ದಾಳಿಯಲ್ಲಿ ನೆತನ್ಯಾಹು ಹತ್ಯೆ? ಹಿಂಸಿಸಿ ಕೊಲ್ಲುತ್ತೇವೆ ಎಂದ ಇರಾನ್‌ಗೆ ಇಸ್ರೇಲ್ ಪಿಎಂ ಕಚೇರಿ ಹೇಳಿದ್ದೇನು?
Netanyahu death rumours: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕ್ಷೇಮವಾಗಿದ್ದಾರೆ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ. ನೆತನ್ಯಾಹು ಸಾವಿನ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವೆಲ್ಲಾ ಸುಳ್ಳು ಸುದ್ದಿ. ಪ್ರಧಾನಿ ಕ್ಷೇಮವಾಗಿದ್ದಾರೆ ಎಂದು ಪ್ರಧಾನಿ ಕಚೇರಿ ಸ್ಪಷ್ಟಪಡಿಸಿದೆ. ಆದರೂ ನೆತನ್ಯಾಹು ಎಲ್ಲಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು -
ಜೆರುಸಲೆಮ್, ಮಾ.15: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಕ್ಷೇಮವಾಗಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. ಸಾಮಾಜಿಕ ಮಾಧ್ಯಮ (social media) ಪೋಸ್ಟ್‌ಗಳಲ್ಲಿ ನೆತನ್ಯಾಹು ನಿಧನರಾಗಿದ್ದಾರೆ ಎಂದು ಸುದ್ದಿ ಹರಿದಾಡಿದ ನಂತರ ಪ್ರಧಾನಿ ಕಚೇರಿ ಈ ಸ್ಪಷ್ಟನೆ ನೀಡಿದೆ. ಇವೆಲ್ಲಾ ಸುಳ್ಳು ಸುದ್ದಿ. ಪ್ರಧಾನ ಮಂತ್ರಿಗಳು ಚೆನ್ನಾಗಿದ್ದಾರೆ ಎಂದು ಕಚೇರಿ ಉತ್ತರಿಸಿದೆ.
ವದಂತಿಗಳಿಗೆ ಕಾರಣವೇನು?
ಶುಕ್ರವಾರ (ಮಾ.13), ನೆತನ್ಯಾಹು ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ, ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಕುರಿತು ಪತ್ರಿಕಾಗೋಷ್ಠಿಯ ವಿಡಿಯೊವನ್ನು ಹಂಚಿಕೊಂಡಿದ್ದರು. ವಿಡಿಯೊದಲ್ಲಿ ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು, ನೆತನ್ಯಾಹು ಅವರ ಬಲಗೈಯಲ್ಲಿ ಆರು ಬೆರಳುಗಳನ್ನು ಗುರುತಿಸಿರುವುದಾಗಿ ಹೇಳಿದ್ದಾರೆ. ವಿಡಿಯೊ ಎಐನಿಂದ ರಚಿತವಾಗಿದೆ ಎಂಬ ವದಂತಿಗಳಿಗೆ ಇದು ಉತ್ತೇಜನ ನೀಡಿತು.
ನೆತನ್ಯಾಹು ತನ್ನ ಕೈಗಳನ್ನು ಎತ್ತಿದಾಗ, ಕಿರುಬೆರಳಿನ ಪಕ್ಕದಲ್ಲಿ ಹೆಚ್ಚುವರಿ ಮಾಂಸವು ಕಂಡುಬರುತ್ತದೆ. ಇದನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆರನೇ ಬೆರಳು ಎಂದು ಹೇಳಿಕೊಂಡಿದ್ದಾರೆ. ಇದು ಎಐನಿಂದ ರಚಿತವಾಗಿದ್ದು ಎಂದು ಬಳಕೆದಾರರು ಹೇಳಿದ್ದಾರೆ.
ಕ್ಯಾಂಡೇಸ್ ಓವೆನ್ಸ್ ಟ್ವೀಟ್:
Washington D.C is lying to the American people about what is going on in Iran.
— Candace Owens (@RealCandaceO) March 14, 2026
It is not going well.
Also where is Bibi Netanyahu? Why is his office releasing and deleting fake AI videos from him and why is there mass panic at the White House?
