Crime news: ಮಂಗಳೂರಿನಲ್ಲಿ ಕೇರಳದ ಗ್ಯಾಂಗ್ ಸೆರೆ, ಭಾರಿ ದುಷ್ಕೃತ್ಯಕ್ಕೆ ಸಂಚು ಬಯಲು
ಕಳೆದ ಜನವರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ಮುಸ್ಲಿಂ ಧರ್ಮಗುರು ಸಫ್ವಾನ್ ಎಂಬವರ ಮೇಲೆ ಗುಂಡು ಹಾರಿಸಲಾಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆಗೆ ಇಳಿದ ಪೊಲೀಸರು ಸತತ ಎರಡು ತಿಂಗಳ ಕಾರ್ಯಾಚರಣೆ ಬಳಿಕ ಕೇರಳ ಮೂಲಕ ನಟೋರಿಯಸ್ ಅಂತಾರಾಜ್ಯ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಬಂಧಿತ ಕೇರಳ ಗ್ಯಾಂಗ್

ಮಂಗಳೂರು: ಕೇರಳದಿಂದ ಬಂದು ಮಂಗಳೂರಿನಲ್ಲಿ (Mangaluru news) ಭಾರಿ ದುಷ್ಕೃತ್ಯಕ್ಕೆ ಸಂಚು (Crime news) ಎಸಗಿದ್ದ ಒಂದು ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ನಿಂದ ಪಿಸ್ತೂಲುಗಳು (Revolver), ಗುಂಡು (bullets), ಗಾಂಜಾ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳ ಮೂಲದ ಐವರು ನಟೋರಿಯಸ್ ಅಪರಾಧಿಗಳನ್ನು ಬಂಧಿಸಲಾಗಿದೆ. ವಾಮಂಜೂರಿನಲ್ಲಿ ಮುಸ್ಲಿಂ ಧರ್ಮಗುರುವಿನ ಮೇಲಾದ ಮಿಸ್ ಫೈರ್ ಪ್ರಕರಣದ ತನಿಖೆ ಮಾಡುವ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ.
ಕಳೆದ ಜನವರಿಯಲ್ಲಿ ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ಮುಸ್ಲಿಂ ಧರ್ಮಗುರು ಸಫ್ವಾನ್ ಎಂಬುವರ ಮೇಲೆ ಗುಂಡು ಹಾರಿಸಲಾಗಿತ್ತು. ಅಕ್ರಮ ಪಿಸ್ತೂಲ್ನಿಂದ ಅದ್ದು ಅಲಿಯಾಸ್ ಬದ್ರುದ್ಧೀನ್ ಎಂಬಾತ ಗುಂಡು ಹೊಡೆದ ಆರೋಪದ ಮೇಲೆ ಬಂಧಿತನಾಗಿದ್ದ. ಈ ಬಗ್ಗೆ ಹೆಚ್ಚಿನ ತನಿಖೆಗೆ ಇಳಿದ ಪೊಲೀಸರು ಸತತ ಎರಡು ತಿಂಗಳ ಕಾರ್ಯಾಚರಣೆ ಬಳಿಕ ಕೇರಳ ಮೂಲಕ ನಟೋರಿಯಸ್ ಅಂತಾರಾಜ್ಯ ಕ್ರಿಮಿನಲ್ಗಳನ್ನು ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಮೂಲದವರಾದ ಮನ್ಸೂರ್, ನೌಫಾಲ್, ಅಬ್ದುಲ್ ಲತೀಫ್ ಅಲಿಯಾಸ್ ತೋಕು ಲತೀಫ್, ಮೊಹಮ್ಮದ್ ಅಜ್ಗರ್, ಮೊಹಮ್ಮದ್ ಸಾಲಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಕಂಟ್ರಿಮೇಡ್ ಪಿಸ್ತೂಲ್, 6 ರೌಂಡ್ಸ್ ಲೈವ್ ಬುಲೆಟ್ಸ್, 12 ಕೆಜಿ ಗಾಂಜಾ, ಕಾರು, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಎಸಿಪಿ ಮನೋಜ್ ಕುಮಾರ್, ಇನ್ಸ್ಪೆಕ್ಟರ್ ರಫೀಕ್, ಪಿಎಸ್ಐ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳು ಈ ಕೇರಳ ಮತ್ತು ಕರ್ನಾಟಕದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
ಅದ್ದು ಅಲಿಯಾಸ್ ಬದ್ರುದ್ದಿನ್ ವಾಮಂಜೂರಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ. ಈತನ ಅಂಗಡಿಯಲ್ಲಿದ್ದ ಅಕ್ರಮ ಪಿಸ್ತೂಲಿನಿಂದ ಸಫ್ವಾನ್ ಎಂಬಾತನಿಗೆ ಮಿಸ್ ಆಗಿ ಗುಂಡೇಟು ಬಿದ್ದಿತ್ತು. ಈ ವಿಚಾರ ಪೊಲೀಸರ ಗಮನಕ್ಕೆ ಬರಬಾರದೆಂದು, ಗುಂಡೇಟು ತಿಂದ ಸಫ್ವಾನ್ ಇದು ಭಾಸ್ಕರ್ ಎಂಬಾತನಿಗೆ ಸೇರಿದ ಬಂದೂಕಾಗಿದ್ದು, ಆಟಿಕೆ ಪಿಸ್ತೂಲ್ ಎಂದುಕೊಂಡು ಸುಮ್ಮನೆ ನೋಡುತ್ತಿದ್ದಾಗ ಮಿಸ್ ಆಗಿ ಫೈರ್ ಆಗಿದೆ ಎಂದು ಸುಳ್ಳು ಕತೆ ಕಟ್ಟಿದ್ದ. ತನಿಖೆ ವೇಳೆ ಮಿಸ್ ಫೈರ್ ಆದ ಪಿಸ್ತೂಲ್ನ್ನು ಕೇರಳದಿಂದ ಇಮ್ರಾನ್ ಎಂಬಾತ ಅಕ್ರಮವಾಗಿ ಪಡೆದುಕೊಂಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಜಾಡು ಹಿಡಿದ ಪೊಲೀಸರು ಈ ಜಾಲವನ್ನು ಬೇಧಿಸಿದ್ದಾರೆ.
ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಸಿಸಿಬಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಪಿಸ್ತೂಲ್ಗಳನ್ನು ಯಾಕೆ ಸಂಗ್ರಹಿಸುತ್ತಿದ್ದರು, ಇವರ ಉದ್ದೇಶವೇನು? ಈ ಜಾಲದಲ್ಲಿ ಯಾರ್ಯಾರು ಇದ್ದಾರೆ ಎನ್ನುವುದರ ತನಿಖೆಗೆ ಇಳಿದಿದ್ದಾರೆ.
ಇದನ್ನೂ ಓದಿ: Police Firing: ಮಂಡ್ಯದಲ್ಲಿ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಸೆರೆ