ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳಂ ವಿಧಾನಸಭಾ ಚುನಾವಣೆಗೆ ದಿನಗಣನೆ: ಕಚೇರಿ ಮುಂದೆ ನಡೆದ ಸಿಪಿಐ ಬೆಂಬಲಿಗ ರೈತನ ಆತ್ಮಹತ್ಯೆ ಎಲ್‌ಡಿಎಫ್‌ಗೆ ಹಿನ್ನಡೆಯಾಗುತ್ತಾ?

ಸಿಪಿಐ ಬೆಂಬಲಿಗ ರೈತರೊಬ್ಬರು ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕಂನ ಥಲಯಾಝಂನಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗದ ಚುನಾವಣಾ ಸಮಿತಿ ಕಚೇರಿ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಚೆಲ್ಲಾಪ್ಪನ್ ಪುಲಿಕ್ಕಸೇರಿ ಎಂದು ಗುರುತಿಸಲಾಗಿದೆ. ಸಿಪಿಐ ಜಿಲ್ಲಾ ನಾಯಕರು ತಮ್ಮ ಜೀವನೋಪಾಯವನ್ನು ನಾಶಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ಕೇರಳ: ರೈತನೊಬ್ಬ ಕೇರಳದ (kerala) ಎಲ್‌ಡಿಎಫ್ (LDF) ಕಚೇರಿ ಮುಂದೆ ಆತ್ಮಹತ್ಯೆಗೆ (self harming) ಶರಣಾದ ಘಟನೆ ನಡೆದಿದೆ. ಕೊಟ್ಟಾಯಂ ಜಿಲ್ಲೆಯ ವೈಕಂನಲ್ಲಿರುವ ಥಲಯಾಝಂನಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗದ (Left Democratic Front) ಚುನಾವಣಾ ಸಮಿತಿ ಕಚೇರಿ ಬಳಿ ಸಿಪಿಐ ಬೆಂಬಲಿಗನಾಗಿದ್ದ ರೈತ ನೇಣು ಬಿಗಿದು ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದಾನೆ. ಮೃತರನ್ನು ಚೆಲ್ಲಾಪ್ಪನ್ ಪುಲಿಕ್ಕಸೇರಿ ಎಂದು ಗುರುತಿಸಲಾಗಿದೆ. ಸಿಪಿಐ ಜಿಲ್ಲಾ ನಾಯಕರು ತಮ್ಮ ಜೀವನೋಪಾಯವನ್ನು ನಾಶಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾನೆ ಎನ್ನಲಾಗಿದೆ.

ಈ ನಡುವೆ ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಈ ಘಟನೆ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; ಇಬ್ಬರು ಮಕ್ಕಳು ಸಾವು

ರಾಜ್ಯದಲ್ಲಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ಪಕ್ಷ (ಎಲ್‌ಡಿಎಫ್) ಅನ್ನು ಟೀಕಿಸಿದ ಅವರು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ವೈಕಂನ ಸಿಪಿಐ ಕಚೇರಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಆಘಾತಕಾರಿಯಾಗಿದೆ. ಎಲ್‌ಡಿಎಫ್ ಸರ್ಕಾರ ರೈತರನ್ನು ಸಾವಿಗೆ ದೂಡುವ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 9 ರಂದು ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ. ಒಟ್ಟು 140 ಶಾಸಕರ ಆಯ್ಕೆಗಾಗಿ ನಡೆಯುವ ಈ ಚುನಾವಣೆಯಲ್ಲಿ ವೈಕಂ ವಿಧಾನಸಭೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ದ ಸಿ.ಕೆ. ಆಶಾ ಪ್ರತಿನಿಧಿಸುತ್ತಿದ್ದಾರೆ. 2006 ರಿಂದ ಸಿಪಿಐ ಮೀಸಲು ಕ್ಷೇತ್ರವಾಗಿರುವ ಇಲ್ಲಿ ಈ ಹಿಂದೆ ಕೆ. ಅಜಿತ್ ಇಲ್ಲಿನ ಶಾಸಕರಾಗಿದ್ದರು.

ಕೇರಳದ ಮುಖ್ಯಮಂತ್ರಿ ಮತ್ತು ಸಿಪಿಐ (ಎಂ) ಅಭ್ಯರ್ಥಿ ಪಿಣರಾಯಿ ವಿಜಯನ್ ಸೋಮವಾರ ತಮ್ಮ ತವರು ಕ್ಷೇತ್ರವಾದ ಧರ್ಮಡಂನಲ್ಲಿ ರೋಡ್ ಶೋ ನಡೆಸಿದರು. ಬಳಿಕ ಧರ್ಮಡಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್‌ಡಿಎಫ್ ಸರ್ಕಾರದ ಹಲವಾರು ಪ್ರಮುಖ ಸಾಧನೆಗಳ ಬಗ್ಗೆ ವಿವರಿಸಿ 2021ರ ಎಲ್‌ಡಿಎಫ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಶೇ. 97 ರಷ್ಟು ಜಾರಿಗೆ ತರಲಾಗಿದೆ ಮತ್ತು ಇತರವು ಅನುಷ್ಠಾನದ ಮುಂದುವರಿದ ಹಂತಗಳಲ್ಲಿವೆ ಎಂದು ತಿಳಿಸಿದರು.

ಶಬರಿಮಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಕೇರಳ ಸರ್ಕಾರದ ನಿಲುವು ಉಲ್ಟಾ? ಸ್ತ್ರೀ ಪ್ರವೇಶದ ಬಗ್ಗೆ ಯೂ ಟರ್ನ್ ಸಾಧ್ಯತೆ

ಎಲ್‌ಡಿಎಫ್ ಸರ್ಕಾರದ 10 ನೇ ವರ್ಷದಲ್ಲಿ ಲೆಕ್ಕ ಪತ್ರ ವರದಿಯನ್ನು ಮಂಡಿಸಲಾಗುತ್ತಿದೆ. ಸಾರ್ವಜನಿಕರ ಮುಂದೆ ಲೆಕ್ಕಪತ್ರಗಳನ್ನು ಮಂಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವರದಿಗಳನ್ನು ಕಳೆದ 2017 ರಿಂದ ನಿಯಮಿತವಾಗಿ ಪ್ರಕಟಿಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author