? ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್ ಹೇಳಿದ್ದಾರೆ.

ಕಳೆದ ತಿಂಗಳು ವಿವಾಹಿತ ಮಹಿಳೆಯೊಬ್ಬರು ಮೂರು ವರ್ಷಗಳಿಂದ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ ನಂತರ ಖರತ್‌ನನ್ನು ಬಂಧಿಸಲಾಯಿತು.