No, Benjamin Netanyahu does not have six fingers. The circled spots in those images are optical illusions from shadows, hand angles, or the palm's natural shape (like the hypothenar eminence) in still frames from his recent speech video. Full official footage from Israel's…
— Grok (@grok) March 15, 2026
ಅಮೆರಿಕದ ರಾಜಕೀಯ ವಿಮರ್ಶಕಿ ಕ್ಯಾಂಡೇಸ್ ಓವೆನ್ಸ್ ಅವರು ಬೀಬಿ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ನೆತನ್ಯಾಹು ಅವರನ್ನು ಅವರ ಅಡ್ಡಹೆಸರಿನಿಂದ ಉಲ್ಲೇಖಿಸಿದರು. ಅವರ ಕಚೇರಿ ಏಕೆ ಅವರಿಂದ ಬಿಡುಗಡೆಯಾಗಿದೆ ಎಂದು ಹೇಳಲಾದ ನಕಲಿ ಎಐ ವಿಡಿಯೊಗಳನ್ನು ಬಿಡುಗಡೆ ಮಾಡಿ ಮತ್ತೆ ಅಳಿಸುತ್ತಿದೆ? ಅಮೆರಿಕದ ಶ್ವೇತಭವನದಲ್ಲಿ ಭಾರಿ ಆತಂಕ ಏಕೆ ಉಂಟಾಗಿದೆ ಎಂದು ಅವರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಎರಡು ಇಸ್ರೇಲಿ ಧ್ವಜಗಳು ಸ್ಥಿರವಾಗಿದ್ದಾಗ, ಪರದೆಗಳು ಮಾತ್ರ ಏಕೆ ಅಲ್ಲಾಡಿದವು ಎಂದು ಬಳಕೆದಾರರೊಬ್ಬರು ಪ್ರಶ್ನೆ ಎತ್ತಿದರು. ಇದು ಎಐ ರಚಿತ ವಿಡಿಯೊ ಆಗಿದೆ ಎಂಬುದಾಗಿ ಅವರು ಹೇಳಿದರು. ಆದರೆ, ಈ ಹೇಳಿಕೆಯನ್ನು ಮತ್ತೊಬ್ಬ ಬಳಕೆದಾರರು ತಿರಸ್ಕರಿಸಿದರು. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ನಕಲಿ ಹಿನ್ನೆಲೆಗಳನ್ನು ಬಳಸುತ್ತಾರೆ. ಹಾಗಂತ ಅವರು ನಕಲಿ ಎಂದು ಅರ್ಥವಲ್ಲ ಎಂದು ಹೇಳಿದರು.
ಎಕ್ಸ್‌ನ ಎಐ ಚಾಟ್‌ಬಾಟ್ ಗ್ರೋಕ್ ಆರು ಬೆರಳುಗಳ ಕುರಿತಾದ ಹೇಳಿಕೆಗಳನ್ನು ಸತ್ಯ-ಪರಿಶೀಲಿಸಿತು. ಬೆಂಜಮಿನ್ ನೆತನ್ಯಾಹು ಅವರಿಗೆ ಆರು ಬೆರಳುಗಳಿಲ್ಲ. ಆ ಚಿತ್ರಗಳಲ್ಲಿನ ವೃತ್ತಾಕಾರದ ಚುಕ್ಕೆಗಳು ನೆರಳುಗಳು, ಇದು ಆಪ್ಟಿಕಲ್ ಭ್ರಮೆ ಎಂದು ತಿಳಿಸಿದೆ. ಇಸ್ರೇಲ್‌ನ ಸರ್ಕಾರಿ ಪತ್ರಿಕಾ ಕಚೇರಿಯ ಪೂರ್ಣ ಅಧಿಕೃತ ದೃಶ್ಯಗಳಲ್ಲಿ ಪ್ರತಿ ಕೈಗೆ ಐದು ಬೆರಳುಗಳನ್ನು ಸ್ಪಷ್ಟವಾಗಿ ತೋರಿಸುತ್ತವೆ.
ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ 16ನೇ ದಿನ
ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಜಂಟಿ ದಾಳಿಗಳನ್ನು ನಡೆಸಿದವು. ಯುದ್ಧದ ಮೊದಲ ದಿನದಂದು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಯಿತು. ಇರಾನ್ ತನ್ನ ತೈಲ ರಫ್ತು ಮಾಡುವ ನೆರೆಹೊರೆಯ ದೇಶಗಳ ವಿರುದ್ಧ ದಾಳಿಗಳನ್ನು ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
ವಿಶ್ವದ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಇದು ವ್ಯಾಪಾರವನ್ನು ಅಡ್ಡಿಪಡಿಸಿದೆ. ಕಿರಿದಾದ ಜಲಮಾರ್ಗವು ವಿಶ್ವದ ಪ್ರಮುಖ ಇಂಧನ ಮಾರ್ಗಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲ ಸಾಗಣೆಯನ್ನು ನಿರ್ವಹಿಸುತ್ತದೆ ಮತ್ತು ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ ವ್ಯಾಪಾರದ ಸರಿಸುಮಾರು 20 ಪ್ರತಿಶತವನ್ನು ನಿರ್ವಹಿಸುತ್ತದೆ.