ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur Crime: ಬಾಡಿಗೆ ಮನೆಯಲ್ಲಿ ಇದ್ದ ದಂಪತಿ ಶವವಾಗಿ ಪತ್ತೆ

ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಮೂಲದ ಅಶ್ವತ್ತಪ್ಪ (65) ಹಾಗೂ ಅವರ ಪತ್ನಿ ಹನುಮಕ್ಕ (55) ಅವರು, ಪೂಲಂಪಲ್ಲಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿ ದ್ದಾರೆ. ದಂಪತಿಗಳಿಬ್ಬರು ಕಳೆದ ಒಂದು ವರ್ಷದಿಂದ ಪೂಲಂಪಲ್ಲಿ ಗ್ರಾಮ ದಲ್ಲಿ ಬಾಡಿಗೆ ಮನೆ ಮಾಡಿ ಕೊಂಡು ಜೀವನ ಮಾಡುತ್ತಿದ್ದರು.

Chikkaballapur Crime: ಬಾಡಿಗೆ ಮನೆಯಲ್ಲಿ ಇದ್ದ ದಂಪತಿ ಶವವಾಗಿ ಪತ್ತೆ

-

Ashok Nayak
Ashok Nayak Dec 2, 2025 11:58 AM

ದಂಪತಿಗಳ ಸಾವಿಗೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಮೂಲದ ಅಶ್ವತ್ತಪ್ಪ (65) ಹಾಗೂ ಅವರ ಪತ್ನಿ ಹನುಮಕ್ಕ (55) ಅವರು, ಪೂಲಂಪಲ್ಲಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಂಪತಿಗಳಿಬ್ಬರು ಕಳೆದ ಒಂದು ವರ್ಷದಿಂದ ಪೂಲಂಪಲ್ಲಿ ಗ್ರಾಮ ದಲ್ಲಿ ಬಾಡಿಗೆ ಮನೆ ಮಾಡಿ ಕೊಂಡು ಜೀವನ ಮಾಡುತ್ತಿದ್ದರು.

ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದರು ಏನ್ ಆಯಿತೋ ಏನು ಕಳೆದ 2 ದಿನಗಳಿಂದ ಮನೆಯ ಬಾಗಿಲು ತೆಗೆಯದಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು, ಅನುಮಾನ ಗೊಂಡು ಕಿಟಕಿ ಬಾಗಿಲು ತೆರೆದು ನೋಡಿ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Davanagere Crime News: ಕೊಲೆ ಯತ್ನ ಆರೋಪಿಗೆ ಆಶ್ರಯ ನೀಡಿದ್ದ ಕಾಂಗ್ರೆಸ್‌ ನಾಯಕಿ ಸವಿತಾ ನಾಯ್ಕ್ ಬಂಧನ

ಪರಿಣಾಮವಾಗಿ, ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ದಂಪತಿ ಮನೆಯ ಬಾಗಿಲು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಗುಡಿಬಂಡೆ ಠಾಣೆಯ ಪೊಲೀಸ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಹೊರಬರಬೇಕಿದೆ.

ಇದು ಆರ್ಥಿಕ ಸಂಕಷ್ಟವೋ ಅಥವಾ ಕೌಟುಂಬಿಕ/ವೈಯಕ್ತಿಕ ಕಾರಣಗಳೋ ಎಂಬಯದರ ಕುರಿತು ಪೊಲೀಸ್ ಇಲಾಖೆ ತನಿಖೆಯನ್ನು ಮುಂದುವರೆಸಿದೆ.